ಭೂಮಿ ಹುಣ್ಣಿಮೆ ಹಬ್ಬದಲ್ಲಿ ಮಿಂದೆದ್ದ ರೈತರು!
– 101 ಬಗೆಯ ಬೆರಕೆ ಸೊಪ್ಪಿನ ಪಲ್ಯ ತಳಿದು ಭೂಮಿ ಪೂಜೆ
– ಭೂಮಿ ತಾಯಿಗೆ ಸೀಮಂತದ ಹಬ್ಬ: ಮುಂಜಾನೆ ಹಬ್ಬ
– ಭೂಮಿ ತಾಯಿಗೆ ಪೂಜೆ ಮಾಡಿದ ರೈತ ಕುಟುಂಬ
NAMMUR EXPRESS NEWS
ರೈತರಿಗೆ ಭೂಮಿ ಹುಣ್ಣಿಮೆ ಹಬ್ಬ ಸಂಭ್ರಮ ಸಡಗರಗಳ ದೊಡ್ಡ ಹಬ್ಬ. ಭೂಮಿ ತಾಯಿ ಗರ್ಭಿಣಿಯಾಗಿದ್ದಾಳೆ, ತಾಯಿಗೆ ಸೀಮಂತ ಮಾಡಬೇಕು ಎಂಬ ನಂಬಿಕೆಯಿಂದ ಭೂಮಿ ಹುಣ್ಣಿಮೆ ನಡೆಸುವ ರೂಢಿ ತಲೆತಲಾಂತರದಿಂದ ಬಂದಿದೆ. ಬುಧವಾರ 101 ಬಗೆಯ ಸೊಪ್ಪು, ತರಕಾರಿ ಹೆರಕಿ ಪಲ್ಯ ಮಾಡಿ ಅಡುಗೆ ಮಾಡಲಾಯಿತು. ಗುರುವಾರ ಮುಂಜಾನೆ ಗದ್ದೆ ತೋಟಗಳಲ್ಲಿ ರೈತರು ಕುಟುಂಬದೊಂದಿಗೆ ಸೇರಿ ಪೂಜೆ ಮಾಡಲಾಯಿತು.
ಮಲೆನಾಡು, ಕರಾವಳಿ ಈ ಭಾಗಗಳನ್ನು ಕೂಡ ಈ ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಣೆ ಮಾಡುತ್ತಾರೆ ಮತ್ತು ಈಗಾಗಲೇ ಎಲ್ಲಾ ಸಿದ್ಧತೆಗಳು ಕೂಡ ನಡೆಯುತ್ತಾ ಇವೆ. ಭೂಮಿ ಹುಣ್ಣಿಮೆ ಹಬ್ಬದ ಆಚರಣೆಗೆ ಭೂಮಣ್ಣಿ ಬುಟ್ಟಿ ಅತ್ಯಂತ ಮಹತ್ವದ ವಸ್ತು . ಇದನ್ನು ಹಿಂದಿನಿಂದಲೂ ಕೂಡ ಇದನ್ನ ಕಾಪಾಡಿಕೊಂಡು ರೂಡಿಸಿಕೊಂಡು, ಸಿಂಗರಿಸಿ ಪೂಜೆ ಮಾಡಲಾಗಿದೆ.
ಭೂಮಿ ಹುಣ್ಣಿಮೆ ಪೂಜೆಯಲ್ಲಿ ಗ್ರಾಮೀಣ ಭಾಗದ ಮಹಿಳೆಯರು ರಾತ್ರಿ ಪೂರ್ತಿ ಅಡುಗೆ ಮಾಡಿ ವಿಶೇಷ ಖಾದ್ಯಗಳನ್ನು ತಯಾರಿದ್ದಾರೆ.
‘ಹಚ್ಚಂಬಲಿ.. ಹಾಲಂಬಲಿ…ಬೇಲಿ ಮೇಲೆ ಇರುವ ದಾರ ಹಿರೇಕಾಯಿ ಭೂಮಿ ತಾಯಿ ಊಟ ಮಾಡೇ”
ಸಮಸ್ತ ಜನತೆಗೆ ಭೂಮಿ ಹುಣ್ಣಿಮೆ ಹಬ್ಬದ ಶುಭಾಶಯಗಳು.