ಮಕ್ಕಳಿಗೆ ಒಳ್ಳೆ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ಮಾಹಿತಿ!
– ಕಾರ್ಕಳ ರೋಟರಿ ಕ್ಲಬ್ ಮಾದರಿ ಕಾರ್ಯಕ್ರಮಕ್ಕೆ ಮೆಚ್ಚುಗೆ
– ಮಾಳ ಶಾಲೆಯಲ್ಲಿ ಕಾರ್ಯಕ್ರಮ: ರೊ.ಇಕ್ಬಾಲ್ ಅಹ್ಮದ್ ಸಾರಥ್ಯ
NAMMUR EXPRESS NEWS
ಕಾರ್ಕಳ: ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳದಲ್ಲಿ ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಒಳ್ಳೆ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷರಾದ ರೊಟೇರಿಯನ್ ಇಕ್ಬಾಲ್ ಅಹ್ಮದ್ ಹಾಗೂ ಮುಖ್ಯ ಅತಿಥಿಗಳಾಗಿ ರೋಟರಿ ಆಸ್ಪತ್ರೆ ಕಾರ್ಕಳ ಇದರ ವೈದ್ಯರಾದ ಜಯಶ್ರೀ ಹಾಗೂ ಕಾರ್ಯಕ್ರಮದಲ್ಲಿ ಸದಸ್ಯರಾದ ರೊಟೇರಿಯನ್ ವಸಂತ, ರೊಟೇರಿಯನ್ ಬಾಲಕೃಷ್ಣ, ರೊಟೇರಿಯನ್ ಶಶಿಕಲಾ, ರೊಟೇರಿಯನ್ ರೇಖಾ ಉಪಾಧ್ಯಾಯ, ರೊಟೇರಿಯನ್ ಮಮತಾ ಶೆಟ್ಟಿ ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಪೂರ್ಣಿಮಾ ಶೆಣೈ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ರೋಟರಿ ಆಸ್ಪತ್ರೆ ಕಾರ್ಕಳ ಇದರ ವೈದ್ಯರಾದ ಜಯಶ್ರೀ ಇವರು ಕೆಟ್ಟ ಸ್ಪರ್ಶ ಮತ್ತು ಒಳ್ಳೆ ಸ್ಪರ್ಶದ ಬಗ್ಗೆ 5, 6 ಮತ್ತು 7ನೇ ತರಗತಿಯ ಮಕ್ಕಳಿಗೆ ಉತ್ತಮ ಮಾಹಿತಿಯನ್ನು ನೀಡಿದರು. ಮಾಹಿತಿಯ ಜೊತೆಗೆ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತಹ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿ ಬಹುಮಾನ ರೂಪದಲ್ಲಿ ಚಾಕೋಲೇಟ್ ಅನ್ನು ನೀಡಿದರು. ವೇದಿಕೆಯಲ್ಲಿರುವ ಕೆಲವು ಗಣ್ಯರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಈ ಗುರುಕುಲ ಶಾಲೆಯು ಪೋಷಕರು,ಪೂರ್ವ ವಿದ್ಯಾರ್ಥಿಗಳು ಹಾಗೂ ದಾನಿಗಳಿಂದ ಉತ್ತಮ ರೀತಿಯಲ್ಲಿ ನಡೆಯುತ್ತಿರುವ ವಿಚಾರವನ್ನು ತಿಳಿದು ನಮಗೆ ಖುಷಿಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷರಾದ ರೊಟೇರಿಯನ್ ಶ್ರೀಯುತ ಇಕ್ಬಾಲ್ ಅಹ್ಮದ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮವನ್ನು ನಮ್ಮ ಶಾಲಾ ಮುಖ್ಯೋಪಾಧ್ಯಾಯರಾದ ಪೂರ್ಣಿಮಾ ಶೆಣೈ ಇವರು ನಿರ್ವಹಿಸಿ,ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದದವರು ಹಾಗೂ 5,6 ಮತ್ತು 7ನೇ ತರಗತಿಯ ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ರಕ್ಷಿತಾ ಟೀಚರ್ ಇವರು ನೆರವೇರಿಸಿದರು.