ದೀಪಾವಳಿಗೆ ಪಟಾಕಿ ಬ್ಯಾನ್ ಆಗುತ್ತಾ?!
– ಆರೋಗ್ಯ ತಜ್ಞರ ಪ್ರಸ್ತಾಪಕ್ಕೆ ಕೇಂದ್ರ ನಿಯಮ ಮಾಡುತ್ತಾ?
– ದೆಹಲಿಯಲ್ಲಿ ಈಗಾಗಲೇ ಪಟಾಕಿ ಬ್ಯಾನ್
NAMMUR EXPRESS NEWS
ನವ ದೆಹಲಿ: ದೀಪಾವಳಿಗೆ ಪಟಾಕಿ ಬ್ಯಾನ್ ಆಗುತ್ತಾ?!. ಹೀಗೊಂದು ಪ್ರಶ್ನೆ ಎದ್ದಿದೆ.
ಆರೋಗ್ಯ ತಜ್ಞರ ಪ್ರಸ್ತಾಪಕ್ಕೆ ಕೇಂದ್ರ ನಿಯಮ ಮಾಡುತ್ತಾ ಎಂಬ ಕುತೂಹಲ ಮೂಡಿದೆ. ದೆಹಲಿಯಲ್ಲಿ ಈಗಾಗಲೇ ಪಟಾಕಿ ಬ್ಯಾನ್ ಮಾಡಲಾಗಿದೆ.
ಪ್ರತಿ ವರ್ಷ ದೀಪಾವಳಿ ಹೊತ್ತಿಗೆ ಹಲವು ರಾಜ್ಯಗಳಲ್ಲಿ ಪಟಾಕಿ ನಿಷೇಧದ ಪ್ರಸ್ತಾಪ ಕೇಳಿ ಬರುತ್ತೆ. ಪರಿಸರ ವಾದಿಗಳು, ಆರೋಗ್ಯ ತಜ್ಞರು ಪಟಾಕಿ ನಿಷೇಧದ ಪರ ಮಾತನಾಡುತ್ತಾರೆ. ಕೆಲವರು ಹಸಿರು ಪಟಾಕಿ ಮಾತ್ರ ಬಳಸಬೇಕು ಅಂತಾನೂ ವಾದಿಸ್ತಾರೆ. ಆದರೀಗ ಇವರೆಲ್ಲರ ಬೇಡಿಕೆಗೆ ಅಸ್ತು ಎಂದಿದೆ ದೆಹಲಿ ಸರ್ಕಾರ.
ದೀಪಾವಳಿ ಸಮೀಪಿಸುತ್ತಿರುವ ಹೊತ್ತಲ್ಲೇ ದೆಹಲಿ ಸರ್ಕಾರ ಗಟ್ಟಿ ನಿರ್ಧಾರ ಮಾಡಿ ತನ್ನ ಆಡಳಿತ ವ್ಯಾಪ್ತಿಯ ರಾಜ್ಯದಲ್ಲಿ ಪಟಾಕಿಯನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆ ಪಟಾಕಿ ಮಾರಾಟ ಹಾಗೂ ಬಳಕೆಯನ್ನು 2025ರ ಜನವರಿ 1ರವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದೆಹಲಿ ಸರ್ಕಾರ ಖಡಕ್ ಆೇಶ ಮಾಡಿದೆ.
2025ರ ಜನವರಿ 1ರವರೆಗೆ ಆನ್ಲೈನ್ನಲ್ಲಿ ಪಟಾಕಿ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಲಾಗಿದೆ.
ಇತರೆ ರಾಜ್ಯಗಳಲ್ಲಿ ನಿಯಮ?: ದೇಶದ ವಿವಿಧ ರಾಜ್ಯದಲ್ಲಿ ಪಟಾಕಿಯಿಂದ ಪರಿಸರ ನಾಶ ಸಂಭವಿಸುತ್ತಿದೆ. ಇದರಿಂದ ಪರಿಸರ ಜತೆಗೆ ಅರೋಗ್ಯ ಹಾನಿ ಆಗುತ್ತಿದೆ. ಈ ಬಗ್ಗೆ ಕೇಂದ್ರ ಕೂಡ ಯೋಚನೆ ಮಾಡುತ್ತಿದೆ.