ಕರಾವಳಿ ಟಾಪ್ ನ್ಯೂಸ್
ಅಮ್ಮನ ರಕ್ಷಿಸಿದ ಬಾಲಕಿಗೆ ಪೊಲೀಸ್ ಗೌರವ!
– ಕಿನ್ನಿಗೋಳಿ: ರಿಕ್ಷಾ ಡಿಕ್ಕಿಯಾಗಿ ಅದರಡಿಗೆ ಬಿದ್ದು ಒದ್ದಾಡುತ್ತಿದ್ದ ತಾಯಿ ಉಳಿಸಿದ್ದ ಬಾಲಕಿ
* ಪಿಲಿಕುಳ ಕಂಬಳಕ್ಕೆ ಮತ್ತೊಂದು ವಿಘ್ನ!?
* ಕುಂದಾಪುರ: ಬಸ್ನಲ್ಲಿ ಚಿನ್ನದ ತಾಳಿ ಕಳ್ಳತನ!
* ಬೆಳ್ತಂಗಡಿ: ಕಾಡಾನೆಗಳಿಂದ ಜೀವ ಭಯ!
NAMMUR EXPRESS NEWS
ಕಿನ್ನಿಗೋಳಿ: ತಾಯಿಯನ್ನು ರಕ್ಷಿಸಿ ಸಾಹಸ ಮೆರೆದ ಬಾಲಕಿ ವೈಭವಿಗೆ ಮಂಗಳೂರು ಪೊಲೀಸ್ ಕಮಿಷನರ್ ಅವರಿಂದ ಸನ್ಮಾನ ಕಿನ್ನಿಗೋಳಿಯ ರಾಮನಗರ ಎಂಬಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ತಾಯಿಗೆ ರಿಕ್ಷಾ ಡಿಕ್ಕಿಯಾಗಿ ಅದರಡಿಗೆ ಬಿದ್ದು ಒದ್ದಾಡುತ್ತಿದ್ದ ತಾಯಿಯನ್ನು ಕೂಡಲೇ ಧಾವಿಸಿ ಬಂದು ತನ್ನ ಶಕ್ತಿಯನ್ನೆಲ್ಲ ಉಪಯೋಗಿಸಿ ರಿಕ್ಷಾ ಮೇಲಕ್ಕೆತ್ತಿ ರಕ್ಷಿಸಿದ ಬಾಲಕಿ ವೈಭವಿಯನ್ನು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ನೇತೃತ್ವದಲ್ಲಿ ಸನ್ಮಾನಿಸಿದರು.
ಬಾಲಕಿಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಬಾಲಕಿಯ ಸಮಯ ಪ್ರಜ್ಞೆ ಮತ್ತು ಧೈರಯವನು ಎಲ್ಲರೂ ಕೊಂಡಾಡಿದರು. ಸ್ವತಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸಿದ್ದರು.
* ಪಿಲಿಕುಳ ಕಂಬಳಕ್ಕೆ ಮತ್ತೊಂದು ವಿಘ್ನ!!
ಮಂಗಳೂರು : ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್.ಜೆ. ಭಂಡಾರಿಯವರು ಜಿಲ್ಲಾಧಿಕಾರಿಗೆ ಪತ್ರ ಬರೆದು ಪಿಲಿಕುಳವನ್ನು ಸೈಲೆಂಟ್ ಝೋನ್ ಘೋಷಿಸಬೇಕೆಂದು ಪತ್ರ ಬರೆದಿದ್ದಾರೆ.
