ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ: ಕಿಗ್ಗಾದಲ್ಲಿ ಸಂಭ್ರಮ!
* ಕಿಗ್ಗಾದಲ್ಲಿ ಜಾರುಗಂಬ ಸ್ಪರ್ಧೆ ಆಯೋಜನೆ:
* ಬಜರಂಗದಳ ಘಟಕಕ್ಕೆ ಜನರ ಶಹಬ್ಬಾಸ್ ಗಿರಿ
NAMMUR EXPRRSS NEWS
ಶೃಂಗೇರಿ:ಕಿಗ್ಗಾದಲ್ಲಿ ಜಾರುಗಂಬ ಸ್ಪರ್ಧೆ ಆಯೋಜನೆ
ವಿಶ್ವಹಿಂದೂ ಪರಿಷದ್ ಸ್ಥಾಪನಾ ದಿನದ ಅಂಗವಾಗಿ ಆಯೋಜನೆಗೊಂಡ ಸ್ಪರ್ಧೆಗಳು
ಸಾಂಪ್ರದಾಯಿಕ ಕ್ರೀಡೆಗಳ ಆಯೋಜಿಸಿದ ಬಜರಂಗದಳ ಘಟಕಕ್ಕೆ ಶಹಬ್ಬಾಸ್..!!
ಶೃಂಗೇರಿ: ತಾಲೂಕಿನ ಕಿಗ್ಗಾದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಿಗ್ಗಾ ಘಟಕದ ವತಿಯಿಂದ ಮೂರನೇ ವರ್ಷದ ಜಾರುಗಂಬ,ರಾಧಾಕೃಷ್ಣ ವೇಷ,ಭಕ್ತಿಗೀತೆ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ವಿಶ್ವ ಹಿಂದೂಪರಿಷದ್ ಸ್ಥಾಪನಾ ದಿನ ಹಾಗೂ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ವಿ ಹಿಂ ಪ ನ ಕ್ಷೇತ್ರೀಯ ಧರ್ಮ ಪ್ರಸಾರ ಪ್ರಮುಖರಾದ ಸೂರ್ಯನಾರಾಯಣರವರು ಭಾಗವಹಿಸಿ ಧರ್ಮ ರಕ್ಷಣೆಯಲ್ಲಿ ಹಿಂದೂ ಸಮಾಜದ ಎಲ್ಲಾ ಹಿರಿಯ ಕಿರಿಯ ಜವಾಬ್ದಾರಿ ಮತ್ತು ಹಿಂದೂ ಸಮಾಜ ಜಾತಿ,ಮತಗಳನ್ನು ಬಿಟ್ಟು ಸಂಘಟಿತರಾಗಬೇಕು ಎಂದು ೆೊಟ್ಟರು. ಕರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಸಿ ನಟರಾಜ್ ರಾವ್ ತೋರಣಗದ್ದೆಯವರು ವಹಿಸಿದ್ದರು, ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷದ್ ಶೃಂಗೇರಿ ಜಿಲ್ಲಾ ಅಧ್ಯಕ್ಷರಾದ ಸುರೇಶ್ ಕುಮಾರ್, ಜಿಲ್ಲಾ ಕಾರ್ಯದರ್ಶಿಗಳಾದ ದಿವೀರ್ ಮಲ್ನಾಡ್,ಜಿಲ್ಲಾ ಸಂಯೋಜಕರಾದ ಅಜಿತ್ ಕುಲಾಲ್,ಕಿಗ್ಗಾ ಘಟಕ ಸಂಯೋಜಕರಾದ ಪ್ರಸಾದ್ ದೋಣೂರು ಉಪಸ್ಥಿತರಿದ್ದರು.
ಕೃಷ್ಣಜನ್ಮಾಷ್ಟಮಿಯ ಸಂದರ್ಭದಲ್ಲಿ ನಡೆಸುತ್ತಿದ್ದ ಮಲೆನಾಡಿನ ಸಾಂಸ್ಕೃತಿಕ ಸ್ಪರ್ಧೆಯನ್ನು ಕಳೆದ ಮೂರು ವರ್ಷಗಳಿಂದ ಆಯೋಜಿಸಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಬಜರಂಗದಳ ಕಿಗ್ಗಾ ಘಟಕದ ಕಾರ್ಯಕ್ಕೆ ಸಾರ್ವಜನಿಕರು ಶಹಬ್ಬಾಸ್ ಹೇಳಿದರು.
