ಪತ್ನಿ, ಪತ್ನಿ ಪ್ರಿಯಕರನ ದೊಣ್ಣೆಯಿಂದ ಹೊಡೆದು ಕೊಲೆ, ನಂತರ ತಾನೂ ಆತ್ಮಹತ್ಯೆ!
– ಚಿತ್ರದುರ್ಗ: ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ!
– ಮೈಸೂರು: ಮುಡಾ ಕಚೇರಿ ಮೇಲೆ ಐಟಿ ರೇಡ್: ಸಿಎಂಗೆ ಸಂಕಷ್ಟ
NAMMUR EXPRESS NEWS
ಚಿತ್ರದುರ್ಗ/ ಬೆಂಗಳೂರು: ಕಾಲೇಜು ಕಟ್ಟಡದ ಮೇಲಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಟ್ಟಡ ಮೇಲಿಂದ ಬಿದ್ದು ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ. ಚಿತ್ರದುರ್ಗ ನಗರದ ಚಿತ್ರಾ ಡಾನ್ ಬೋಸ್ಕೋ ಕಾಲೇಜಲ್ಲಿ ಪ್ರಥಮ ಬಿಎಸ್ಸಿ ಓದುತ್ತಿದ್ದರು. ಚಿತ್ರದುರ್ಗದ ಮೆದೆಹಳ್ಳಿ ನಿವಾಸಿ ಆಗಿದ್ದ ಚಿತ್ರಾ ಕಾಲೇಜಿಗೆ ಬಂದು ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸ್ಥಳಕ್ಕೆ ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರೇಮಾಳಿಗೆ ಯುವಕನೊಬ್ಬ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ತರುಣ್ ಎಂಬಾತ ಪ್ರೀತಿ ಮಾಡುವಂತೆ ಪ್ರೇಮಾಳಿಗೆ ಪೀಡುಸುತ್ತಿದ್ದ ಎನ್ನಲಾಗಿದೆ. ವಾಟ್ಸ್ ಆ್ಯಪ್ನಲ್ಲಿ ನಿತ್ಯವೂ ಚಾಟಿಂಗ್ ಮಾಡಿ ಕಿರಿಕಿರಿ ಮಾಡುತ್ತಿದ್ದ. ಆತ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ತರುಣ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು.
ಮೈಸೂರು ಮುಡಾ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ
ಬೆಂಗಳೂರು: ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಆರಂಭವಾಗಿದೆ. ಇದರ ಬೆನ್ನಲ್ಲೇ ಮೈಸೂರು ಮುಡಾ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಮುಡಾ ಹಗರಣದ ತನಿಖೆ ಬೆನ್ನಲ್ಲೇ ಇಡಿ ದಾಳಿ ಮಾಡಿರುವುದು ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಶಾಕ್ ಎದುರಾದಂತಾಗಿದೆ. 20ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ಕಾರ್ಯಾಚರಣೆ ಆಗುತ್ತಿದ್ದು ದಾಖಲೆಗಳಿಗಾಗಿ ಶೋಧ ಕಾರ್ಯ ನಡೆಸಿದೆ. ಮುಡಾ ಸೈಟ್ ಹಂಚಿಕೆ ದಾಖಲೆ, ಅಕ್ರಮ ಹಣ ವರ್ಗಾವಣೆ, ಭೂ ಕಬಳಿಕೆ ಕೇಸ್ ಇಡಿಯಲ್ಲಿ ದಾಖಲಾಗಿದ್ದು, ಇದರ ಹಿನ್ನೆಲೆಯಲ್ಲಿ ಬಂದು ದಾಖಲೆಗಳನ್ನು ತಡಕಾಡುತ್ತಿದೆ.
