ಆಗುಂಬೆ ಸುರಂಗ ಮಾರ್ಗ ಕೆಲಸ ಶುರು ಆಗುತ್ತಾ..?
– ಸುರಂಗ ಮಾರ್ಗ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ
– ಮಲೆನಾಡು – ಕರಾವಳಿ ಬೆಸೆಯುವ ಮಾರ್ಗ
NAMMUR EXPRESS NEWS
ತೀರ್ಥಹಳ್ಳಿ/ಹೆಬ್ರಿ: ಮಲ್ಪೆ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ-169 ಎ ಚತುಷ್ಪಥ ಯೋಜನೆಯಲ್ಲಿ ಆಗುಂಬೆ ಘಾಟ್ನಲ್ಲಿ ಸುರಂಗ ಮಾರ್ಗ ನಿರ್ಮಾಣದ ಕಾರ್ಯ ಸಾಧ್ಯತೆಯ ಕುರಿತಂತೆ ವರದಿ ಸಲ್ಲಿಸಲು, ಕೇಂದ್ರ ಭೂ ಸಾರಿಗೆ ಸಚಿವಾಲಯದ ಡೈರೆಕ್ಟರ್ ಜನರಲ್ ಧರ್ಮೇಂದ್ರ ಸಾರಂಗಿ ಅವರು, ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಮೂಲಕ ಯೋಜನೆ ಜಾರಿಗೆ ಇದೀಗ ಪ್ಲಾನ್ ಆಗುವ ಸಾಧ್ಯತೆ ಇದೆ.
ಆಗುಂಬೆ ಘಾಟ್ ರಸ್ತೆಗೆ ಪರ್ಯಾಯವಾಗಿ, ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ 4 ಪಥದ ಸುರಂಗಮಾರ್ಗದ ರಸ್ತೆ ನಿರ್ಮಾಣ ಮಾಡಲು ಡಿಪಿಆರ್ ಸಿದ್ಧಪಡಿಸಲು ಅನುಮತಿ ನೀಡಲಾಗಿದೆ. ಈ ಸಂಬಂಧ ಯೋಜನೆ ಅನುಷ್ಠಾನದ ಸಾಧ್ಯಾಸಾಧ್ಯತೆಗಳ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಈ ಬಗ್ಗೆ ಮಾಹಿತಿ ನೀಡಿದ್ದು,
ಕೇಂದ್ರ ಭೂ ಸಾರಿಗೆ ಸಚಿವಾಲಯದ ಡೈರೆಕ್ಟರ್ಜನರಲ್ ಧರ್ಮೇಂದ್ರ ಸಾರಂಗಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಸಿಗಂದೂರು ಸೇತುವೆ, ಶಿವಮೊಗ್ಗ – ಚಿತ್ರದುರ್ಗ, ರಾಷ್ಟ್ರೀಯ ಹೆದ್ದಾರಿ, ಸಾಗರ ನಗರದಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಕುರಿತಂತೆ ಚರ್ಚೆ ನಡೆಸಲಾಯಿತು. ಹಾಗೆಯೇ ಈಗಾಗಲೇ ಟೆಂಡರ್ಪ್ರಕ್ರಿಯೆ ಪೂರ್ಣಗೊಂಡಿರುವ ಬಗ್ಗೆ ಮಾತುಕತೆ ನಡೆಸಲಾಯಿತು.
ಶಿವಮೊಗ್ಗ – ಆನಂದಪುರ ನಡುವೆ ನಾಲ್ಕು ಪಥದ ರಸ್ತೆ ನಿರ್ಮಾಣ, ನೆಲ್ಲಿಸರದಿಂದ ತೀರ್ಥಹಳ್ಳಿವರೆಗಿನ ಚತುಷ್ಪಥ ಮಾರ್ಗ, ಬೈಂದೂರು – ನಾಗೋಡಿವರೆಗಿನ ದ್ವಿಪಥ ಮಾರ್ಗ, ಹೊಸೂರು ಹಾಗೂ ತಾಳಗುಪ್ಪ ರೈಲ್ವೆ ಮೇಲ್ಲೇತುವೆ ಕಾಮಗಾರಿಗಳ ಬಗ್ಗೆ ಭೂ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಯಿತು. ಬೈಂದೂರಿನಿಂದ ರಾಣೆಬೆನ್ನೂರು ನಡುವೆ ಬಾಕಿ ಉಳಿದಿರುವ ರಸ್ತೆ ಕಾಮಗಾರಿಗೆ ಕಾಲಮಿತಿಯೊಳಗೆ ಡಿಪಿಆರ್ಗಳಿಗೆ ಮಂಜೂರಾತಿ ಪಡೆಯುವಂತೆ ಭೂ ಸಾರಿಗೆ ಅಧಿಕಾರಿಯು ಹೆದ್ದಾರಿ ಇಲಾಖೆ ಆಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.