ಬೆಜ್ಜವಳ್ಳಿ ಸರ್ಕಲ್ ಅವ್ಯವಸ್ಥೆ : ಇನ್ನೆಷ್ಟು ಬಲಿ ಬೇಕು..?
– ಬಸ್ ಬೈಕ್ ಅಪಘಾತ: ಬಾಲಕ ಸಾವು, ಪದೇ ಪದೇ ಅಪಘಾತ
– ರಸ್ತೆ ಉಬ್ಬು ನಿರ್ಮಿಸಿ ಬ್ಯಾರಿಕೇಡ್ ಅಳವಡಿಸಲು ಪಟ್ಟು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿಯ ತಿರುವಿನಲ್ಲಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ತೀರ್ಥಹಳ್ಳಿಯ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿ ಪ್ರಥಮ್ ಕೆ.ಯು (16) ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದ್ದು ಇದೀಗ ಬೆಜ್ಜವಳ್ಳಿ ಸರ್ಕಲ್ ಅಲ್ಲಿ ಉಬ್ಬುಗಳನ್ನು ಹಾಕಬೇಕು ಎಂಬ ಒತ್ತಾಯ ಹೆಚ್ಚಾಗಿದೆ. ಪ್ರಥಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಯಾಗಿದ್ದು ತನಿಕಲ್ ಗ್ರಾಮದ ಕೌಟುಮನೆ ಗ್ರಾಮದವರು. ಪ್ರಥಮ್ ತಂದೆ 3 ವರ್ಷಗಳ ಹಿಂದೆ ಮೃತಪಟ್ಟಿದ್ದು ತಾಯಿ ತನಿಕಲ್ ಶಾಲೆಯಲ್ಲಿ ಬಿಸಿಯೂಟ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಲೇಜಿಗೆ ತೆರಳಲು ಬಸ್ ವ್ಯವಸ್ಥೆ ಇಲ್ಲದ ಹಿನ್ನಲೆಯಲ್ಲಿ 20 ದಿನಗಳ ಹಿಂದೆ ಬೆಂಗಳೂರಿನಿಂದ ಬೈಕ್ ಖರೀದಿಸಲಾಗಿತ್ತು. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ನಡೆದಿದ್ದು ಹೇಗೆ?
ಬೆಜ್ಜವಳ್ಳಿ ಸರ್ಕಲ್ ಇಂದ ತೀರ್ಥಹಳ್ಳಿ ಕಡೆಗೆ ಹೋಗುತ್ತಿದ್ದ ಪ್ರಥಮ್ ಮತ್ತು ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಬಸ್ ನಡುವೆ ಅಪಘಾತ ಸಂಭವಿಸಿದೆ. ಒಂದು ವೇಳೆ ಹಂಪ್ಸ್ ಇದ್ದಿದ್ದರೆ ಬದುಕುವ ಸಾಧ್ಯತೆ ಹೆಚ್ಚಿತ್ತು.
ಹಂಪ್ಸ್, ಬ್ಯಾರಿಕೆಡ್ ಅಳವಡಿಕೆಗೆ ಪಟ್ಟು
ಬೆಜ್ಜವಳ್ಳಿ ಸರ್ಕಲ್ ನಲ್ಲಿ ರಸ್ತೆ ಅಪಘಾತದಲ್ಲಿ ಪ್ರಥಮ್ ಬಲಿಯಾಗಿದ್ದಾನೆ. ಈ ಹಿಂದೆಯೂ ಅನೇಕ ಅಪಘಾತವಾಗಿದೆ. ಸರ್ಕಲ್ ನಲ್ಲಿ ಮಕ್ಕಳು ವಯಸ್ಸಾದವರು ಬಸ್ಸಿಗೆ ಕಾಯುತ್ತಾರೆ. ಇಂದು ಹೆಚ್ಚು ಜನ ಇಲ್ಲದ ಕಾರಣ ದೊಡ್ಡ ಅನಾಹುತ ಆಗುವುದು ತಪ್ಪಿದೆ, ಆ ರಸ್ತೆ ಗೆ ಬ್ಯಾರಿಕೆಡ್ ಹಾಕಿ ವಾಹನಗಳ ವೇಗವನ್ನು ತಗ್ಗಿಸಬೇಕಿದೆ. ಈ ವ್ಯವಸ್ಥೆ ಮಾಡುವುದರ ಮೂಲಕ ಮುಂದಾಗಬಹುದಾದ ಅನಾಹುತ ಅವಘಡ ಗಳನ್ನು ತಪ್ಪಿಸಬಹುದು.ಎಂದು ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಗೆ ಅಗ್ರಹಿಸಿದ್ದಾರೆ.