ಸಮಾಜ ಸೇವೆಯಲ್ಲಿ ಬಾರ್ಕೂರು ರೋಟರಿ ಕ್ಲಬ್ ಬೆಸ್ಟ್!
– ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭ
– 2023 – 24ರ ಅವಧಿಯಲ್ಲಿ ಅತ್ಯುತ್ತಮ ಸಮಾಜ ಸೇವಾ ಕಾರ್ಯಕ್ರಮ
NAMMUR EXPRESS NEWS
ಬ್ರಹ್ಮಾವರ: ಬಾರ್ಕೂರು ರೋಟರಿ ಕ್ಲಬ್ ಉಡುಪಿ, ಚಿಕ್ಕಮಗಳೂರು, ಶಿವವೊಗ್ಗ, ಹಾಸನ ಜಿಲ್ಲೆಯನ್ನು ಒಳಗೊಂಡ ರೋಟರಿ ಜಿಲ್ಲೆ 3182 ರಲ್ಲಿ ರೋಟರಿ ವರ್ಷ 2023- 24ರ ಅವಧಿಯಲ್ಲಿ ಅತ್ಯುತ್ತಮ ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಕ್ಕಾಗಿ ಮೀಡಿಯಂ ಕ್ಲಬ್ ವಿಭಾಗದಲ್ಲಿ 13 ಜಿಲ್ಲಾ ಪ್ರಶಸ್ತಿ, ರೋಟರಿ ಅಂತರರಾಷ್ಟ್ರೀಯ ಅಧ್ಯಕ್ಷರ ಸೈಟೇಶನ್ ಅವಾರ್ಡ್ ಪಡೆದುಕೊಂಡಿದೆ.
ಮೌಲ್ಯವರ್ಧಿತ, ಮೂಲಭೂತ ಶಿಕ್ಷಣ ಹಾಗೂ ಸಾಕ್ಷರತೆ, ಮಣ್ಣಿನ ಫಲವತ್ತತೆ ಮತ್ತು ಸಂರಕ್ಷಣೆ, ಕಸ ನಿರ್ೆ, ನೀರು ಮತ್ತು ನೈರ್ಮಲ್ಯ, ಸ್ವಚ್ಛತೆ, ರಸ್ತೆ ಸುರಕ್ಷತೆ, ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ, ವೃತ್ತಿಪರ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ, ಪರಿಸರ ಸಂರಕ್ಷಣೆ, ಅಂತರರಾಷ್ಟ್ರೀಯ ತಿಳಿವಳಿಕೆ, ಯುವಜನ ಸೇವೆ, ಇನ್ನಿತರ ಸೇವಾ ಕಾರ್ಯಗಳಿಗಾಗಿ ಪ್ರಶಸ್ತಿಗಳು ಲಭಿಸಿವೆ. ಶಿವಮೊಗ್ಗದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಜಿಲ್ಲೆ 3182ರ ನಿಕಟಪೂರ್ವ ಜಿಲ್ಲಾ ಗವರ್ನರ್ ಬಿ.ಸಿ. ಗೀತಾ ಅವರು ಬಾರ್ಕೂರು ರೋಟರಿ ನಿಕಟಪೂರ್ವ ಅಧ್ಯಕ್ಷ ಸೀತಾರಾಮ ಎಸ್. ಅವರಿಗೆ ಪ್ರದಾನ ಮಾಡಿದರು.
2023-24ನೇ ಸಾಲಿನ ಅಧ್ಯಕ್ಷ ಸೀತಾರಾಮ್ ಎಸ್ ಅವರು, ಕಾರ್ಯದರ್ಶಿ ಕೆ. ಬಾಬು ನಾಯ್ಕ, ನಿಕಟ ಪೂರ್ವ ಸಹಾಯಕ ಗವರ್ನರ್ ಆನಂದ ಶೆಟ್ಟಿ, ಸ್ಥಾಪಕ ಕಾರ್ಯದರ್ಶಿ ಬಿ. ಸುಧಾಕರ ರಾವ್, ಸದಸ್ಯರ ಸಹಾಯ, ಸಹಕಾರ, ಪರಿಶ್ರಮದಿಂದ ಪ್ರಶಸ್ತಿ ದೊರತಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಹಾಲಿ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಸೇರಿ ಹಲವರು ಇದ್ದರು.