ಹೆಬ್ರಿ ತಾಲೂಕಿನಲ್ಲಿ ಕಾಡಾನೆ ಕಾಟ!
– ಕುಚ್ಚಾರು ಭಾಗದಲ್ಲಿ ಆನೆ ಹಾವಳಿ: ಜೀವ ಭಯದಲ್ಲಿ ಜನ
– ಸೋಮೇಶ್ವರ ಅಭಯಾರಣ್ಯದಲ್ಲಿ 4 ತಿಂಗಳಿಂದ ಆನೆ ಸಂಚಾರ
NAMMUR EXPRESS NEWS
ಹೆಬ್ರಿ: ಹೆಬ್ರಿ ತಾಲೂಕಿನಲ್ಲಿ ಕಾಡಾನೆಗಳ ಕಾಟ ರೈತರ ಬದುಕನ್ನು ಇದೀಗ ಆತಂಕಕ್ಕೆ ತಳ್ಳಿದೆ. ಹೆಬ್ರಿ ತಾಲ್ಲೂಕಿನ ಕುಚ್ಚಾರು ಪರಿಸರದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ತೋಟಗಳಿಗೆ ನುಗ್ಗಿ ಕೃಷಿ ಹಾನಿ ಮಾಡಿದೆ. ಕಳೆದ 2 ವರ್ಷಗಳಿಂದ ಹೆಬ್ರಿ ತಾಲ್ಲೂಕಿನ ಹಲವೆಡೆ ಆನೆಗಳು ಕೃಷಿ ಭೂಮಿಯನ್ನು ಹಾಳು ಮಾಡಿವೆ.
ನಾಡ್ಪಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಮೇಶ್ವರ ಅಭಯಾರಣ್ಯದ ಪರಿಸರದಲ್ಲಿ 4 ತಿಂಗಳಿಂದ ಆನೆ ಸಂಚರಿಸುತ್ತಿದ್ದು, ಈಗ ಕುಚ್ಚಾರು ಮಾತ್ಕಲ್ ಪ್ರದೇಶಕ್ಕೂ ಧಾಂಗುಡಿ ಇಟ್ಟಿದೆ.
ಮಾತ್ಕಲ್ನ ಆನಂದ ನಾಯ್ಕ ಅವರ ತೋಟದ ಬಾಳೆ ಹಾಗೂ ತೆಂಗು ಗಿಡಗಳಿಗೆ ಹಾನಿ ಮಾಡಿದೆ. ಅಣ್ಣಯ್ಯ ಅಂಬಿಗರ ಮನೆ ಸಮೀಪ ಬೈನೆ ಮರವನ್ನೂ ಕೆಡಹಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ ಆನೆ ಬಗ್ಗೆ ಇಲಾಖೆ ಸಿಬಂದಿ ನಿಗಾ ಇರಿಸಿದ್ದಾರೆ.ಕುಚ್ಚಾರು ಪರಿಸರದಲ್ಲಿ ರಾತ್ರಿ ಒಂಟಿಯಾಗಿ ಸಂಚರಿಸಬೇಡಿ ಎಂದು ಸೂಚನೆ ನೀಡಲಾಗಿದೆ ಎಂದು ಅರಣ್ಯ ಅಧಿಕಾರಿ ಚಿದಾನಂದಪ್ಪ ಹೇಳಿದ್ದಾರೆ.
ಆನೆ ಸಾಗಣೆಗೆ ಪಟ್ಟು : ಕಾಡಾನೆಯನ್ನು ಬೇರೆ ಭಾಗಕ್ಕೆ ಬಿಡಬೇಕು ಎಂದು ಈ ಭಾಗದ ರೈತರು ಅಗ್ರಹಿಸಿದ್ದಾರೆ.