ಮಾರ್ಚ್ ವೇಳೆಗೆ ಬೆಂಗಳೂರು ಕಂಬಳ?!
* ಹಲವು ಸವಾಲು, ಜೊತೆಗೆ ಕೋಟ್ಯಾಂತರ ಖರ್ಚು
* ಮೊದಲ ವರ್ಷದ ಉತ್ಸಾಹ ಈಗಿಲ್ಲ!?
NAMMUR EXPRESS NEWS
ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ವರ್ಷ ಅದ್ದೂರಿಯಾಗಿ ನಡೆದಿದ್ದ ಕಂಬಳಕ್ಕೆ ಇನ್ನು ಯಾವುದೇ ರೀತಿಯ ಸಿದ್ಧತೆ ನಡೆದಿಲ್ಲ.ಹೀಗಾಗಿ ಮಾರ್ಚ್ ವೇಳೆಗೆ ಕಂಬಳ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಕಂಬಳ ನಡೆಸುವುದು ಬಹಳ ಕಷ್ಟದ ಕೆಲಸ. ಪ್ಯಾಲೇಸ್ ಗ್ರೌಂಡ್ ಅನುಮತಿ ದೊರೆಯಬೇಕಾದರೆ 3 ತಿಂಗಳ ಮುನ್ನ ಪ್ರಕ್ರಿಯೆ ಆರಂಭಿಸಬೇಕು. ಮೈಸೂರು ಅರಮನೆ ಮತ್ತು ಸರ್ಕಾರದಿಂದ ಅನುಮತಿ ಪಡೆಯಬೇಕು. ಕರೆ ನಿರ್ಮಾಣ ಸಹಿತ ಮೂಲ ವ್ಯವಸ್ಥೆ ಕಲ್ಪಿಸಿಡಬೇಕು ಹಾಗೂ ಕೋಣಗಳನ್ನು ತುಳುನಾಡಿನಿಂದ ಬೆಂಗಳೂರಿಗೆ ಕೊಂಡೊಯ್ಯಬೇಕು. ಇಂತಹ ಹತ್ತು ಹಲವು ಸವಾಲು ಎದುರಿಸುವ ಜೊತೆಗೆ ಕೋಟ್ಯಂತರ ರೂ. ಖರ್ಚು ಮಾಡಬೇಕು. ಕಳೆದ ವರ್ಷ ಮೊದಲ ವರ್ಷದ ಕಂಬಳವೆಂಬ ನೆಲೆಗಟ್ಟಿನಲ್ಲಿ ಯಶಸ್ವಿಯಾಗಿತ್ತು., ಕಂಬಳ ಋತುವಿನ ಆರಂಭದಲ್ಲಿ ಬೆಂಗಳೂರಿನಲ್ಲಿ ಕಂಬಳ ನಡೆಯುವುದಿಲ್ಲ. ಆದರೆ ಮಾರ್ಚ್ನಲ್ಲಿ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಕಂಬಳ ಸಮಿತಿ ಹಾಗೂ ಕೋಣಗಳ ಯಜಮಾನರುಗಳು ಒಪ್ಪಿಗೆ ಸೂಚಿಸಿದರೆ ಮಾರ್ಚ್ನಲ್ಲಿ ಕಂಬಳ ನಡೆಸಬಹುದೇ ಎಂಬ ಚರ್ಚೆ ಆರಂಭವಾಗಿದೆ ಎನ್ನಲಾಗಿದೆ. ಬೆಂಗಳೂರು ಸಮಿತಿ ಅರಮನೆ ಮೈದಾನಕ್ಕೆ ಅನುಮತಿಗೆ ಅರ್ಜಿ ಹಾಕಿದೆ ಎನ್ನಲಾಗಿದೆ.