ದಸರಾ ಬಳಿಕ ದೀಪಾವಳಿ ಸಂಭ್ರಮಕ್ಕೆ ಜನತೆ ಸಜ್ಜು!
– ಒಂದೇ ತಿಂಗಳಲ್ಲಿ ಎರಡು ಹಬ್ಬ: ಜನತೆಗೆ ಹಬ್ಬದ ಸಂಭ್ರಮ
– ಅ.31ಕ್ಕೆ ನರಕ ಚತುರ್ದಶಿ, ನ.2ಕ್ಕೆ ಬಲಿಪಾಡ್ಯಮಿ
– ಸತತ ನಾಲ್ಕು ದಿನಗಳ ಕಾಲ ರಜೆ ಮತ್ತೆ ಊರಿಗೆ ಜನ!
NAMMUR EXPRESS NEWS
ಬೆಂಗಳೂರು: ದಸರಾ ಸಂಭ್ರಮದ ಬಳಿಕ ಇದೀಗ ದೀಪಾವಳಿ ಸಂಭ್ರಮಕ್ಕೆ ಮತ್ತು ಸಡಗರದ ಹಬ್ಬ ಆಚರಣೆಗೆ ಜನತೆ ಸಿದ್ಧವಾಗುತ್ತಿದ್ದಾರೆ. ಈಗಾಗಲೇ ದಸರಾ ಕೂಡ ಸರಣಿ ರಜೆ ಇದ್ದ ಕಾರಣ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಜನ ಊರಿಗೆ ಬಂದಿದ್ದರು, ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದರು. ತಮ್ಮ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಸಮಯವನ್ನು ಕಳೆದು ಸಂಭ್ರಮದಿಂದ ಆಚರಿಸಿದ್ದರು. ಇದೀಗ ದೀಪಾವಳಿ ಹಬ್ಬದ ಸಂಭ್ರಮ ಕೂಡ ಮತ್ತಷ್ಟು ಅವರಿಗೆ ಸ್ನೇಹಿತರು ಮತ್ತು ಕುಟುಂಬದವರ ಜೊತೆ ಸೇರಿ ಹಬ್ಬವನ್ನ ಆಚರಿಸಲು ಸಹಕಾರಿಯಾಗಿದೆ. ಕಾರಣ ಅ.31 ಗುರುವಾರ ರಜೆ ಇದೆ, ನ.1 ಕನ್ನಡ ರಾಜ್ಯೋತ್ಸವ, ಶನಿವಾರ ಕೂಡ ಬಲಿಪಾಡ್ಯಮಿ ಇದ್ದು, ನ. 3 ಭಾನುವಾರ ರಜೆ ಇರಲಿದೆ. ಸತತ ನಾಲ್ಕು ದಿನಗಳ ಕಾಲ ರಜೆ ಇರಲಿದೆ. ಜೊತೆಗೆ ಒಂದು ಎರಡು ರಜೆಯನ್ನು ಹಾಕಿದಲ್ಲಿ ಕಚೇರಿ ಹಾಗೂ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಜನ ಹಬ್ಬವನ್ನು ಅತ್ಯಂತ ಸಂಭ್ರಮವಾಗಿ ಆಚರಿಸಲು ಸಿದ್ಧವಾಗಿದ್ದಾರೆ.
ದೀಪಾವಳಿಗೆ ವಿಶೇಷ ಸಿದ್ಧತೆ: ಅಂಗಡಿಗಳ ಆಫರ್
ಈಗಾಗಲೇ ಹಬ್ಬದ ಸಂಭ್ರಮಕ್ಕೆ ಎಲ್ಲೆಡೆ ವಿಶೇಷವಾದ ಸಿದ್ಧತೆ ನಡೆಯುತ್ತಿದೆ. ಅಂಗಡಿ ಮುಗ್ಗಟ್ಟುಗಳು ವಿವಿಧ ಶೋರೂಮ್ ಗಳು ಹಾಗೂ ಕಂಪನಿಗಳು ಆಫರ್ ಗಳನ್ನು ಘೋಷಿಸಿವೆ. ಜೊತೆಗೆ ಬಟ್ಟೆ, ಚಿನ್ನ ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ವಿಶೇಷವಾದ ದೀಪಾವಳಿ ರಿಯಾಯಿತಿಯನ್ನು ಘೋಷಣೆ ಮಾಡಿದ್ದು, ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಒಂದೇ ತಿಂಗಳಲ್ಲಿ ಎರಡು ಹಬ್ಬಗಳು ಬಂದಿರುವುದು ಜನರಿಗೆ ಹೆಚ್ಚಿನ ಸಂತಸ ತಂದಿದೆ. ದಸರಾ ಸಂಭ್ರಮದಲ್ಲೂ ಕೂಡ ಬಸ್ ಹಾಗೂ ಇತರೆ ವಾಹನಗಳು ರಷ್ ಆಗಿದ್ದು ದೀಪಾವಳಿಗೂ ಮೊದಲೇ ಬುಕ್ ಮಾಡಿಕೊಳ್ಳುವುದು ಒಳಿತು.