ಒತ್ತುವರಿ ತೆರವು ವಿರೋಧಿಸಿ ಕಳಸ ಬಂದ್!
– ಬಂದ್ಗೆ ಸರ್ವ ಪಕ್ಷಗಳು,ಸಂಘಟನೆಗಳ ಬೆಂಬಲ
– ಪ್ರತಿಭಟನೆಯಲ್ಲಿ ಭಾಗಿಯಾದ ನೂರಾರು ರೈತರು
NAMMUR EXPRESS NEWS
ಕಳಸ: ರಾಜ್ಯ ಸರ್ಕಾರದ ಒತ್ತುವರಿ ತೆರವು ಖಂಡಿಸಿ ಕರೆ ನೀಡಿದ್ದ ಕಳಸ ತಾಲೂಕು ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ರೈತರ ಹೋರಾಟಕ್ಕೆ ಸರ್ವ ಪಕ್ಷಗಳು,ಕನ್ನಡ,ದಲಿತ ಸಂಘಟನೆಗಳು ಸೇರಿದಂತೆ ಹಲವು ಸಂಘ,ಸಂಸ್ಥೆ,ಸಂಘಟನೆಗಳಿಂದ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದವು. ಬೆಳಿಗ್ಗೆ 9 ರಿಂದ ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಳಸ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು ಈ ಮೂಲಕ ವರ್ತಕರು ಬೆಂಬಲ ಸೂಚಿಸಿದ್ದರು.
ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಈ ಕೂಡಲೇ ಒತ್ತುವರಿ ನಿರ್ಧಾರವನ್ನು ಕೈಬಿಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಲಾಯಿತು.