ಶೃಂಗೇರಿಯ ಖ್ಯಾತ ವೈದ್ಯ ಡಾ.ಉರಾಳ್ಗೆ ಆಯುಷ್ ಎಕ್ಸಲೆನ್ಸ್ ಅವಾರ್ಡ್
– ವೆರಿಕೋಸ್ ಸಮಸ್ಯೆಗೆ ತಮ್ಮದೇ ಆಯುರ್ವೇದ ಚಿಕಿತ್ಸೆ ನೀಡುವ ಮೂಲಕ ಅನೇಕ ವರ್ಷದಿಂದ ಸೇವೆ
– ರಾಜ್ಯದ ಪ್ರಸಿದ್ಧ ವೈದ್ಯರಲ್ಲಿ ಇವರು ಒಬ್ಬರು
NAMMUR EXPRESS NEWS
ಶೃಂಗೇರಿ: ವೆರಿಕೋಸ್ ಖಾಯಿಲೆಗೆ ತಮ್ಮದೇ ಆಯುರ್ವೇದ ಚಿಕಿತ್ಸೆ ಮೂಲಕ ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೇ ಅನೇಕ ವರ್ಷದಿಂದ ಖಾಯಿಲೆ ಗುಣ ಮಾಡುವ ಶೃಂಗೇರಿಯ ಖ್ಯಾತ ವೆರಿಕೋಸ್ ತಜ್ಞ ಡಾ.ಎಂ.ವಿ ಉರಾಳ್ರವರಿಗೆ ಕರ್ನಾಟಕ ಹೇಲ್ತ್ ಕೇರ್ ಆಯುಷ್ ಎಕ್ಸಲೆನ್ಸ್ ಅವಾರ್ಡ್ ನೀಡಿದೆ.
ಮೂಲತಃ ಉಡುಪಿಯ ಕೋಟಾದ ಮಣೂರಿನವರಾದ ಇವರು ತಮ್ಮ ಆಯುರ್ವೇದ ಅಧ್ಯಯನದ ನಂತರ ಶೃಂಗೇರಿಯಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿ ವಿವಿಧ ದೀರ್ಘಕಾಲದ ಖಾಯಿಲೆಗೆ ಸರಳ ಗಿಡಮೂಲಿಕೆಗಳ ಮೂಲಕ ಔಷಧಿ ನೀಡುತ್ತಾ ಬಂದಿದ್ದಾರೆ.
ವೆರಿಕೋಸ್ ಸಮಸ್ಯೆಗೆ ಸೂಕ್ತ ಔಷಧಿ ಇಲ್ಲದಿರುವುದನ್ನು ಮನಗಂಡ ಇವರು ತಮ್ಮದೇ ಪರಿಕಲ್ಪನೆ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಮತ್ತು ಸತತ ಐದು ವರ್ಷಗಳ ಕಾಲ ಕ್ಲಿನಿಕಲ್ ಸಂಯೋಜನೆಯೊಂದಿಗೆ ಸಮಸ್ಯೆಗೆ ಶಸ್ತ್ರ ಚಿಕಿತ್ಸೆ ಇಲ್ಲದೇ ಖಾಯಿಲೆ ಗುಣಪಡಿಸುವ ಕ್ರಾಂತಿಕಾರಿ ಔಷಧಿಯನ್ನು ಕಂಡುಕೊಂಡು ಸೇವೆ ಸಲ್ಲಿಸುತ್ತಿರುವ ಇವರ ಸೇವೆಯನ್ನು ಗುರುತಿಸಿದ ಸಂಸ್ಥೆ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.