ಈ ಮೂಲಕ ಪಿಲಿಕುಳ ಕಂಬಳಕ್ಕೆ ಮತ್ತೊಂದು ಕಂಟಕ ಎದುರಾಗಿದೆ.ಪಿಲಿಕುಳ ನಿಸರ್ಗಧಾಮ ಪಶ್ಚಿಮ ಘಟ್ಟಗಳ ಅಳಿವಿನಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಉದ್ದೇಶದಿಂದ ನಿರ್ಮಿಸಲಾಗಿದೆ. ಸದ್ಯ ಇಲ್ಲಿ 1250 ವನ್ಯಜೀವಿಗಳಿದೆ. ಸಾರ್ವಜನಿಕರಲ್ಲಿ ಮತ್ತು ವಿಶೇಷವಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು, ಸಂಶೋಧನೆ ಮತ್ತು ವೈಜ್ಞಾನಿಕ ಅಧ್ಯಯನಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ವನ್ಯಮೃಗಗಳನ್ನು ಇಲ್ಲಿ ರಕ್ಷಿಸಲಾಗುತ್ತಿದೆ. ಪಿಲಿಕುಳಕ್ಕೆ ಭೇಟಿ ನೀಡುವವರಿಗೆ ಮಾಲಿನ್ಯ ಮುಕ್ತ (ಗಾಳಿ, ಶಬ್ದ, ನೀರು, ಭೂಮಿ) ಪರಿಸರವನ್ನು ಒದಗಿಸುವುದು ಪ್ರಾಧಿಕಾರದ ಪ್ರಾಥಮಿಕ ಜವಾಬ್ದಾರಿ. ಅಲ್ಲದೆ ಸಂರಕ್ಷಣೆಯಲ್ಲಿರುವ ವನ್ಯ ಜೀವಿಗಳಿಗೆ ಶಬ್ದಮಾಲಿನ್ಯ ಮುಕ್ತ ಪರಿಸರವನ್ನು ಒದಗಿಸುವುದು ಅತೀ ಮುಖ್ಯ. ಆದ್ದರಿಂದ ಪಿಲಿಕುಳ ಮತ್ತು ಸುತ್ತಮುತ್ತಲಿನ 500 ಮೀ. ಪ್ರದೇಶವನ್ನು ಪರಿಸರ ಸಂರಕ್ಷಣಾ ಕಾಯ್ದೆ 1986ರನ್ವಯ “ಸೈಲೆಂಟ್ ಝೋನ್’ ಎಂದು ಘೋಷಿಸಲು ವಿನಂತಿಸುತ್ತೇನೆ ಎಂದು ಪತ್ರ ಬರೆಯಲಾಗಿದೆ.
ನವೆಂಬರ್ 17, 18ರಂದು ಪಿಲಿಕುಳದಲ್ಲಿ ಕಂಬಳ ನಡೆಸಲು ಜಿಲ್ಲಾಡಳಿತ ಉದ್ದೇಶಿಸಿದೆ. ಕಂಬಳದ ವೇಳೆ ಕೊಂಬು, ವಾದ್ಯ, ಸಮ್ಮೇಳಗಳ ಸ್ವರ ತಾರಕಕ್ಕೇರುತ್ತದೆ. ಅಲ್ಲದೆ ನಿರಂತರವಾಗಿ ಮೈಕ್ಗಳಲ್ಲಿ ಕಂಬಳ ರೆಫ್ರಿಗಳು ಅನೌನ್ಸ್ ಮಾಡುತ್ತಲೇ ಇರುತ್ತಾರೆ. ಕೋಣಗಳನ್ನು ತರುವ ವಾಹನಗಳ ಕಿರಿಕಿರಿ, ವಾುಾಲಿನ್ಯದಿದ ್ರಾಣಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಪಿಲಿಕುಳದಲ್ಲಿ ಜಿಲ್ಲಾಡಳಿತ ಕಂಬಳ ನಡೆಸಿದರೆ ಪ್ರಾಣಿಗಳಿಗೆ ಕಿರಿಕಿರಿ ಉಂಟಾಗುವುದು ಎಂಬ ಅಭಿಪ್ರಾಯ ಈ ಪತ್ರದ ಹಿಂದೆ ಅಡಗಿದೆ. ಆದ್ದರಿಂದ 13ವರ್ಷಗಳ ಬಳಿಕ ಜಿಲ್ಲಾಡಳಿತದಿಂದ ನಡೆಯುವ ಪಿಲಿಕುಳ ಕಂಬಳಕ್ಕೆ ಮತ್ತೊಂದು ವಿಘ್ನ ಎದುರಾಗಿರುವ ಲಕ್ಷಣ ಗೋಚರಿಸುತ್ತಿದೆ.
* ಕುಂದಾಪುರ: ಬಸ್ನಲ್ಲಿ ಚಿನ್ನದ ತಾಳಿ ಸರ ಕಳ್ಳತನ!
