ಟಾಪ್ ನ್ಯೂಸ್ ಕರಾವಳಿ
ದುಬೈಯಿಂದ ಮನೆ ಕಟ್ಟಲು ಬಂದವರು ಹೆಣವಾದರು!
– ಹಳೆಯ ಮನೆ ಕೆಡವುತ್ತಿದ್ದ ವೇಳೆ ಗೋಡೆ ಕುಸಿದು ಇಬ್ಬರು ಮೃತ್ಯು!
– ಬಂಟ್ವಾಳ: ಆಕಸ್ಮಿಕವಾಗಿ ವಿದ್ಯುತ್ ಪ್ರಹವಿಸಿ ಯುವಕ ಸಾವು
– ಮೂಡುಬಿದಿರೆ: ಕೋಳಿ ತ್ಯಾಜ್ಯ ಸುರಿದವರಿಗೆ ದಂಡ..!
– ಬಂಟ್ವಾಳ: ಬ್ಯಾಂಕಿನೊಳಗಿಂದಲೇ ಲಕ್ಷಾಂತರ ರೂ. ಬ್ಯಾಗ್ ಕಳವು!
NAMMUR EXPRESS NEWS
ಮಂಗಳೂರು: ಮಂಗಳೂರು ನಗರದ ಜೈಲು ರಸ್ತೆಯ ಬಳಿ ಹಳೆ ಮನೆಯೊಂದನ್ನು ಕೆಡವುತ್ತಿದ್ದಾಗ ಗೋಡೆ ಕುಸಿದು ಇಬ್ಬರು ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಜೇಮ್ಸ್ ಸ್ಯಾಮುವೆಲ್ ಜತ್ತನ್ನ ಮತ್ತು ಅಶ್ವಿನ್ ಮೃತ ದುರ್ದೈವಿಗಳು.
ಗುರುವಾರ ಬೆಳಗ್ಗೆ ಘಟನೆ ನಡೆದಿದ್ದು, ಜೆಸಿಬಿ ಮೂಲಕ ಮನೆ ಕೆಡವುತ್ತಿದ್ದಾಗ ಕಾಂಕ್ರೀಟ್ ಲಿಂಟೆಲ್ ಸಹಿತ ಗೋಡೆ ಮೈಮೇಲೆ ಬಿದ್ದು ಮೃತಪಟ್ಟಿದ್ದಾರೆ. ಜೇಮ್ಸ್ ಅವರು ಹಳೆ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಿಸುವ ಉದ್ದೇಶದಿಂದ ಬಹರೈನ್ ನಿಂದ ಬಂದದ್ದರು. ಅ್ರಿನ್ ಪಕ್ಕದ ಮನೆಯವರಾಗಿದ್ದು ಸೋದರ ಸಂಬಂಧಿಯಾಗಿದ್ದರು.
ಬಂಟ್ವಾಳ: ಆಕಸ್ಮಿಕವಾಗಿ ವಿದ್ಯುತ್ ಪ್ರಹವಿಸಿ ಯುವಕ ಸಾವು
ಬಂಟ್ವಾಳ: ಆಕಸ್ಮಿಕವಾಗಿ ವಿದ್ಯುತ್ ಪ್ರಹವಿಸಿ ಎಲೆಕ್ಟ್ರೀಷಿಯನ್ ಓರ್ವರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ, ಉರ್ಕುಂಜ ಎಂಬಲ್ಲಿ ನಡೆದಿದೆ. ಉಳಿ ಗ್ರಾಮದ ನೆಕ್ಕಿಲ ಪಲ್ಕೆ ನಿವಾಸಿ ಸದಾನಂದ ಗೌಡ ಅವರ ಪುತ್ರ ದೇವದಾಸ್ (35) ಮೃತಪಟ್ಟ ದುರ್ದೈವಿ.
ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆಗಿರುವ ದೇವದಾಸ್ ಗುರುವಾರ ಸಂಜೆ ಉಳಿ ಗ್ರಾಮದ, ಉರ್ಕುಂಜ ಎಂಬಲ್ಲಿ ಮನೆಯೊಂದರ ವಯರಿಂಗ್ ಕೆಲಸ ಮಾಡಿ, ಮನೆಯ ಹೊರಗಡೆಯಲ್ಲಿದ್ದ ಮೈನ್ ಸ್ವಿಚ್ ಬಳಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರಹವಿಸಿದೆ. ಪರಿಣಾಮ ಕೆಳಗೆ ಬಿದ್ದು ಗಾಯಗೊಂಡಿದ್ದರು ಎನ್ನಲಾಗಿದೆ. ತಕ್ಷಣ ಸ್ಥಳದಲ್ಲಿದ್ದವರು ಗಾಯಾಳುವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿದಾಗ ದೇವದಾಸ್ ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.
ಬಂಟ್ವಾಳ: ಮುಂಬಾಗಿಲ ಚಿಲಕ ಮುರಿದು ಕಳ್ಳತನ!
ಬಂಟ್ವಾಳ: ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದುವಿನ ಮನೆಯೊಂದರಲ್ಲಿ ಯಾರು ಇಲ್ಲದ ವೇಳೆ ಮುಂಬಾಗಿಲ ಚಿಲಕ ಮುರಿದು ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ ಮೌಲ್ಯದ ನಗ ನಗದು ಕಳವುಗೈದಿರುವ ಬಗ್ಗೆ ಗುರುವಾರ ಬೆಳಕಿಗೆ ಬಂದಿದೆ.
ಪುದು ಗ್ರಾಮದ ಪೆರಿಯಾರ್ ಬಾಲ್ಪಬೊಟ್ಟು ನಿವಾಸಿ ಮಹಮ್ಮದ್ ಇಟ್ಬಾಲ್ ಅವರು ಪತ್ನಿ ಜೊತೆ ಸೆ. 8 ರಂದು ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಅಲ್ಲಿಂದ ಸೆ. 12 ರಂದು ಮನೆಗೆ ವಾಪಸು ಬಂದಿದ್ದು, ಮನೆಯ ಮುಂಬಾಗಿಲ ಚಿಲಕ ಮುರಿದು ಹಾಕಿದ್ದು ಬಾಗಿಲು ತೆರದ ಸ್ಥಿತಿಯಲ್ಲಿತ್ತು. ಒಳಗಡೆ ಹೋಗಿ ನೋಡಿದಾಗ ಕೋಣೆಯ ಬಾಗಿಲು ತೆರದು ಅಲ್ಲಿದ್ದ ಗೋದ್ರೇಜ್ ಬೀಗ ಒಡೆಯಲಾಗಿತ್ತು. ಅದರೊಳಗೆ ಇರಿಸಲಾಗಿದ್ದ ರೂ.1,70,000 ನಗದು ಹಾಗೂ 36 ಗ್ರಾಂ ತೂಕದ ರೂ 1,80,000 ಮೌಲ್ಯದ ಬಂಗಾರದ ಪೆಂಡೆಂಟ್ ಇರುವ ಸರ, ಕಪಾಟಿನ ಮೇೆ ಇದ 4,000 ರೂಪಾಯ ಮೌಲ್ಯದ ವಿವೋ ಮೊಬೈಲ್ ಫೋನ್ ಸೇರಿ ಒಟ್ಟು 3.54 ಲಕ್ಷ ರೂಪಾಯಿ ಮೌಲ್ಯದ ನಗ ನಗದು ಕಳವಾಗಿದೆ ಎಂದು ಅವರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ನಿರೀಕ್ಷಕ ಶಿವಕುಮಾರ್, ಠಾಣಾಧಿಕಾರಿಗಳಾದ ಹರೀಶ್ ಮತ್ತು ಮೂರ್ತಿ ಅವರು ಬೇಟಿ ನೀಡಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದೆ.
ಮೂಡುಬಿದಿರೆ: ಕೋಳಿ ತ್ಯಾಜ್ಯ ಸುರಿದವರಿಗೆ ದಂಡ..!
ಮೂಡುಬಿದಿರೆ: ಬೆಳುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋಳಿಯ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳದಲ್ಲಿ ಸುರಿಯುತ್ತಿದ್ದ ವ್ಯಕ್ತಿಗಳನ್ನು ಹಿಡಿದು ರೂ 5000 ದಂಡ ವಿಧಿಸಿದೆ.
ಬೆಳುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಹಮ್ಮದ್ ಶರೀಫ್ ಎಂಬವರು ತಮ್ಮ ಸಹಚರರೊಂದಿಗೆ ಕೋಳಿ ತ್ಯಾಜ್ಯವನ್ನು ಕಲ್ಲೋಳಿ ಸೇತುವೆಗೆ ಸುರಿಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪ೦ಚಾಯತ್ ಅಭಿವೃದ್ಧಿ ಅಧಿಕಾರಿ ಭೀಮ ನಾಯಕ್ ಬಿ, ಅಧ್ಯಕ್ಷ ಸುರೇಶ್ ಪೂಜಾರಿ ಮತ್ತು ಸಿಬಂಧಿ ರಮೇಶ್ ಅವರು ಸ್ಥಳಕ್ಕೆ ತೆರಳಿ ಇನ್ನು ಮುಂದೆ ಈ ಸ್ಥಳದಲ್ಲಿ ತ್ಯಾಜ್ಯ ಸುರಿಯದಂತೆ ಎಚ್ಚರಿಕೆ ನೀಡಿ ದಂಡ ವಿಧಿಸಿದ್ದಲ್ಲದೆ, ಮುಂದೆ ತ್ಯಾಜ್ಯ ಸುರಿದರೆ ಕೋಳಿ ಅಂಗಡಿಯ ಪರವಾನಿಗೆಯನ್ನು ರದ್ದು ಪಡಿಸಲಾಗುವುದೆಂದು ಅಫಿಡವಿಟ್ ಮಾಡಿಕೊಳ್ಳಲಾಯಿತು.
ಪುತ್ತೂರು: ಚಾಲಕ ಅಸ್ವಸ್ಥಗೊಂಡು ಅಂಗಡಿಗೆ ನುಗ್ಗಿದ ಕಾರು!
ಪುತ್ತೂರು: ಚಾಲಕ ಅಸ್ವಸ್ಥಗೊಂಡ ಪರಿಣಾಮ ನಿಯಂತ್ರಣ ತಪ್ಪಿದ ಕಾರು ಹಿಮ್ಮುಖವಾಗಿ ಚಲಿಸಿ ಅಂಗಡಿಗಳಿಗೆ ನುಗ್ಗಿದ್ದು, ವ್ಯಕ್ತಿ ಮತ್ತು ಮಹಿಳೆಯೊಬ್ಬರು ಗಾಯಗೊಂಡ ಘಟನೆ ಪುತ್ತೂರಿನ ಕಿಲ್ಲೆ ಮೈದಾನದ ಬಳಿ ನಡೆದಿದೆ.
ಕಿಲ್ಲೆ ಮೈದಾನದ ಒಳಗೆ ನಿಲ್ಲಿಸಿದ್ದ ಕಾರನ್ನು ಹೊರ ತೆಗೆಯುವ ವೇಳೆ ಚಾಲಕ ಅಸ್ವಸ್ಥಗೊಂಡಿದ್ದರು. ಈ ಸಂದರ್ಭ ಕಾರು ಹಿಮ್ಮುಖವಾಗಿ ಚಲಿಸಿ ಪಕ್ಕದಲ್ಲಿದ್ದ ತಾತ್ಕಾಲಿಕ ಅಂಗಡಿಗೆ ಡಿಕ್ಕಿಯಾಗಿದೆ. ಅಂಗಡಿಯಲ್ಲಿದ್ದ ರಮೇಶ್ ಮತ್ತು ಮಹಿಳೆಯೊಬ್ಬರಿ ಾಯವಾಗಿದೆ. ಗಾಯಾಳುಗಳನ್ನು ಪುತ್ತೂರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಟ್ವಾಳ: ಬ್ಯಾಂಕಿನೊಳಗಿಂದಲೇ ಲಕ್ಷಾಂತರ ರೂ. ಬ್ಯಾಗ್ ಕಳವು!
