ರಸ್ತೆ ಪರಿಹಾರ ಹಣ ಕೊಡಿಸುವುದಾಗಿ ನಂಬಿಸಿ ನಾಪತ್ತೆ!
* ನಾವಿದ್ದೇವೆ ನೀವು ಹೆದರಬೇಡಿ ಎಂದು ಇಂಜಿನಿಯರುಗಳು ನಾಪತ್ತೆ
* ರೈತರಿಗೆ, ಸುಪ್ರಿಂ ಕೋರ್ಟ್ ನದೇಶದಂತೆ 4 ಪಟ್ಟು ಪರಿಹಾರ ಸಿಗಬೇಕು!
* ಅರ್ಜಿಯ ಮೂಲಕ ಮುಖ್ಯ ನ್ಯಾಯಾಧೀಶರಿಗೆ ಮನವಿ
* ತೀರ್ಥಹಳ್ಳಿಯಿಂದ ನೆಲ್ಲಿಸರ ಕ್ಯಾಂಪ್ ವರೆಗೂ ಚತುಷ್ಪತ ಹೈವೇ
NAMMUR EXPRESS NEWS
ತೀರ್ಥಹಳ್ಳಿ:ತೀರ್ಥಹಳ್ಳಿ ತಾಲ್ಲೂಕಿನ, ಭಾರತಿಪುರದಲ್ಲಿ ಜಮೀನು ಕಳೆದುಕೊಂಡ ರೈತರಿಗೆ ಇನ್ನೂ ಭೂ ಪರಿಹಾರ ಬಂದಿರುವುದಿಲ್ಲ. ಇಲ್ಲಿ ಸ್ಥಳಿಯ ಇಂಜಿನಿಯರುಗಳು ಕಂಟ್ರಾಕ್ಟರ್ ನೊಂದಿಗೆ ಶಾಮೀಲಾಗಿ, ರೈತರಿಗೆ 40% ಹಣ ನಾವು ಕಂಟ್ರಾಕ್ಟರ್ ನವರಿಂದ ಕೊಡಿಸುತ್ತೇವೆ ಎಂದು ಹೇಳಿ ನಂಬಿಸಿ, ರಸ್ತೆ ಅಗಲೀಕರಣ ಕೆಲಸ ಮುಗಿಸಿಯಾದ ಮೇಲೆ ಇಂಜಿನಿಯರುಗಳು ಕೈ ಎತ್ತಿದ್ದಾರೆ. ಇಂಜಿನಿಯರುಗಳು ನಾವಿದ್ದೇವೆ ನೀವು ಹೆದರಬೇಡಿ ಎಂದು ಹೇಳಿ ಈಗ ನಾಪತ್ತೆಯಾಗಿದ್ದಾರೆ. ಈಗ ಇಂಜಿನಿಯರುಗಳೊಂದಿಗೆ ಪರಿಹಾರದ ವಿಷಯ ಕೇಳಿದರೆ , ನಮಗೆ ಸಂಬಂಧ ಇಲ್ಲಾ, ಎಂದು ಹಾರಿಕೆಯ ಉತ್ತರ ಕೊಡುತ್ತಿದ್ದಾರೆ.ಈ ರೀತಿ ಸುಳ್ಳು ಹೇಳಿ ಮೋಸ ಮಾಡಿದ ಇಂಜಿನಿಯರುಗಳನ್ನು ಸರ್ಕಾರ ಹಾಗೂ ಹೈ ಕೋರ್ಟ್ ಕಾನೂನು ರೀತಿಯಲ್ಲಿ ಬಂಧಿಸಿ ಕ್ರಮ ಕೈ ತೆಗೆದುಕೊಳ್ಳಬೇಕಾಗಿ ಕೇಳಿಕೊಳ್ಳಲಾಗಿದೆ.
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮಾನ್ಯ ಹೈ ಕೋರ್ಟ್ ಮತ್ತು ಸುಪ್ರಿಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು ಈ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡು ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿ ಅನ್ಯಾಯಕ್ಕೆ ಒಳಗಾಗಿರುವ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು. ಸುಪ್ರಿಂ ಕೋರ್ಟ್ ಆದೇಶವನ್ನು ದಿಕ್ಕರಿಸಿರುತ್ತಾರೆ. ನ್ಯಾಯಾಂಗ ನಿಂದನೆ ಆಗಿರುತ್ತದೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಇಲ್ಲಿ ಜಮೀನು ಕಳೆದುಕೊಂಡಿರುವ ರೈತರಿಗೆ, ಮಾನ್ಯ ಸುಪ್ರಿಂ ಕೋರ್ಟ್ ನ ಆದೇಶದಂತೆ 4 ಪಟ್ಟು ಪರಿಹಾರ ಸಿಗುವಂತೆ ಮಾಡಬೇಕು. ಕೂಡಲೆ ನ್ಯಾಯ ದೊರಕಿಸಿಕೊಡಬೇಕು. ಈ ಅರ್ಜಿಯ ಮೂಲಕ ಮುಖ್ಯ ನ್ಯಾಯಾಧೀಶರಿಗೆ ಮನವಿಯನ್ನು ಸಲ್ಲಿಸಲಾಗಿದೆ.