- ಇನ್ನು ಮನೆ, ಕಚೇರಿ ಅಡ್ವಾನ್ಸ್ ಹಣ ಕಡಿಮೆ
- ಬಾಡಿಗೆ ಮನೆಗೆ 2 ತಿಂಗಳು, ವಾಣಿಜ್ಯಕ್ಕೆ 6 ತಿಂಗಳ ಹಣ
- ಜಾಗದ ಮಾಲೀಕ ಕಿರಿಕಿರಿ ಮಾಡಿದ್ರೆ ಕ್ರಮ
ನವದೆಹಲಿ: ಮನೆ ಬಾಡಿಗೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಹೊಸ ಕಾಯ್ದೆ ರೂಪಿಸಲಾಗಿದೆ. ಮನೆ ಬಾಡಿಗೆಗೆ 2 ತಿಂಗಳ ಬಾಡಿಗೆ ಅಡ್ವಾನ್ಸ್, ವಾಣಿಜ್ಯ ಕಾರಣಕ್ಕೆ 6 ತಿಂಗಳ ಬಾಡಿಗೆ ಹಣ ಅಡ್ವಾನ್ಸ್ ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ.
ಮಾದರಿ ಬಾಡಿಗೆ ಕಾಯ್ದೆ ರೂಪಿಸಿದ್ದು, ಕರೋನಾ ತುರ್ತು ಪರಿಸ್ಥಿತಿ ಕಷ್ಟದ ಕಾರಣ ಖಾಸಗಿ ವಲಯಕ್ಕೆ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಲಾಗಿದೆ.
ಬಾಡಿಗೆ ಮನೆ ಮಾಲೀಕರು ಇನ್ನು ಮುಂದೆ ಎರಡು ತಿಂಗಳ ಬಾಡಿಗೆಯನ್ನು ಮಾತ್ರ ಮುಂಗಡ ಪಡೆಯಬೇಕಿದೆ. ಬಾಡಿಗೆ ಪ್ರಾಧಿಕಾರ ರಚನೆ ಮಾಡಲಿದ್ದು, ಮನೆ ಮತ್ತು ವಾಣಿಜ್ಯ ಕಟ್ಟಡ ಬಾಡಿಗೆ ಒಪ್ಪಂದಗಳನ್ನು ಪ್ರಾಧಿಕಾರಕ್ಕೆ ನೀಡಬೇಕು. ಪ್ರಾಧಿಕಾರ ಎಲ್ಲಾ ವ್ಯಾಜ್ಯಗಳ ಇತ್ಯರ್ಥಕ್ಕೆ ವ್ಯವಸ್ಥೆ ಕಲ್ಪಿಸುತ್ತದೆ. ಈ ಮೂಲಕ ಕೇಂದ್ರ ಮಹತ್ವದ ಹೆಜ್ಜೆ ಇಟ್ಟಿದೆ. ಬಾಡಿಗೆ ಒಪ್ಪಂದ ಮುಗಿದ ನಂತರ ಮನೆ ಖಾಲಿ ಮಾಡದಿದ್ದರೆ ಮನೆ ಮಾಲೀಕರು 2 ತಿಂಗಳ ಅವಧಿಗೆ ಬಾಡಿಗೆ ಹೆಚ್ಚಿಸಬಹುದು. ಎರಡು ತಿಂಗಳ ನಂತರ ಖಾಲಿ ಮಾಡದಿದ್ದರೆ ನಾಲ್ಕು ಪಟ್ಟು ಬಾಡಿಗೆ ಹೆಚ್ಚಳ ಮಾಡಬಹುದು. ಬಾಡಿಗೆದಾರನ ಮನೆಗೆ ಮಾಲೀಕ ಏಕಾಏಕಿ ಪ್ರವೇಶಿಸುವಂತಿಲ್ಲ ಎಂದು ಹೇಳಲಾಗಿದೆ.ಇದು ಹೊಸ ಸಂಚಲನ ಮೂಡಿಸಿದೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.