ಪೊಲೀಸ್ ಇಲಾಖೆ ವಿರುದ್ಧ ತಿರುಗಿಬಿದ್ದ ಕಾರ್ಕಳ ಮಹಿಳಾ ಬಿಜೆಪಿ!
– ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಬಗ್ಗೆ ಅವಾಚ್ಯ ಅಶ್ಲೀಲ ಮಾನಹಾನಿಕರ ಪೋಸ್ಟರ್
– ದೂರು ಕೊಟ್ಟರೂ ಕ್ರಮ ಇಲ್ಲ: ಐಜಿಗೆ ಮನವಿ ಪತ್ರ
NAMMUR EXPRESS NEWS
ಕಾರ್ಕಳ: ಮಹಿಳೆಯರ ಬಗ್ಗೆ ಅವಾಚ್ಯ ಅಶ್ಲೀಲ ಮಾನಹಾನಿಕರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ಗಳು, ಬರಹಗಳನ್ನು ಹಂಚುವವರ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಹಾಗೂ ಮಹಿಳೆಯರಿಗೆ ಸೂಕ್ತ ರಕ್ಷಣೆ ಕೋರಿ ಮನವಿ ಇದೀಗ ಕಾರ್ಕಳ ಮಹಿಳಾ ಬಿಜೆಪಿ ಪ್ರಮುಖರು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.
ಉಡುಪಿ ಜಿಲ್ಲೆ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಬಗ್ಗೆ ಅದರಲ್ಲೂ ರಾಜಕೀಯವಾಗಿ, ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಮಹಿಳೆಯರನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣಗಳಾದ ಫೇಸಬುಕ್, ವಾಟ್ಸಾಪ್ ಗಳಲ್ಲಿ ಕೆಲವೊಂದು ವ್ಯಕ್ತಿಗಳು ಅವಾಚ್ಯ-ಅಶ್ಲೀಲ ಹಾಗೂ ಮಾನಹಾನಿಕರ ಪದಗಳನ್ನು ಬಳಸಿ ಪೋಸ್ಟರ್ಗಳ್ನು ಿಸುತ್ತಿದ್ದಾರೆ. ಈ ಬಗ್ಗೆ ತಮ್ಮ ಇಲಾಖೆಗೆ ದೂರು ನೀಡಿದ್ದರೂ, ಈವರೆಗೆ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಮಹಿಳೆಯರಾದ ನಮಗೆ ತುಂಬಾ ಬೇಸರ ತರಿಸಿದೆ ಎಂದು ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಮಾಜಿ ಅಧ್ಯಕ್ಷೆ ವಿರುದ್ದ ಮಾನ ಹಾನಿ ಪೋಸ್ಟರ್!: ದೂರು
ಇತ್ತೀಚಿಗೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಕಡ್ತಲ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷೆಯ ವಿರುದ್ಧ ಕೆಲವೊಂದು ವ್ಯಕ್ತಿಗಳು ಇಂತಹ ಪೋಸ್ಟರ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಗ್ಗೆ ಆ ವ್ಯಾಪ್ತಿಯ ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಕೂಡ ಸರಿಯಾಗಿ ಸ್ಪಂದಿಸದೇ ಇದ್ದಾಗ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ ನಂತರ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ದೂರು ದಾಖಲಾಗಿ ಸುಮಾರು 1 ತಿಂಗಳೇ ಕಳೆದರೂ ಈವರೆಗೆ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡರುವುದಿಲ್ಲ. ಇದರಿಂದಾಗಿ ಪೊಲೀಸ್ ಇಲಾಖೆ ಕಾರ್ಯವೈಖರಿಯ ಬಗ್ಗೆ ನಮಗೆ ಸಂಶಯ ಮೂಡುವಂತಾಗಿದ್ದು, ಸಮಾಜದಲ್ಲಿ ಪೊಲೀಸ್ ಇಲಾಖೆಯಿಂದ ಮಹಿಳೆಯರಿಗೆ ಯಾವುದೇ ರಕ್ಷಣೆ ಇಲ್ಲ ಎಂಬ ಮನೋಭಾವ ನಿರ್ಮಾಣಗೊಂಡಿದೆ. ಎಲ್ಲೋ ಒಂದು ಕಡೆ ಇಂತಹ ಆರೋಪಿಗಳನ್ನು ಪೊಲೀಸ್ ಇಲಾಖೆಯೇ ರಕ್ಷಿಸುತ್ತಿದೆ ಎಂಬ ಅನುಮಾನದ ಜೊತೆಗೆ ಪೊಲೀಸ್ ಇಲಾಖೆ ಇಂತಹ ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಲಾರದಷ್ಟು ದುರ್ಬಲವಾಗಿದೆಯೇ ಎಂಬ ಸಂಶಯ ಹುಟ್ಟುಹಾಕುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಬಗೆಗಿನ ಇಂತಹ ಪೋಸ್ತರ್ಗಳು ಬರಹಗಳನ್ನು ಹಂಚುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಇಂಹ ಪ್ರಕರಣಗಳು ಮತ್ತಷ್ಟು ಹೆಚ್ಚಾಗಲಿದ್ದು, ಮಹಿಳಾ ಸಬಲೀಕರಣದಂತಹ ಈಗಿನ ವ್ಯವಸ್ಥೆಯಲ್ಲಿ ಮಹಿಳೆಯರು ಸಾರ್ವಜನಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಕಷ್ಟಸಾಧ್ಯವಾಗಬಹುದು.
ಒಂದು ಕಡೆ ಸರ್ಕಾರಗಳು ಮಹಿಳೆಯರನ್ನು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸಾಮಾಜಿಕ ಚಟುವಟಿಕೆಗಳಿಗೆ ತೊಗಿಸಿಕೊಳ್ಳುವಂತ ್ರೇರೇಪಿಸುತ್ತಿದೆ. ಆದರೆ ಇಂತಹ ವಿಚಾರಗಳು ಬಂದಾಗ ಪೊಲೀಸ್ ಇಲಾಖೆಯು ತತ್ಕ್ಷಣದಲ್ಲಿ ಸ್ಪಂದಿಸದಿದ್ದಾಗ, ಈ ರೀತಿಯ ನಿಂದನೆಗಳು-ಸಮಸ್ಯೆಗಳಾದಾಗ ಮಹಿಳೆಯರಿಗೆ ಮನಸ್ಸಲ್ಲಿ ಅಂಜಿಕೆ-ಭಯದ ವಾತಾಣದಲ್ಲಿ ನಿರ್ಮಾಣವಾಗುತ್ತದೆ.
ಆದುದರಿಂದ ಪೊಲೀಸ್ ಇಲಾಖೆಯು ಮಹಿಳೆಯರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ-ಅಶ್ಲೀಲ ಮಾನಹಾನಿಕರ ಪೋಸ್ಟರ್ಗಳನ್ನು ಹಾಕುವವರ ಬಗ್ಗೆ ಸಕಾಲದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕಡ್ತಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರ ವಿರುದ್ಧ ಮಾನಹಾನಿಕರ ಪೋಸ್ಟ್ಗಳನ್ನು ಹಾಕಿರುವ ಪ್ರಕರಣದ ಆರೋಪಿಗಳ ಮೇಲೆ 15 ದಿನದ ಒಳಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಕಾರ್ಕಳ ಮಂಡಲವು ಅಜೆಕಾರು ಪೊಲೀಸ್ ಠಾಣೆ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಿದೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದು ಅಧ್ಯಕ್ಷರು/ಪದಾಧಿಕಾರಿಗಳು ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಕಾರ್ಕಳ ಮನವಿ ಸಲ್ಲಿಸಿದ್ದಾರೆ.