ಚಿಕ್ಕಮಗಳೂರು ಜಿಲ್ಲೆಯಾದ್ಯಂತ ದಸರಾ ಸಂಭ್ರಮ!
* ಶೃಂಗೇರಿ, ಹೊರನಾಡು, ಹರಿಹರಪುರ ಸೇರಿ ಜಿಲ್ಲೆಯ ಹಲವೆಡೆ ಅದ್ದೂರಿ ದಸರಾ
* ಪ್ರತಿ ತಾಲೂಕಲ್ಲಿ ದಸರಾ,ನವರಾತ್ರಿ ಉತ್ಸವ
* ಲಕ್ಷ ಲಕ್ಷ ಪ್ರವಾಸಿಗರ ಆಗಮನ: ದೇವಾಲಯದಲ್ಲಿ ಅಲಂಕಾರ
NAMMUR EXPRESS NEWS
ಚಿಕ್ಕಮಗಳೂರು: ಅಕ್ಟೋಬರ್ 3ರಿಂದ ಆರಂಭಗೊಳ್ಳಲಿರುವ ದಸರಾ ಉತ್ಸವಕ್ಕೆ ಕಾಫೀನಾಡು ಸಜ್ಜಾಗಿದ್ದು ಜಿಲ್ಲೆಯ ಎಲ್ಲಾ ತಾಲೂಕಿನ ಪ್ರಮುಖ ದೇವಾಲಯಗಳಲ್ಲಿ ನವರಾತ್ರಿ ಆಚರಣೆ ನಡೆಸಲಾಗುತ್ತಿದೆ.
ಶೃಂಗೇರಿ,ಹೊರನಾಡು, ಬಾಳೆಹೊನ್ನೂರು,ಹರಿಹರಪುರ, ಶಕಟಪುರ,ಎನ್.ಆರ್,ಪುರ,ಚಿಕ್ಕಮಗಳೂರು,ಕಳಸ,ತರೀಕೆರೆ,ಕಡೂರಿನಲ್ಲಿ ವಿಜೃಂಭಣೆಯ ದಸರಾಕ್ಕೆ ಚಾಲನೆ ದೊರೆತಿದೆ.
ಹತ್ತೂ ದಿನಗಳು ವಿಶೇಷ ಪೂಜೆ,ಸಾಂಸ್ಕೃತಿಕ,ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಭಕ್ತರು ಅತ್ಯಂತ ಶ್ರದ್ಧೆ ಭಕ್ತಿಯಿಂದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಜಿಲ್ಲೆಯಲ್ಲಿ ಎಲ್ಲೆಲ್ಲಿ ನಡೆಯಲಿದೆ ನವರಾತ್ರಿ ಉತ್ಸವ?
* ಶೃಂಗೇರಿ ಶ್ರೀಶಾರದಾ ಪೀಠದಲ್ಲಿ ವೈಭವದ ಶಾರದಾ ಶರನ್ನವರಾತ್ರಿ ಉತ್ಸವ ನಡೆಯಲಿದೆ.
* ಹರಿಹರಪುರದಲ್ಲಿ ವಿಜೃಂಭಣೆಯ ದಸರಾ ಉತ್ಸವಕ್ಕೆ ಚಾಲನೆ ದೊರೆತಿದೆ.
* ಹೊರನಾಡು ಶ್ರೀಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಅದ್ದೂರಿ ನವರಾತ್ರಿ ಆಚರಣೆಗೆ ಚಾಲನೆ ದೊರೆತಿದೆ.
* ಶಕಟಪುರ ಮಠದಲ್ಲಿ ನವರಾತ್ರಿ ಧಾರ್ಮಿಕ ಕಾರ್ಯಗಳು ಆರಂಭಗೊಂಡಿದೆ.
* ಬಾಳೆಹೊನ್ನೂರಿನಲ್ಲಿ 15 ನೇ ವರ್ಷದ ನವರಾತ್ರಿ ಮಹೋತ್ಸವಕ್ಕೆ ಚಾಲನೆ ದೊರಕಿದೆ.
* ಎನ್.ಆರ್ ಪುರದ ಬಸ್ತಿಮಠದಲ್ಲಿ ಶರವಣ ರಾತ್ರಿ ಮಹೋತ್ಸವಕ್ಕೆ ಚಾಲನೆ.
* ಕಳಸದಲ್ಲಿ 36 ನೇ ವರ್ಷದ ನವರಾತ್ರಿ ಉತ್ಸವ ಆರಂಭಗೊಂಡಿದೆ.
* ಮೂಡಿಗೆರೆ ಹಾಗೂ ಕೊಟ್ಟಿಗೆಹಾರದಲ್ಲಿ ದುರ್ಗಾದೇವಿ ಪ್ರತಿಷ್ಠಾಪಿಸಲಾಗಿದೆ.
* ಚಿಕ್ಕಮಗಳೂರಿನ ಶೃಂಗೇರಿ ಶ್ರೀಶಾರದಾ ಶಾಖಾ ಮಠದಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ.
* ಕಡೂರಿನಲ್ಲೂ ದಸರಾ ಪ್ರಾರಂಭಗೊಂಡಿದೆ