ತೀರ್ಥಹಳ್ಳಿಯಲ್ಲಿ ಮೃತ ತಹಸೀಲ್ದಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ
– ಗ್ರಾಮೀಣಾಭಿವೃದ್ಧಿ ಭವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಜನ ಪ್ರತಿನಿಧಿಗಳು, ಅಧಿಕಾರಿಗಳು, ಪ್ರಮುಖರು ಹಾಜರ್
– ಪಟ್ಟಣ ಪಂಚಾಯತ್ ಅಧ್ಯಕ್ಷರಿಂದಲೂ ಸಂತಾಪ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ದಂಡಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಜಕ್ಕಣ್ಣ ಗೌಡರ್ ಇತ್ತೀಚಿಗೆ ವಿಧಿವಶರಾದ ಹಿನ್ನೆಲೆ ತಾಲೂಕು ಆಡಳಿತ ತೀರ್ಥಹಳ್ಳಿ, ಸಹಭಾಗಿತ್ವದಲ್ಲಿ ಭಾವಪೂರ್ವ ಶ್ರದ್ಧಾಂಜಲಿ ಸಭೆಯನ್ನು ಗ್ರಾಮೀಣಾಭಿವೃದ್ಧಿ ಭವನದಲ್ಲಿ ನೆರವೇರಿಸಲಾಯಿತು. ಶಾಸಕ ಆರಗ ಜ್ಞಾನೇಂದ್ರ ಅವರು ಮಾತನಾಡಿ
ನಿಷ್ಕಲ್ಮಶವಾದ ಮುಖಭಾವ, ಪ್ರತಿಯೊಬ್ಬರನ್ನು ಸೌಜನ್ಯದಿಂದ ನಡೆಸಿಕೊಳ್ಳುವಂತಹ ವ್ಯಕ್ತಿತ್ವ ತಹಶೀಲ್ದಾರರದ್ದು.ಕೇವಲ ಒಂದು ವರ್ಷದಲ್ಲಿ ನಮ್ಮ ಮನಸ್ಸಿನ ಮೇಲೆ ಅಗಾಢವಾದ ನೆನಪಿನ ಛಾಯೆ ಮೂಡಿಸಿದ ವ್ಯಕ್ತಿ. ತಹಶೀಲ್ದಾರರ ಈ ರೀತಿ ಬೀಳ್ಕೊಡುಗೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಂದೆ ಯಾವುದೇ ಅಧಿಕಾರಿಗಳಿಗೆ ಈ ರೀತಿಯ ಬೀಳ್ಕೊಡುಗೆ ನೀಡುವ ಪರಿಸ್ಥಿತಿ ಒದಗದೆ ಇರಲಿ ಎಂದು ಭಾವುಕರಾದರು. ತಹಶೀಲ್ದಾರರು ನಮ್ಮೆಲ್ಲರ ಭಾವನೆಯ ಮೇಲೆ ಬಹುದೊಡ್ಡ ನೆನಪಿನ ಅಚ್ಚು ಒತ್ತಿದ್ದಾರೆ. ಅವರ ನೆನಪು ಮತ್ತೆ ಮತ್ತೆ ಮರುಕಳಿಸುತ್ತಿರುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಈ ಶ್ರದ್ಧಾಂಜಲಿ ಸಭೆಯಲ್ಲಿ ನೂತನವಾಗಿ ತಾಲೂಕು ದಂಡಾಧಿಕಾರಿಯಾಗಿ ನೇಮಕಗೊಂಡಿರುವ ರಂಜಿತ್ ಎಸ್, ತಾಲೂಕು ಆಡಳಿತದ ಸಿಬ್ಬಂದಿಗಳು ಮತ್ತು ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷರು ಮತ್ತು ಸದಸ್ಯರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷರ ನುಡಿ ನಮನ
ತೀರ್ಥಹಳ್ಳಿ ತಹಸೀಲ್ದಾರ್ ಅಕಾಲಿಕ ಸಾವು ಅತ್ಯಂತ ನೋವಿನ ವಿಷಯ. ತೀರ್ಥಹಳ್ಳಿಯ ತಹಸಿಲ್ದಾರರಾಗಿ ಸೇವೆ ಸಲ್ಲಿಸುತ್ತಿದ್ದಂತಹ ಸ್ನೇಹಮಯಿ ವ್ಯಕ್ತಿತ್ವದ ಜಕ್ಕಣ್ಣನವರ್ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಆಡಳಿತಧಿಕಾರಿಯಾಗಿ ಪಟ್ಟಣದ ಹಿತವನ್ನು ಕಾಯ್ದಂತಹ ಅಧಿಕಾರಿಯಾಗಿದ್ದರು. ಉತ್ತಮ ಹೆಸರು ಗಳಿಸಿಕೊಂಡಂತಹ ಜಕ್ಕಣ್ಣನವರ್ ನಿಧನ ತುಂಬಾ ನೋವುಂಟು ಮಾಡಿದೆ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ ಹೇಳಿದ್ದಾರೆ.