ಅಬ್ದುಲ್ ಕಲಾಂ ದೇಶ ಕಂಡ ಗ್ರೇಟ್ ವ್ಯಕ್ತಿ!
– ಜನ್ಮ ದಿನದ ಸವಿ ನೆನಪಿಗಾಗಿ ‘ವಿಶ್ವ ವಿದ್ಯಾರ್ಥಿಗಳ ದಿನ’!
– ಭಾರತದ ಕ್ಷಿಪಣಿ ಮನುಷ್ಯ, ಭಾರತ ಕಂಡ ಗ್ರೇಟ್ ಸೈಂಟಿಸ್ಟ್
– ದೇಶದ ಅತಿ ಹೆಚ್ಚು ಜನ ಪ್ರೀತಿಸಿದ ರಾಷ್ಟ್ರಪತಿ
NAMMUR EXPRESS NEWS
ಬೆಂಗಳೂರು: ಅ.15ರಂದು ವಿಶ್ವ ವಿದ್ಯಾರ್ಥಿಗಳ ದಿನ. ಪ್ರತಿ ವರ್ಷ ಅಕ್ಟೋಬರ್ 15ರಂದು ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಗುತ್ತದೆ.ಭಾರತದ ಕ್ಷಿಪಣಿ ಮನುಷ್ಯ, ಭಾರತ ಕಂಡ ಗ್ರೇಟ್ ಸೈಂಟಿಸ್ಟ್ ಮತ್ತು ಶಿಕ್ಷಕರು ಆದ ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮ ದಿನದ ಸವಿ ನೆನಪಿಗಾಗಿ ‘ವಿಶ್ವ ವಿದ್ಯಾರ್ಥಿಗಳ ದಿನ’ವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. 2010 ರಲ್ಲಿ ವಿಶ್ವಸಂಸ್ಥೆಯು (ಯುಎನ್ಒ) ಅಕ್ಟೋಬರ್ 15 ರಂದು ‘ವಿಶ್ವ ವಿದ್ಯಾರ್ಥಿಗಳ ದಿನ’ ಎಂದು ಘೋಷಿಸಿತು. ಈ ಮೂಲಕ ಅವರು ಶಿಕ್ಷಣವನ್ನು ಉತ್ತೇಜಿಸಲು ಪ್ರಾಮಾಣಿಕ ಪ್ರಯತ್ನವನ್ನು ಸಹ ನೆನೆಯುವುದು ಇದರ ಉದ್ದೇಶವು ಆಗಿದೆ. ಸಮಾಜ ಮತ್ತು ಭವಿಷ್ಯವನ್ನು ರೂಪಿಸುವಲ್ಲಿ ವಿದ್ಯಾರ್ಥಿಗಳ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ. ಇನ್ನು ಎ.ಪಿ.ಜೆ ಅಬ್ದುಲ್ ಕಲಾಂ ಅವರು 1998ರಲ್ಲಿ ಪೋಖ್ರಾನ್ -II ಪರಮಾಣು ಪರೀಕ್ಷೆಗಳಲ್ಲಿ ಅವರ ಪಾತ್ರಕ್ಕಾಗಿ ‘ಭಾರತದ ಕ್ಷಿಪಣಿ ಮನುಷ್ಯ’ ಎಂಬ ಬಿರುದನ್ನು ಪಡೆದರು.
ಅವರು 2005 ರಲ್ಲಿ ಸ್ವಿಟ್ಜರ್ಲೆಂಡ್ಗೆ ಭೇಟಿ ನೀಡಿದರು, ನಂತರ ದೇಶ ಗೌರವಾರ್ಥವಾಗಿ ಮೇ 26 ಅನ್ನು ‘ವಿಜ್ಞಾನಿ ದಿನ’ ಎಂದು ಘೋಷಿಸಿತು. ಅಬ್ದುಲ್ ಕಲಾಂ ರವರು ಭಾರತದ 11ನೇ ರಾಷ್ಟ್ರಪತಿ ಆಗಿದ್ದು, ದೇಶದ ಅತಿಹೆಚ್ಚು ಜನ ಪ್ರೀತಿಸಿದ ರಾಷ್ಟ್ರಪತಿ ಆಗಿದ್ದರಿಂದ ‘ಜನರ ರಾಷ್ಟ್ರಪತಿ’ ಎಂದೇ ಪ್ರಖ್ಯಾತಿ ಆಗಿದ್ದರು. ಇವರು ಬೋಧಿಸುವುದನ್ನು ಹೆಚ್ಚು ಇಷ್ಟಪಡುತ್ತಿದ್ದರು. ಹಾಗೆ ‘ನಾನು ಶಿಕ್ಷಕನಾಗಿ ನೆನಪಿನಲ್ಲಿರಲು ಇಷ್ಟಪಡುತ್ತೇನೆ’ ಎಂದಿದ್ದರು ಕಲಾಂ.