ಹಗರಣದ ಸಂಬಂಧಿತವಾಗಿ ದಾಖಲೆಗಳನ್ನು ನೀಡುವಂತೆ ಇಡಿ ಅಧಿಕಾರಿಗಳು 3 ನೋಟಿಸ್ ಹಾಗೂ ಸಮನ್ಸ್ ಜಾರಿ ಮಾಡಿತ್ತು. ಆದರೆ ಇದಕ್ಕೆ ಮುಡಾ ಅಧಿಕಾರಿಗಳು ಉತ್ತರಿಸಿರಲಿಲ್ಲ. ದಾಖಲೆ ಒದಗಿಸದೆ ನಿರ್ಲಕ್ಷ್ಯ ತೋರಿದ ಮುಡಾಗೆ ದಾಳಿಯ ತಿರುಗೇಟು ಕೊಟ್ಟಿದೆ ಇಡಿ. ಮೈಸೂರು ಮಾತ್ರವಲ್ಲದೆ ಮುಡಾ ಕೇಸ್ನ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ದೇವರಾಜು ಅವರ ಬೆಂಗಳೂರಿನ ನಿವಾಸದ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳಿಗೆ ಹುಡುಕಾಡಿದ್ದಾರೆ.
ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಮೈಸೂರು ಮುಡಾ ಕಾರ್ಯದರ್ಶಿ ಪ್ರಸನ್ನ, ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಅವರು ಕೇಳುವ ಎಲ್ಲಾ ದಾಖಲೆಗಳನ್ನು ಒದಗಿಸುತ್ತೇವೆ ಎಂದಿದ್ದಾರೆ. ಇಡಿ ಅಧಿಕಾರಿಗಳ ದಾಖಲೆ ಪರಿಶೀಲನೆ ಕಚೇರಿ ಒಳಗೆ ನಡೆಯುತ್ತಿದ್ದರೆ, ಹೊರ ಭಾಗದಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಟೈಟ್ ಸೆಕ್ಯೂರಿಟಿ ಒದಗಿಸಿದ್ದಾರೆ.
ಪತ್ನಿ, ಪತ್ನಿ ಪ್ರಿಯಕರನ ದೊಣ್ಣೆಯಿಂದ ಹೊಡೆದು ಕೊಲೆ, ನಂತರ ತಾನೂ ಆತ್ಮಹತ್ಯೆ!
ಬೆಂಗಳೂರು: ಶೀಲ ಶಂಕಿಸಿ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಪತಿಯು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಕೋಣನಕುಂಟೆ ಬಳಿಯ ಆರ್ಬಿಐ ಲೇಔಟ್ನ ಸೋಮೇಶ್ವರ ಬಡಾವಣೆಯಲ್ಲಿ ಘಟನೆ ನಡೆದಿದೆ. ಸೋಮೇಶ್ವರ ಬಡಾವಣೆಯ ಕೋಲುಸು ಲಕ್ಷ್ಮೀ ಮತ್ತು ಗಣೇಶ್ಕುಮಾರ್ ಕೊಲೆಯಾದವರು. ಲಕ್ಷ್ಮೀಯ ಪತಿ, ಆರೋಪಿ ಕೋಲುಸು ಗೊಲ್ಲ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆಂಧ್ರಪ್ರದೇಶದ ಮೂಲದ ಈ ಮೂವರು ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದರು. ನಾಲೈದು ವರ್ಷಗಳಿಂದ ನಗರದಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಸದ್ಯ ಸೋಮೇಶ್ವರ ಲೇಔಟ್ನ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಮೂವರೂ ಅದೇ ಕಟ್ಟಡದ ನೆಲಮಹಡಿಯ ಕೊಠಡಿಯಲ್ಲಿ ಒಟ್ಟಿಗೆ ವಾಸವಾಗಿದ್ದರು. ಈ ಮಧ್ಯೆ ಕೋಲುಸು ಗಣೇಶ್ ಕುಮಾರ್ ಜತೆ ಹೆಚ್ಚು ಸಲುಗೆ ಬೆಳೆಸಿಕೊಂಡಿದ್ದಳು. ಕೋಲುಸು ಗೊಲ್ಲ, ಪತ್ನಿಯ ಶೀಲ ಶಂಕಿಸಿ ಆಗಾಗ್ಗೆ ಜಗಳವಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.