ಕುಂದಾಪುರದ ವಂಡ್ಸೆಯಲ್ಲಿ ಅವ್ಯವಸ್ಥೆ!
* ರಸ್ತೆಯೋ ಚರಂಡಿಯೋ ವ್ಯತ್ಯಾಸ ತಿಳಿಯದ ಸ್ಥಿತಿ!
* ಜನರ ಆಕ್ರೋಶಕ್ಕೆ ಅಧಿಕಾರಿಗಳ ನಿರ್ಲಕ್ಷ!
* ರಸ್ತೆಯ ಚರಂಡಿಗಿಂತ ಕೊಳಕು ಬಾವಿ ನೀರು!
* ಬೀದಿದೀಪವಿಲ್ಲದೆ ಜನರ ಪರದಾಟ!
NAMMUR EXPRESS NEWS
ಉಡುಪಿ: ವಂಡ್ಸೆ ಪೇಟೆಯ ಕಾನಮ್ಮ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಅಡಿಕೆಕೊಡ್ಲು ಮನೆಗಳಿಗೆ ಹೋಗುವ ದಾರಿಯಲ್ಲಿ ಸೂಕ್ತ ವ್ಯವಸ್ತೆ ಇಲ್ಲದೆ ರಸ್ತೆ ಚರಂಡಿಯಂತೆ ಆಗಿರುತ್ತದೆ. ವಾಹನ ಸವಾರರರು ಹೊಂಡ ಯಾವುದು ? ರಸ್ತೆ ಯಾವುದು ಯೋಚಿಸುತ್ತಾ ಪ್ರಯಾಣಿಸಬೇಕಾಗಿರುವ ಪರಿಸ್ಥಿತಿ ಒದಗಿದೆ.ಈ ದಾರಿಯಲ್ಲಿ ಶಾಲೆ ಮಕ್ಕಳು,ವಯಸ್ಸಾದವರು ಪ್ರತಿ ನಿತ್ಯ ಇದೇ ದಾರಿ ಅವಲಂಬಿಸುತ್ತಾರೆ. ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದ್ದರು ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷಿಸಿರುತ್ತಾರೆಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.
ರಸ್ತೆಯ ಚರಂಡಿಗಿಂತ ಕೊಳಕು ಬಾವಿ ನೀರು!
ಈ ರಸ್ತೆ ಹತ್ತಿರದ ಮನೆಯವರ ಬಾವಿ ರಸ್ತೆಯ ಕೊಳಕು ನೀರಿಗಿಂತ ಕೆಂಪಾಗಿರುತ್ತದೆ. ಈ ಮನೆಯವರು ಪಂಚಾಯತ್ ಆಧಿಕಾರಿ ಅವರಿಗೆ ಖುದ್ದಾಗಿ ವಿಷಯ ತಿಳಿಸಿದ್ದರೂ ಯಾವುದೇ ಪ್ರಯೋಜನ ಆಗಿರುವುದಿಲ್ಲ.
ಬೀದಿದೀಪವಿಲ್ಲದೆ ಜನರ ಪರದಾಟ!
ಗ್ರಾಮ ಸಭೆಯಲ್ಲಿ ಊರಿಗೆ ಬೀದಿ ದೀಪ ಬೇಕು ಎಂದು ಗ್ರಾಮಸ್ಥರು ಹೇಳಿದರೂ ಸಭೆಗೆ ಮಾತ್ರ ಸೀಮಿತವಾಗಿದೆ ಹೊರತು ಗ್ರಾಮಸ್ಥರ ಬೇಡಿಕೆ ಮಾತ್ರ ಹಾಗೇಯೇ ಉಳಿದಿದೆ. ಆದಷ್ಟು ಬೇಗ ಗ್ರಾಮ ಅಗತ್ಯವಾದ ರಸ್ತೆ, ಮತ್ತು ಬೀದಿದೀಪ ಅಳವಡಿಸಬೇಂದು ಈ ಭಾಗದಲ್ಲಿ 30-40 ಮನೆಗಳಿಗೆ ಸಂಪರ್ಕಿಸುವ ರಸ್ತೆ ಆಗಿದ್ದು ಈ ಮಾರ್ಗದಲ್ಲಿ ಬೀದಿ ದೀಪ ಸಹ ಇರುವುದಿಲ್ಲ. ರಾತ್ರಿ ಸಮಯದಲ್ಲಿ ದಾರಿಯಲ್ಲಿ ದಾರಿ ಯಾವುದು ? ಗದ್ದೆ ಯಾವುದು ಗೊತ್ತಾಗುವುದಿಲ್ಲ. ಅತಿ ಶೀಘ್ರದಲ್ಲಿ ಈ ಮಾರ್ಗಕ್ಕೆ ಬೀದಿ ದೀಪ ಅಳವಡಿಸಿ ಅಧಿಕಾರಿಗಳು ಈ ಎಲ್ಲಾ ಸಮಸ್ಯೆಗೂ ಕ್ರಮ ತೆಗೆದುಕೊಳ್ಳಬೇಕಾಗಿ ಸಾರ್ವಜನಿಕರು ಈ ಮೂಲಕ ಕೇಳಿಕೊಂಡಿದ್ದಾರೆ.
ವರದಿ: ರಕ್ಷಿತ್ ಶೆಟ್ಟಿ