ಶೃಂಗೇರಿ ಸಾರ್ವಜನಿಕ ಗಣೇಶ ವಿಸರ್ಜನೆ
– ಅದ್ದೂರಿ ಮೆರವಣಿಗೆಯೊಂದಿಗೆ ಗಣಪತಿ ವಿಸರ್ಜನೆ ಮಾಡಿದ ಸಾರ್ವಜನಿಕರು
– ಎಲ್ಲರ ಗಮನ ಸೆಳೆದ ಶ್ರೀರಾಮ ಟ್ಯಾಬ್ಲೋ
NAMMUR EXPRESS NEWS
ಶೃಂಗೇರಿ: ಶೃಂಗೇರಿ ಪಟ್ಟಣದ ಗೌರಿಶಂಕರ ಸಭಾಂಗಣದಲ್ಲಿ ಕಳೆದ ಏಳು ದಿನಗಳ ಕಾಲ ನಡೆದ ಶ್ರೀಮಹಾಗಣಪತಿ ಸೇವಾ ಸಮಿತಿ ಶೃಂಗೇರಿ ಹಾಗೂ ಪಟ್ಟಣ ಪಂಚಾಯ್ತಿ ಶೃಂಗೇರಿಯ 66ನೇ ವರ್ಷದ ಸಾರ್ವಜನಿಕ ಗಣೇಶೋತ್ಸವಕ್ಕೆ ಅದ್ದೂರಿ ತೆರೆಬಿದ್ದಿದೆ.
ಶೃಂಗೇರಿ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮಾಡುವ ಮೂಲಕ ಗಣಪತಿ ವಿಸರ್ಜಿಸಲಾಗಿದೆ. ವಿಸರ್ಜನಾ ಮೆರವಣಿಗೆಯಲ್ಲಿ ನೂರಾರು ಸಾರ್ವಜನಿಕರು ಭಾಗವಹಿಸಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಪೋಲೀಸ್ ಇಲಾಖೆಯಿಂದ ಬಿಗಿಬಂದೋಬಸ್ತ್ ಕಲ್ಪಿಸಲಾಗಿತ್ತು.
ಮೆರವಣಿಗೆಯಲ್ಲಿ ಿಶೇಷವೇನಿತ್ತು..?
ಗೌರಿಶಂಕರ್ ಸಂಭಾಂಗಣದಿಂದ ಹೊರಟ ಮೆರವಣಿಗೆ ಹರಿಹರ ಬೀದಿ ಮುಖಾಂತರ ಮುಖ್ಯ ಬಸ್ ನಿಲ್ದಾಣ ಮಾರ್ಗವಾಗಿ ಹೊಸ್ಕೆರೆಯವರೆಗೆ ತೆರಳಿ ನಂತರ ಅದೇ ಮಾರ್ಗವಾಗಿ ಕಟ್ಟೆಬಾಗಿಲಿಗೆ ಬಂದು ಭಾರತೀ ಬೀದಿ ಮುಖಾಂತರ ಪಟ್ಟದ ಸ್ವಾಗತ ಮಂಟಪ ವೆಲ್ಕಂ ಗೇಟ್ವರೆಗೂ ಸಾಗಿ ನಂತರ ಅದೇ ಮಾರ್ಗವಾಗಿ ಶ್ರೀಮಠದ ಎದುರು ಬಂದು ನಂತರ ವಿಸರ್ಜನೆ ಕಾರ್ಯ ನಡೆಯಿತು.
ಮೆರವಣಿಗೆಯುದ್ದಕ್ಕೂ ಡಿ ಜೆ ,ಕುಣಿತದಲ್ಲಿ ಸಾರ್ವಜನಿಕರು ಪಾಲ್ಗೊಂಡರು. ಉತ್ಸವಕ್ಕಾಗಿ ಯೋಜಿಸಿದ್ದ ಶ್ರೀರಾಮ ಟ್ಯಾಬ್ಲೋ ಎಲ್ಲರ ಮನಸೂರೆಗೊಂಡಿತು. ಗಣಪತಿ ವಿಸರ್ಜನಾ ಮೆರವಣಿಗೆಗೆ ಶ್ರೀರಾಮನೇ ಮುಂದಾಳತ್ವ ವಹಿಸಿ ಸಾಗಿದಂತೆ ಭಾಸವಾಗುತ್ತಿತ್ತು.