ಜಾರುಗಂಬ ಸ್ಪರ್ಧೆಯಲ್ಲಿ ಸತೀಶ್ ಸಿರಿಮನೆಯವರು ಜಯಗಳಿಸಿದ್ದು ಇವರಿಗೆ ನಿಗದಿಪಡಿಸಿದ ಬಹುಮಾನ 9999/-ರೂ ಹಾಗೂ ಸಾರ್ವಜನಿಕರಿಂದ ವೈಯಕ್ತಿಕವಾಗಿ ಘೋಷಿಸಿದ 3000/-ರೂ ಹಣ ಒಟ್ಟು 13000/- ರೂ ಬಹುಮಾನದ ಮೊತ್ತ,ಸನ್ಮಾನ ದೊರೆಯಿತು.
ಸಹಾಯ ಹಸ್ತ ತಂಡದಿಂದ ಧನ ಸಹಾಯ
ಇದೇ ವೇದಿಕೆಯಲ್ಲಿ ಕಿಗ್ಗಾದ ಮಳೂರು ಗ್ರಾಮದ ನಿವಾಸಿಯಾದ ಸುಧೀರ್ರವರ ಅನಾರೋಗ್ಯ ಸಮಸ್ಯೆಗೆ ಶೃಂಗೇರಿ ಸಹಾಯ ಹಸ್ತ ತಂಡದಿಂದ 10000/- ರೂಗಳ ನೆರವನ್ನು ಅವರ ಕುಟುಂಬಕ್ಕೆ ನೀಡಲಾಯಿತು ಹಾಗೆಯೇ ತಂಡದ ಕಾರ್ಯ ಯೋಜನೆಯನ್ನು ಸೇರಿದ್ದ ಸಾರ್ವಜನಿಕರಿಗೆ ತಿಳಿಸಿ ಅಲ್ಲಿ ನೆರೆದಿದ್ದವರಿಂದ 1620/- ರೂಗಳನ್ನು ಸಂಗ್ರಹಿಸಿ ಒಟ್ಟು 11620/- ರೂ.ಗಳನ್ನು ಸುಧೀರ್ರವರ ತಾಯಿಯವರಿಗೆ ನೀಡಲಾಯಿತು. ಈ ಕಾರ್ಯಕ್ಕೆ ನೆರದಿದ್ದವರಿಂದ ಮೆಚ್ಚುಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.
ಜಾರುಗಂಬ ಹೇಗಿರ್ತೇ..??!!!
ನೇರವಾ ಅಡಿಕೆ ಕಂಬ ತಂದು ಸುಮಾರು 30 ಅಡಿಗಳಷ್ಟು ನಯವಾಗಿ ಜಾರುವಂತೆ ಕಂಬ ಸಿದ್ದಪಡಿಸಿ ನಂತರ ಎಣ್ಣೆ ಸವರಿ ನಂತರ ಬಾಳೆಹಣ್ಣು,ಸಾಸಿವೆ,ಬಳಪದ ಕಲ್ಲಿನ ಪುಡಿ,ಎಣ್ಣೆ ಮಿಶ್ರಣವನ್ನು ಕಂಬಕ್ಕೆ ಸವರಿ ಕಂಬ ಹೆಚ್ಚಾಗಿ ಜಾರುವಂತೆ ಮಾಡಿ ಕಂಬದ ತುದಿಯಲ್ಲಿ ಸಂಪ್ರದಾಯದಂತೆ ಕಾಯಿ,ಹಣ್ಣು,ಹೂವನ್ನು ಒಂದು ಬಟ್ಟೆಯಿಂದ ಕಟ್ಟಿ ಇಡಲಾಗುವುದು. ಸ್ಪರ್ಧಿಯು ಆ ಕಂಬವನ್ನು ಏರಿ ಮೇಲೆ ಕಟ್ಟಿರುವ ಆ ಗಂಟನ್ನು ತರುವುದು ಸವಾಲಾಗಿರುತ್ತದೆ. ಯಾರು ಈ ಸವಾಲನ್ನು ಸ್ವೀಕರಿಸಿ ಯಶಸ್ವಿಯಾಗುವರೋ ಅವರೇ ವಿಜಯಶಾಲಿಯಾಗಿರುತ್ತಾರೆ. ಅವರಿಗೆ ನಿಗದಿ ಪಡಿಸಿದ ಬಹುಮಾನ,ಸಮ್ಮಾನ ದೊರೆಯುತ್ತದೆ.