ಕುಂದಾಪುರ: ಮುಳ್ಳಿಕಟ್ಟೆಯಿಂದ ಕುಂದಾಪುರಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ 24 ಗ್ರಾಂ ತೂಕದ, 1.20 ಲಕ್ಷ ರೂ. ಮೌಲ್ಯದ ಚಿನ್ನದ ಕರಿಮಣಿಯನ್ನು ಯಾರೋ ಕಳ್ಳತನ ಮಾಡಿರುವ ಘಟನೆ ಸೆ.10 ರಂದು ಸಂಭವಿಸಿದೆ.
ಕುಂದಬಾರಂದಾಡಿ ಗ್ರಾಮದ ಸಾಕು (50) ಅವರು ಮುಳ್ಳಿಕಟ್ಟೆಯಲ್ಲಿ ಖಾಸಗಿ ಬಸ್ಸಿಗೆ ಬೆಳಗ್ಗೆ ಹತ್ತಿದ್ದು, 8.20 ಕ್ಕೆ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಬಸ್ಸಿನಿಂದ ಇಳಿದಾಗ ಕುತ್ತಿಗೆಯಲ್ಲಿ ಧರಿಸಿದ್ದ ಚಿನ್ನದ ಸರ ಕಳವಾಗಿದೆ.
ಇವರು ಕುಂದಾಪುರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಖಾಸಗಿಯಾಗಿ ಕೆಲಸ ಮಾಡುತ್ತಿದ್ದು, ಸೆ.10ರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಬರುತ್ತಿದ್ದ ವೇಳೆ ಬಸ್ಸಿನಲ್ಲಿ ಚಿನ್ನದ ಕರಿಮಣಿಯನ್ನು ಕಳವುಗೈದಿರುವುದಾಗಿದೆ.ಸಾಕು ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಬೆಳ್ತಂಗಡಿ: ಕಾಡಾನೆಗಳಿಂದ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ
ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ನಡ್ಯೈಲ್ ಬೈಲಿನಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ತಡರಾತ್ರಿ ಗದ್ದೆ, ತೋಟಗಳಿಗೆ ನುಗ್ಗಿರುವ ಎರಡು ಕಾಡಾನೆಗಳು ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ ಮಾಡಿವೆ.
ಬೀರ್ನಾಲಿ ಚಂದಪ್ಪ ಗೌಡ, ಲಿಂಗಪ್ಪ ಸಾಲಿಯಾನ್ ಕೂಡ್ಯೆ, ಆನಂದ ಗೌಡ ಹೊಸಮನೆ, ನಾರಾಯಣ ಗೌಡ ಗುತ್ತು, ಪಟ್ಲ ದೇಜಪ್ಪ ಗೌಡ, ಮುಂಡಾಜೆಕೋಡಿ ಕುಂಜಿರ ಗೌಡ ಮತ್ತಿತರರ ತೋಟ, ಗದ್ದೆಗಳಿಗೆ ನುಗ್ಗಿರುವ ಆನೆಗಳು 8 ತೆಂಗಿನ ಮರಗಳು, 10 ಡಿಕೆ ಮರ, 10ಕ್ಕ ಧಿಕ ಬಾಳೆಗಿಡಗಳನ್ನು ನಾಶ ಮಾಡಿವೆ. ಹಲವು ಕಡೆ ಭತ್ತದ ಗದ್ದೆಗಳಲ್ಲಿ ಓಡಾಡಿ ಪೈರನ್ನು ನೆಲಸಮ ಮಾಡಿವೆ. ಕೆರೆಗೆ ಇಳಿದು ಬಳಿಕ ಮೇಲಕ್ಕೇರಲಾರದೆ ಒದ್ದಾಡಿದ್ದು ಕೆರೆಯ ಅಂಚು ಜರಿದಿದೆ.
ಉಪವಲಯ ಅರಣ್ಯಾಧಿಕಾರಿ ರವಿಚಂದ್ರ ನೇತೃತ್ವದಲ್ಲಿ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೇ ಇದ್ದು, ಪರಿವೀಕ್ಷಣೆ ನಡೆಸಿದರು.
ರಾತ್ರಿ 2 ಗಂಟೆಗೆ ಆನೆಗಳನ್ನು ಓಡಿಸಲು ಪ್ರಯತ್ನಿಸಿದರೂ ಕಾಡಿನತ್ತ ತೆರಳಿಲ್ಲ. ಮುಂಜಾನೆ ಗಂಟೆಯವರೆಗೂ ತೋಟಗಳಲ್ಲೇ ಸುತ್ತಾಡುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.