ಮಳೆ ಅಬ್ಬರ: ಗಣಪತಿ ವಿಸರ್ಜನೆಗೆ ಅಡ್ಡಿ!
* ಮಳೆ ಆರ್ಭಟ ಭಾರಿ ಪ್ರಮಾಣದಲ್ಲಿ ಏರಿಕೆ
* ಶೃಂಗೇರಿಯಲ್ಲಿ ಬಿದ್ದ ಮನೆ: ಹಲವೆಡೆ ಅನಾಹುತ
NAMMUR EXPRESS NEWS
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ಬಲು ಜೋರಾಗ್ತಿದ್ದು ಗಣೇಶ ಮೂರ್ತಿ ವಿಸರ್ಜನೆಗೆ ಅಡ್ಡಿಯಾಗಿ ಪರಿಣಮಿಸಿದೆ. ಹೀಗೆ ಆರಂಭ ಆಗಿರುವ ಮಳೆ ಕೆಲವು ದಿನಗಳಲ್ಲಿ ಜಲಪ್ರಳಯ ಸೃಷ್ಟಿ ಮಾಡುವ ಮುನ್ಸೂಚನೆ ನೀಡಿದೆ.
ಕರ್ನಾಟಕದ ಪಾಲಿಗೆ 2024ರ ಮುಂಗಾರು ಮಳೆ ಅದೃಷ್ಟ ತರುವ ಎಲ್ಲಾ ಲಕ್ಷಣ ಕಾಣಿಸುತ್ತಿತ್ತು. ಆದರೆ ಆಗಿದ್ದೇ ಬೇರೆ, ಅಂದುಕೊಂಡ ರೀತಿಯೇ ಈ ವರ್ಷ ಮುಂಗಾರು ಮಳೆ ಕರ್ನಾಟಕದಲ್ಲಿ ಆರಂಭ ಆಗಿದ್ದು,ಹೀಗಿದ್ದಾಗ ಮಳೆ ಆರ್ಭಟವು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡು ಕೊನೆಗೆ ಏನು ಆಗಬಾರದೋ ಅದೇ ಆಗಿ ಹೋಗಿದೆ.
ಉತ್ತರ ಕರ್ನಾಟಕ & ಕರಾವಳಿ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯು ಸೇರಿ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಕಡೆ ಮಳೆ ಅಬ್ಬರಿಸುತ್ತಿದೆ. ಅದ್ರಲ್ಲೂ ಕಳೆದ ಕೆಲ ದಿನಗಳಿಂದ ನಿರಂತರ ಮುಂಗಾರು ಮಳೆ ಬೀಳುತ್ತಿರುವ ಕಾರಣ,ವಿಘ್ೇಶನಿೆ ,ವಿಘ್ನ ಎಂಬಂತೆ ಕಾಡತೊಡಗಿದೆ.
ಕಳೆದೊಂದು ವಾರದಿಂದ ಸುರಿದ ಮಳೆಗೆ ಮನೆಯೊಂದು ಕುಸಿದು ಎರಡು ಬೈಕ್ ಜಖಂವಾಗಿರುವ ಘಟನೆ ಶೃಂಗೇರಿ ತಾಲೂಕಿನ ಮೇಲು ನೆಮ್ಮಾರು ಗ್ರಾಮದಲ್ಲಿ ನಡೆದಿದೆ. ಮೇಲು ನೆಮ್ಮಾರು ಗ್ರಾಮದ ಎಂ. ಪಿ ಶೃಂಗೇಶ್ವರ್ ಭಟ್ ಎಂಬುವವರ ಮನೆ ಬುಧವಾರ ಬೆಳಿಗ್ಗೆ ಕುಸಿತವಾಗಿದ್ದು, ಮನೆಯೊಳಗೆ ಇದ್ದ ಎರಡು ಬೈಕ್ ಗಳು ಜಖಂವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.