ಚಿಕ್ಕಮಗಳೂರಿನಲ್ಲಿ ಪ್ಯಾಲೇಸ್ತೇಸ್ ಧ್ವಜ ಹಿಡಿದು ಓಡಾಟ!
– ಬೈಕ್ನಲ್ಲಿ ಓಡಾಡಿದ ಅನ್ಯ ಕೋಮಿನ ಯುವಕರು
– ಯುವಕರನ್ನು ಬಂಧಿಸುವಂತೆ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
– ಕೊಪ್ಪಳ, ದಾವಣಗೆರೆಯಲ್ಲೂ ಗದ್ದಲ
– ಮಂಗಳೂರಲ್ಲಿ ಮಸೀದಿಗೆ ಕಲ್ಲು: ಭಾರೀ ಬಂದೋಬಸ್ತ್
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಮುಸ್ಲಿಂ ಯುವಕರು ಪ್ಯಾಲೆಸ್ತೀನ್ ಧ್ವಜ ಹಿಡಿದು ದ್ವಿಚಕ್ರ ವಾಹನದ ಮೇಲೆ ಓಡಾಡಿರುವ ವೀಡಿಯೋ ವೈರಲ್ ಆಗಿದೆ.
ಪ್ಯಾಲೇಸ್ತೀನ್ ಧ್ವಜ ಹಿಡಿದು ಓಡಾಡಿದ ಮುಸ್ಲಿಂ ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಿಕ್ಕಮಗಳೂರು ನಗರ ಪೋಲೀಸ್ ಠಾಣೆಯ ಮುಂದೆ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ದೂರು ದಾಖಲಿಸಿದ್ದಾರೆ.
ಚಿಕ್ಕಮಗಳೂರು ನಗರದೆಲ್ಲಡೆ ಈದ್ ಮಿಲಾದ್ ಮೆರವಣಿಗೆಗೆ ಸಿದ್ದತೆ ನಡೆಯುತ್ತಿರುವ ವೇಳೆ ನಗರದ ಪ್ರಮುಖ ಬೀದಿಗಳಲ್ಲಿ ಪ್ಯಾಲೇಸ್ತೇನ್ ಧ್ವಜ ಹಿಡಿದು ಓಡಾಡಿದ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಠಿಸಿದೆ.
ಚಿಕ್ಕಮಗಳೂರು ನಗರದಲ್ಲಿ ಹೀಗೆ ಓಡಾಡಿದ ಮುಸ್ಲಿಂ ಯುವಕರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಗ್ಿಸಿ ಹಿದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸಂತೋಷ್ ಕೋಟ್ಯಾನ್,ಶ್ಯಾಂ ವಿ ಗೌಡ,ಕೃಷ್ಣ, ಅಮಿತ್,ರಾಜೇಶ್,ಮಂಜು,ಕಿಟ್ಟಿ, ಜಾನಕಿ ರಾಮ್ ಮತ್ತಿತರರು ಇದ್ದರು.
ಕೊಪ್ಪಳ, ದಾವಣಗೆರೆಯಲ್ಲೂ ಘಟನೆ?
ಕೊಪ್ಪಳ, ದಾವಣಗೆರೆಯಲ್ಲೂ ಪ್ಯಾಲೇಸ್ತೇಸ್ ಧ್ವಜ ಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಶಾಂತಿಯಿಂದ ಆಚರಣೆ ಮಾಡಬೇಕಾದ ಹಬ್ಬದ ವೇಳೆ ಇಂತಹ ಕೃತ್ಯ ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕೊಪ್ಪಳದ ಗಂಗಾವತಿಯಲ್ಲಿ ಈದ್ ಮಿಲಾದ್ ಬ್ಯಾನರ್ನಲ್ಲಿ ಫ್ರೀ ಪ್ಯಾಲೆಸ್ತೇನ್ ಬರಹ ಹಾಕಲಾಗಿದ್ದು ಹಿಂದೂ ಸಂಘಟನೆಗಳ ವಿರೋಧದ ಬಳಿಕ ಫ್ರೀ ಪ್ಯಾಲೆಸ್ತೇನ್ ಬರಹಕ್ಕೆ ಪ್ಯಾಚ್ ಹಾಕಲಾಗಿದೆ. ಬ್ಯಾನರ್ನ ಒಂದು ಭಾಗದಲ್ಲಿ ‘ಫ್ರೀ ಪ್ಯಾಲೆಸ್ತೇನ್’ ಬರಹ ಹಾಕಲಾಗಿತ್ತು. ಇದಕ್ಕೆ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಫ್ರೀ ಪ್ಯಾಲೆಸ್ತೇನ್ ಎಂಬ ಬರಹಕ್ಕೆ ಪ್ಯಾಚ್ ಹಾಕಿದ್ದಾರೆ.