ನಯನಾ ಜೆ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ!
– ದೆಹಲಿಯಲ್ಲಿ ಗ್ಲೋಬಲ್ ವುಮನ್ ಇನ್ಸ್ಪಿರೇಶನ್ ಅವಾರ್ಡ್ ಅಂಡ್ 2024 ಸ್ವೀಕಾರ
– ಮಹಿಳಾ ಸಂಘಟನೆ, ಸಮಾಜ ಪರ ಚಟುವಟಿಕೆಗೆ ಸಂದ ಮನ್ನಣೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಮಹಿಳಾ ಮುಖಂಡರು, ಮಾಜಿ ಪಟ್ಟಣ ಪಂಚಾಯತ್ ಸದಸ್ಯರು, ಮಹಿಳಾ ವೇದಿಕೆ ಅಧ್ಯಕ್ಷರು ಆದ ಸಮಾಜ ಮುಖಿ ಚಿಂತನೆಯ ನಯನಾ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಗ್ಲೋಬಲ್ ವುಮನ್ ಇನ್ಸ್ಪಿರೇಶನ್ ಅವಾರ್ಡ್ 2024 ಲಭಿಸಿದೆ.
ತೀರ್ಥಹಳ್ಳಿಯ ಪ್ರಸಿದ್ಧ ವಸ್ತ್ರ ಮಳಿಗೆಗಳಲ್ಲಿ ಒಂದಾದ ಸಹನಾ ಫ್ಯಾಶನ್ ಸಿಲ್ಕ್ ಮಾಲಕಿ ಹಾಗೂ ಸಂಘಟಕಿ ನಯನಾ ಜೆ ಶೆಟ್ಟಿ ಅವರು ಅ.17ರಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ತೀರ್ಥಹಳ್ಳಿ ಮಾತ್ರವಲ್ಲದೆ ಮಲೆನಾಡಿನಲ್ಲಿ ಮಹಿಳೆಯರ ಸಂಘಟನೆ ಮಾಡುವ ಜೊತೆಗೆ ಮಹಿಳೆಯರ ಕಷ್ಟ ಸುಖಗಳಿಗೆ ಸ್ಪಂದಿಸುವ ನಯನ ಶೆಟ್ಟಿ ಅವರು ಕಳೆದ ಅನೇಕ ವರ್ಷಗಳಿಂದ ಮಹಿಳಾ ದಿನಾಚರಣೆಯನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದಾರೆ. ನೂರಾರು ಮಹಿಳೆಯರಿಗೆ ವೇದಿಕೆ ನೀಡಿದ್ದಾರೆ. ಸಾಧಕ ಮಹಿಳೆಯರಿಗೆ ಸನ್ಮಾನಿಸಿದ್ದಾರೆ. ಜೊತೆಗೆ ಮಹಿಳಾ ಕ್ಷೇತ್ರದಲ್ಲಿ ತಮ್ಮದೇ ಆದಂತಹ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಟಾಪ್ ಹಂಡ್ರೆಡ್ ಇನ್ಸ್ಪಿರೇಷನ್ ವಮೆನ್ಸ್ ಆಫ್ 2024 ಅವಾರ್ಡ್ ನೀಡಲಾಗಿದೆ.
ಮತ್ತಷ್ಟು ಸಮಾಜಮುಖಿ ಕೆಲಸ ಮಾಡಲು ಪ್ರೇರಣೆ
ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಜೊತೆ ಮಾತನಾಡಿದ ನಯನಾ ಶೆಟ್ಟಿ ಅವರು, ಈ ಪ್ರಶಸ್ತಿ ನನಗೆ ಮತ್ತಷ್ಟು ಕೆಲಸ ಮಾಡುವ ಶಕ್ತಿಯನ್ನು ನೀಡಿದೆ. ಇಂತಹ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾಗಿರುವುದು ಸಂತಸ ತಂದಿದೆ. ಮತ್ತಷ್ಟು ಸಮಾಜಪರ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.