ಸೊರಬ: ಫಾರ್ಚೂನರ್ ಕಾರಲ್ಲಿ ಬಂದು ಹಸು ಕಳ್ಳತನ !
– ಶಿರಾಳಕೊಪ್ಪ: ವಿದ್ಯುತ್ ಶಾಕ್ ನಿಂದ ಯುವಕ ಸಾವು
– ಚಾರ್ಮಾಡಿ ಘಾಟ್ : ಕಾರು ಮತ್ತು ಮೀನಿನ ವಾಹನದ ನಡುವೆ ಮುಖಾಮುಖಿ ಡಿಕ್ಕಿ
– ತೀರ್ಥಹಳ್ಳಿ: ಬೈಕ್ ಸವಾರನಿಗೆ ಗುದ್ದಿದ ಕಾಡುಕೋಣ
NAMMUR EXPRESS NEWS
ಸೊರಬ : ಫಾರ್ಚೂನರ್ ಕಾರಿನಲ್ಲಿ ಬಂದ ಖದೀಮರು ಹಸುವನ್ನು ಕದ್ದು ಪರಾರಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನಡೆದಿದೆ. ಹಸು ಕಳವು ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. KA 01 MZ 5843 ಬೂದು ಬಣ್ಣದ ಟೊಯೋಟಾ FORTUNER ಕಾರು ಕಳ್ಳರು ಮಂಕಿ ಕ್ಯಾಪ್ ಹಾಕಿಕೊಂಡು ಬಂದು, ಆಕಳುವೊಂದನ್ನು ಕಳ್ಳತನ ಮಾಡಿದ್ದಾರೆ. ಹಸು ಕದ್ದ ವಿಷಯ ತಿಳಿದ ಕೂಡಲೇ ಸ್ಥಳೀಯರು ಕಾರನ್ನು ಅಡ್ಡ ಹಾಕಲು ಯತ್ನಿಸಿದ್ದಾರೆ. ಆದರೆ, ಕಳ್ಳರು ಸ್ಥಳೀಯರ ಮೇಲೆ ಕಾರು ಹತ್ತಿಸುವ ಯತ್ನಿಸಿದ್ದಾರೆ.
ಘಟನೆ ಕುರಿತು ಸ್ಥಳೀಯರು ಸೊರಬ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೊರಬದಲ್ಲಿ ಇತ್ತೀಚೆಗೆ ಹಸು ಕಳವು ಹೆಚ್ಚಾಗುತ್ತಿದೆ. ಹೀಗಾಗಿ ಹಸು ಕಳ್ಳರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
– ಶಿರಾಳಕೊಪ್ಪ: ವಿದ್ಯುತ್ ಶಾಕ್ ನಿಂದ ಯುವಕ ಸಾವು
ಶಿರಾಳಕೊಪ್ಪ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೋಕಿನ ಶಿರಾಳಕೊಪ್ಪ ಹೋಬಳಿಯಲ್ಲಿ ಕಾರ್ ಸರ್ವಿಸ್ ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಸಂಜೆ ಕಾರು ಶೋರೂಮ್ ನಲ್ಲಿ ಹನುಮಂತು ಎಂಬ 21 ವರ್ಷದ ಯುವಕ ಕಾರು ಸ್ವಚ್ಚತೆ ಮಾಡುವ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ವಿದ್ಯುತ್ ಶಾಕ್ ನಿಂದ ಯುವಕ ಸ್ಥಳದಲ್ಲಿಯೇ ಅಸು ನೀಗಿದ್ದಾನೆ. ಘಟನೆಯಿಂದ ಕುಟುಂಬದ ಆಕ್ರಂಧನ ಮುಗಿಲು ಮುಟ್ಟಿದೆ. ಶಿರಾಳಕೊಪ್ಪ-ಆನವಟ್ಟಿ ರಸ್ತೆಯಲ್ಲಿ ಬರುವ ಕಾರು ಸರ್ವಿಸ್ ನಲ್ಲಿ ಕೆಲಸ ಮಾಡುವಾಗ ಈ ಅವಘಡ ಸಂಭವಿಸಿದೆ. ಪುಣೇದನಹಳ್ಳಿಯಿಂದ ಹನುಮಂತು ದಿನ ಕೆಲಸಕ್ಕಾಗಿ ಓಡಾಡುತ್ತಿದ್ದ. ಘಟನೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
– ಚಾರ್ಮಾಡಿ ಘಾಟ್ : ಕಾರು ಮತ್ತು ಮೀನಿನ ವಾಹನದ ನಡುವೆ ಮುಖಾಮುಖಿ ಡಿಕ್ಕಿ
ಚಾರ್ಮಾಡಿ ಘಾಟಿಯ ಮಲಯ ಮಾರುತದ ತಿರುವಿನಲ್ಲಿ ಕಾರು ಹಾಗೂ ಮೀನಿನ ಮಿನಿ ಗೂಡ್ಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ನಡೆದಿದೆ. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಕಾರು, ಮಂಗಳೂರಿನಿಂದ ಚಿಕ್ಕಮಗಳೂರು ಕಡೆಗೆ ಹೋಗುತ್ತಿದ್ದ ಮೀನಿನ ಗಾಡಿಯ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಡಿಕ್ಕಿಯ ರಭಸಕ್ಕೆ ಮೀನು ತುಂಬಿದ್ದ ಮಿನಿ ಗೂಡ್ಸ್ ವಾಹನ ರಸ್ತೆಯ ಬದಿಗೆ ಪಲ್ಟಿಯಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ. ಕಾರಿನಲ್ಲಿದ್ದ ಐವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ತೀರ್ಥಹಳ್ಳಿ: ಬೈಕ್ ಸವಾರನಿಗೆ ಗುದ್ದಿದ ಕಾಡುಕೋಣ
ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಸಮೀಪದ ಅನ್ನುವಳ್ಳಿ ಸೇತುವೆ ಬಳಿ ಸಂಜೆ ವೇಳೆ ಕಾಡುಕೋಣ ಬೈಕಿಗೆ ಅಡ್ಡಬಂದ ಗುದ್ದಿದ ಪರಿಣಾಮ ಸವಾರ ಬಿದ್ದು ಗಾಯಗೊಂಡಿ ಇದ್ದಾರೆ. ವೆಂಕಟೇಶ್ ಎಂಬುವವರು ಗುಡ್ಡೆಕೇರಿ ಯಿಂದ ಕೈಮರ ಸಮೀಪದ ಮನೆಗೆ ಬರುತಿದ್ದಾಗ ಕಾಡು ಕೋಣ ರಸ್ತೆಗೆ ಅಡ್ಡಲಾಗಿ ಬಂದು ಗುದ್ದಿದೆ. ಪರಿಣಾಮ ಬೈಕ್ ಹಿಡಿತಕ್ಕೆ ಸಿಗದೇ ಕೆಳಗೆ ಬಿದ್ದು ಸವಾರನಿಗೆ ಗಂಭೀರ ಗಾಯಗಳಾಗಿವೆ. ಜೆ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.