- ಮಾನವ- ಆನೆಗಳ ಸಂಘರ್ಷ ಹೆಚ್ಚಳ
- ಅರಣ್ಯ ನಾಶ, ದಂತ, ಬೇಟೆಗೆ ಆನೆ ಸಂತತಿ ಬಲಿ
- ಆನೆಗಳ ರಕ್ಷಣೆಗೆ ಪಣತೊಡೋಣ
NAMMUR EXPRESS
ಜಗತ್ತಿನಲ್ಲಿ ಬಲಿಷ್ಟ ಪ್ರಾಣಿಯೆಂದರೆ ಆನೆ. ಗಜರಾಜನಷ್ಟು ಶಕ್ತಿಶಾಲಿಯಾದ ಪ್ರಾಣಿ ವನ್ಯಜೀವಿಗಳಲ್ಲಿ ಮತ್ತೊಂದಿಲ್ಲ. ಆದರೆ ಅರಣ್ಯ ನಾಶ, ದಂತದ ಬೇಡಿಕೆ, ಮಾನವ ಆನೆಯ ಸಂಘರ್ಷ ಮುಂತಾದ ಕಾರಣಗಳಿಂದಾಗಿ ಆನೆಗಳ ಸಂತತಿ ವಿಶ್ವದಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಗಜರಾಜನೆಂದೇ ಕರೆಯಲ್ಪಡುವ ಆನೆಗೆ ಒಂದು ಗತ್ತಿದೆ. ಅಂಥ ಆನೆಗಾಗಿ ಒಂದು ದಿನವನ್ನೂ ಕೂಡ ಆಚರಿಸಲಾಗುತ್ತದೆ. ಇಡೀ ವಿಶ್ವದಾದ್ಯಂತ ಪ್ರತಿವರ್ಷ ಆಗಸ್ಟ್ 12ರಂದು ಆನೆಗಳ ದಿನ ವನ್ನಾಗಿ ಆಚರಿಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಆನೆಗಳ ಬೇಟೆ ಜಾಸ್ತಿಯಾಗಿದೆ. ಹಾಗೇ, ಅವುಗಳ ಸಹಜ ನೆಲೆಗೆ ದಕ್ಕೆ ಬಂದೊದಗಿದೆ. ಮಾನವರೊಂದಿಗೆ ಆನೆಗಳ ಸಂಘರ್ಷ ಹೆಚ್ಚಾಗಿದೆ. ವಿವಿಧ ಕಾರಣಗಳಿಗಾಗಿ ಆನೆಗಳನ್ನು ಸೆರೆಹಿಡಿಯುವ ಪ್ರವೃತ್ತಿ ಬೆಳೆದುಬಂದಿದೆ. ಹೀಗೆ ಆನೆಗಳಿಗೆ ಒದಗಿದ ದುರ್ದೆಸೆಯನ್ನು ಕಡಿಮೆಮಾಡಿ, ಅವುಗಳಿಗೂ ಸುರಕ್ಷಿತ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂಬ ಅರಿವು ಮೂಡಿಸಲು ಈ ವಿಶ್ವ ಆನೆಗಳ ದಿನ ಆಚರಿಸಲಾಗುತ್ತಿದೆ. ದೇಶದಲ್ಲಿ ಒಟ್ಟು 27,312 ಆನೆಗಳಿವೆ. ದೇಶದಲ್ಲಿ ಕರ್ನಾಟಕದಲ್ಲಿಯೇ ಅತಿ ಹೆಚ್ಚಿನ ಆನೆಗಳಿವೆ. 6,049 ಆನೆಗಳು ಕರ್ನಾಟಕದಲ್ಲಿವೆ.
ಆನೆಗಳು ಸಹಜ ಜೀವನ ನಡೆಸಲು ಮನುಷ್ಯರು ಅನುವು ಮಾಡಿಕೊಡಬೇಕು. ಆ ಪ್ರಾಣಿಗಳಿಗೆ ಅಗತ್ಯವಿರುವ ಪ್ರದೇಶ, ಸುರಕ್ಷತೆಯನ್ನು ಒದಗಿಸಿಕೊಡಬೇಕು. ಅವುಗಳಿಗೂ ಉತ್ತಮ ಜೀವನ ನಡೆಸುವ ಹಕ್ಕು ಪ್ರಕೃತಿ ಕೊಟ್ಟಿದೆ. ಬೇಟೆಯಾಡುವುದು, ಸೆರೆ ಹಿಡಿಯವಂಥ ಕೆಲಸಗಳನ್ನು ಮಾಡಬಾರದು ಎಂಬುದನ್ನು ಸಾರುವುದೇ ಈ ವಿಶ್ವ ಆನೆಗಳ ದಿನದ ಪ್ರಮುಖ ಉದ್ದೇಶ ಮತ್ತು ಇದೇ ಕಾರಣಕ್ಕೆ ಆಗಸ್ಟ್ 12 ಆನೆಗಳ ದಿನವಾಗಿ ಮಹತ್ವ ಪಡೆದುಕೊಂಡಿದೆ. ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು.