ಹುಚ್ಚು ಮಳೆ ಆಯ್ತು, ಇನ್ನು ಭೀಕರ ಬಿಸಿಲು, ಚಳಿ!
– ಅತಿಯಾದ ಚಳಿ, ಶೀತ ವಾತಾವರಣ ಸಾಧ್ಯತೆ
– ಬಿಸಿಲು ಕೂಡ ಅತೀ: ಹೀಗಾದ್ರೆ ಹೇಗೆ ಸ್ವಾಮಿ..?
– ಕೃಷಿ ಮೇಲೂ ಎಫೆಕ್ಟ್: ಪರಿಸರ ಹಾನಿ ಮಾಡಿದ್ದಕ್ಕೆ ಫಲ?
NAMMUR EXPRESS NEWS
ನವ ದೆಹಲಿ: ಈ ವರ್ಷ ಮಳೆ ಇಡೀ ದೇಶದಲ್ಲಿ ಅಧಿಕವಾಗಿಯೇ ದಾಖಲಾಗಿದೆ. ಅದರ ಜತೆಗೆ ಈ ಬಾರಿ ದೇಶದಲ್ಲಿ ಚಳಿಯೂ ಅಧಿಕವಾಗಿಯೇ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ವಿದ್ಯಮಾನವನ್ನು ಆರಂಭದಿಂದ ಗಮನಿಸಿ, ಇದು ರಾಷ್ಟ್ರದಾದ್ಯಂತ ಹೆಚ್ಚಿದ ಮಳೆ ಮತ್ತು ತಾಪಮಾನದಲ್ಲಿ ಗಮನಾರ್ಹ ಕುಸಿತವನ್ನು ಉಂಟುಮಾಡಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
ಭಾರತದ ವಿವಿಧ ಪ್ರದೇಶಗಳಲ್ಲಿ ವಿವಿಧ ಪ್ರಮಾಣದ ತಾಪಮಾನ ದಾಖಲಾಗಲಿದ್ದು, ಪರಿಣಾಮವೂ ವಿಭಿನ್ನವಾಗಿರಲಿದೆ. ಅಂದರೆ ಕೆಲವು ಪ್ರದೇಶಗಳಲ್ಲಿ ಅತಿಯಾದ ಚಳಿ ಇರಲಿದ್ದು, ಇನ್ನು ಕೆಲವೆಡೆ ಮಧ್ಯಮ ಪ್ರಮಾಣದಲ್ಲಿ ಶೀತ ವಾತಾವರಣ ಇರಲಿದೆ ಎಂದು ಇಲಾಖೆ ಹೇಳಿದೆ.
ಉತ್ತರ ಭಾರತದ ರಾಜ್ಯಗಳಾದ ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಾಪಮಾನ ವ್ರವಾಿ ಕುಸಿತವಾಗಲಿದ್ದು, 3 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ. ಇದರ ಜೊತೆಗೆ ಮಳೆ ಸುರಿಯುವ ಸಂಭವವೂ ಹೆಚ್ಚಾಗಿದೆ. ಈ ರೀತಿಯ ಹವಾಮಾನ ಚಳಿಗಾಲದ ಕೃಷಿ ಇರುವ ಪ್ರದೇಶಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತಿಳಿಸಿದೆ..
ಪೆಸಿಫಿಕ್ ಪ್ರದೇಶದ ಮೇಲ್ಮನಲ್ಲಿ ಕಡಿಮೆ ತಾಪಮಾನದಿಂದಾಗಿ ಲಾ ನಿನಾ ವಿದ್ಯಮಾನವು ಸಂಭವಿಸುತ್ತದೆ, ಇದು ಮಳೆ ಮತ್ತು ತೀವ್ರ ಚಳಿಗಾಲದಂತಹ ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ.
ಸಾಮಾನ್ಯವಾಗಿ ಲಾ ನಿನಾ ಏಪ್ರಿಲ್ ಮತ್ತು ಜೂನ್ನಲ್ಲಿ ಆರಂಭವಾಗಿ, ಅಕ್ಟೋಬರ್ನಿಂದ ಫೆಬ್ರುವರಿ ತಿಂಗಳಲ್ಲಿ ತೀವ್ರಗೊಳ್ಳುತ್ತದೆ. ಈ ಬಾರಿ ಲಾ ನಿನಾ ಮಳೆಗಾಲದಲ್ಲಿಯೇ ತನ್ನ ಪ್ರಭಾವವನ್ನು ತೋರಿದೆ. ಅದಕ್ಕೆ ಉದಾಹರಣೆ ಎಂದರೆ ದೇಶದಲ್ಲಿ ಮಳೆಗಾಲ ಇನ್ನೂ ಮುಂದುವರಿದಿರುವುದು.
ಲಾ ನಿನಾ ವಿದ್ಯಮಾನವು ಪೂರ್ವದ ಮಾರುತಗಳಿಂದ ತಳ್ಳಲ್ಪಡುತ್ತದೆ, ಇದು ಸಮುದ್ರದ ನೀರನ್ನು ಪಶ್ಚಿಮಕ್ಕೆ ತಳ್ಳುತ್ತದೆ, ಇದರಿಂದ ಸಮುದ್ರದ ಮೇಲ್ಮಯನ್ನು ತಂಪಾಗಿಸುತ್ತದೆ.