ಅಕ್ಟೋಬರ್ ತಿಂಗಳಿನಲ್ಲಿ ಸಾಲು ಸಾಲು ರಜೆ
– 10 ದಿನಗಳ ಕಾಲ ಬ್ಯಾಂಕ್ ರಜೆ
– ಆರ್ಬಿಐ ನೀಡಿರುವ ರಜೆ ಪಟ್ಟಿಯ ಪ್ರಕಟಣೆ
– ಬ್ಯಾಂಕಿಂಗ್ ವ್ಯವಹಾರಗಳನ್ನು ಮುಂಚಿತವಾಗಿ ಪ್ಲಾನ್ ಮಾಡಿ
NAMMUR EXPRESS NEWS
ದಸರಾ, ನವರಾತ್ರಿ ಹಬ್ಬಗಳಿರುವ ಅಕ್ಟೋಬರ್ ತಿಂಗಳಿನಲ್ಲಿ ಸಾಲು ಸಾಲು ರಜೆಗಳಿವೆ. ರಾಜ್ಯದಿಂದ ರಾಜ್ಯಕ್ಕೆ ರಜೆಗಳಲ್ಲಿ ವ್ಯತ್ಯಾಸವಿದೆ. ಇನ್ನು ಆರ್ಬಿಐ ವೆಬ್ಸೈಟ್ ಪ್ರಕಾರ, ಅಕ್ಟೋಬರ್ 2024ರಲ್ಲಿ ಬ್ಯಾಂಕ್ ರಜಾದಿನಗಳಲ್ಲಿ ಅಕ್ಟೋಬರ್ 2ರ ಮಹಾತ್ಮ ಗಾಂಧಿ ಜಯಂತಿ, ದಸರಾ ಹಬ್ಬದ ಮುಖ್ಯ ದಿನಗಳಾದ ಅಕ್ಟೋಬರ್ 10, 11 ಹಾಗೂ 12ರಂದು ವಿವಿಧ ರಾಜ್ಯ ಅಥವಾ ನಗರಗಳಲ್ಲಿ ಬೇರೆ ಬೇರೆ ದಿನ ರಜೆಗಳಿವೆ. ದೀಪಾವಳಿ ಆರಂಭವಾಗುವ ಅಕ್ಟೋಬರ್ 31ಕ್ಕೆ ಬಹುತೇಕ ಎಲ್ಲಾ ರಾಜ್ಯಗಳ ಬ್ಯಾಂಕ್ಗಳಿಗೂ ರಜೆ ಇದೆ. ಅಕ್ಟೋಬರ್ ತಿಂಗಳ ಉದ್ದಕ್ಕೂ ಸರ್ಕಾರಿ ರಜೆಗಳನ್ನು ಸೇರಿಸಿ ಒಟ್ಟು 10 ದಿನಗಳ ರಜೆ ಇವೆ. ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳನ್ನು ಮುಂಚಿತವಾಗಿ ಪ್ಲಾನ್ ಮಾಡಿಕೊಳ್ಳುವುದು ಉತ್ತಮ.
ಅಕ್ಟೋಬರ್ 2024ರ ಬ್ಯಾಂಕ್ ರಜಾ ದಿನಗಳು
ಅಕ್ಟೋಬರ್ 2 ಬುಧವಾರ -ಮಹಾತ್ಮ ಗಾಂಧಿ ಜಯಂತಿ
ಅಕ್ಟೋಬರ್ 11 ಶುಕ್ರವಾರ -ಮಹಾ ನವಮಿ
ಅಕ್ಟೋಬರ್ 17 ಗುರುವಾರ -ಮಹರ್ಷಿ ವಾಲ್ಮೀಕಿ ಜಯಂತಿ
ಅಕ್ಟೋಬರ್ 31 ಗುರುವಾರ -ದೀಪಾವಳಿ
ಅಕ್ಟೋಬರ್ 6 ಭಾನುವಾರ
ಅಕ್ಟೋಬರ್ 12 ಎರಡನೇ ಶನಿವಾರ
ಅಕ್ಟೋಬರ್ 13 ಭಾನುವಾರ
ಅಕ್ಟೋಬರ್ 20 ಭಾನುವಾರ
ಅಕ್ಟೋಬರ್ 26 ನಾಲ್ಕನೇ ಶನಿವಾರ
ಅಕ್ಟೋಬರ್ 27 ಭಾನುವಾರ
ಅಕ್ಟೋಬರ್ 11, 12 ಹಾಗೂ 13ರಂದು ಸತತ ಮೂರು ದಿನಗಳ ರಜೆ ಬರುತ್ತದೆ.