ಬಂಟ್ವಾಳ: ನಿವೃತ್ತ ಸೈನಿಕ,ಹಿರಿಯ ನಾಗರಿಕರೋರ್ವರು ಬಿಸಿರೋಡಿನ ರಾಷ್ಟ್ರೀಕೃತ ಬ್ಯಾಂಕಿನಿಂದ ಹಣವನ್ನು ಡ್ರಾ ಮಾಡಿದ ಕೆಲವೇ ಸಮಯದಲ್ಲಿ ಲಕ್ಷಾಂತರ ರೂ ನಗದು ಇದ್ದ ಬ್ಯಾಗ್ ನ್ನು ಕಳವಾದ ಘಟನೆ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ತಾಲೂಕಿನ ರೈಮಂಡ್ ಲೋಬೋ ನಗರದ ಗ್ಲಾಡಿರಾ ನಿವಾಸಿಯಾಗಿರುವ ಅಂಬೋಸ್ ಡಿಸೋಜ ಅವರ ಲಕ್ಷಾಂತರ ರೂ ಇದ್ದ ಬ್ಯಾಗ್ ಕಳವಾಗಿದೆ. ಬಿ.ಮೂಡ ಗ್ರಾಮದ ಬಿಸಿರೋಡಿನಲ್ಲಿರುವ ಎಸ್.ಬಿ.ಐ(SBI) ಬ್ಯಾಂಕ್ ನ ಒಳಗಿನಿಂದ ರೂ.1,30,000 ನಗದು ಕಳವಾಗಿದೆ.
ಅಂಬೋಸ್ ಅವರು ನಿವೃತ್ತ ಸೈನಿಕರಾಗಿದ್ದು, ಅವರು ಬರುವ ಪೆನ್ಸನ್ ಹಣವನ್ನು ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಅವರ ಖಾತೆಯಿಂದ ಡ್ರಾ ಮಾಡುತ್ತಿದ್ದರು. ಒಟ್ಟು 50 ಸಾವಿರ ಹಣವನ್ನು ಬ್ಯಾಗ್ ಒಂದರಲ್ಲಿ ಇರಿಸಿಕೊಂಡು ಬಿಸಿರೋಡಿನ ಎಸ್.ಬಿ.ಐ ಬ್ಯಾಂಕ್ ಗೆ ಬಂದಿದ್ದರು. ಇಲ್ಲಿನ ಇವರ ಖಾತೆಯಿಂದ 80 ಸಾವಿರ ಹಣವನ್ನು ಡ್ರಾ ಮಾಡಿ, ಒಟ್ಟು 1,30,000 ಹಣವನ್ನು ಒಂದೇ ಬ್ಯಾಗ್ ನಲ್ಲಿ ಹಾಕಿ ಬ್ಯಾಂಕ್ ನ ಟೇಬಲ್ ಮೇಲೆ ಇಟ್ಟು, ಪಾಸ್ ಬುಕ್ ಎಂಟ್ರಿ ಮಾಡಲು ಕೌಂಟರ್ ಬಳಿ ಹೋಗಿದ್ದರು.
ಅಲ್ಲಿ ಎಂಟ್ರಿ ಮಾಡಿಸಿ ವಾಪಸು ಟೇಬಲ್ ಕಡೆ ಬಂದಾಗ ಬ್ಯಾಗ್ ಅಲ್ಲಿರದೆ ಕಾಣೆಯಾಗಿತ್ತು. ಇದೀಗ ಪಾಸ್ ಬುಕ್ ಹಾಗೂ ದಾಖಲೆಗಳಿದ್ದ ಕಳವಾದ ಬ್ಯಾಗ್ ಬಿಸಿರೋಡು ಕೈಕುಂಜೆ ರಸ್ತೆಯಲ್ಲಿ ಸಿಕ್ಕಿದೆ. ಕಳವು ಆಗಿರುವ ಹಣವನ್ನು ಮತ್ತು ಕಳವು ಮಾಡಿದ ಕಳ್ಳರನ್ನು ಪತ್ತೆ ಮಾಡಿಕೊಡಿ ಎಂದು ಅಂಬೋಸ್ ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.