ಟೆಕ್ ನ್ಯೂಸ್
– ಇನ್ಮುಂದೆ ಸಿಮ್ ನೆಟ್ವರ್ಕ್ ಇಲ್ಲದೆ ಕಾಲ್ ಹೋಗುತ್ತೆ!
– ಟೆಲಿಕಾಂ ಕ್ಷೇತ್ರದಲ್ಲಿ ಬಿ.ಎಸ್.ಎನ್.ಎಲ್ ಕ್ರಾಂತಿ
– ವಾಟ್ಸ್ಆ್ಯಪ್ 80 ಲಕ್ಷಕ್ಕೂ ಅಧಿಕ ಬ್ಯಾನ್ ಕಾರಣ ಏನು?
NAMMUR EXPRESS NEWS
ಬೆಂಗಳೂರು: ಬಿಎಸ್ಎನ್ಎಲ್ ಇದೀಗ ಡೈರೆಕ್ಟ್ 2 ಡಿವೈಸ್(D2D)ತಂತ್ರಜ್ಞಾನದ ಮೂಲಕ ಯಾವುದೇ ನೆಟ್ವರ್ಕ್, ಸಿಮ್ ಇಲ್ಲದೆ ಕರೆ ಮಾಡುವ ಸೌಲಭ್ಯ ನೀಡುತ್ತಿದೆ. ಇದು ಗ್ಲೋಬಲ್ ಸ್ಯಾಟಲೈಟ್ ಕಮ್ಯೂನಿಕೇಶನ್ ವಯಾಸ್ಯಾಟ್ ಜೊತೆಗಿನ ಸಹಭಾಗಿತ್ವದಲ್ಲಿ ಬಿಎಸ್ಎನ್ಎಲ್ ಹೊಸ ಕ್ರಾಂತಿ ಮಾಡುತ್ತಿದೆ. ವಯಾಸ್ಯಾಟ್ ಸಹಭಾಗಿತ್ವದಲ್ಲಿ ಬಿಎಸ್ಎನ್ಎಲ್ ಈಗಾಗಲೇ ಡಿ2ಡಿ ಪ್ರಯೋಗ ಯಶಸ್ವಿಯಾಗಿ ಮಾಡಿದೆ. ಇದೀಗ ಹಂತ ಹಂತವಾಗಿ ಡಿ2ಡಿ ಸ್ಯಾಟಲೈಟ್ ಕಮ್ಯೂನಿಕೇಶನ್ ಜಾರಿಯಾಗಲಿದೆ. ಈ ಮೂಲಕ ಭಾರತದಲ್ಲಿ ರಿಮೂಟ್ ಏರಿಯಾದಲ್ಲೂ ಕರೆ, ಜಗತ್ತಿನೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಲಿದೆ. ಟುವೇ ಮೇಸೇಜಿಂಗ್, ಎಸ್ಒಎಸ್ ಮೇಸೇಜಿಂಗ್ ಸೇರಿದಂತೆ ಎರಡು ಮಾದಿರಯಲ್ಲಿ ಪ್ರಯೋಗ ನಡೆಸಲಾಗಿದೆ. ಸರಿಸುಮಾರು 36,000 ಕಿಲೋಮೀಟರ್ ದೂರದಲ್ಲಿರುವ ಭೂಸ್ಥಿರ ಎಲ್ ಬ್ಯಾಂಡ್ ಉಪಗ್ರಹಗಳಿಗೆ ಸಂದೇಶ ಕಳುಹಿಸಿದ ಪ್ರಯೋಗ ಯಶಸ್ವಿಯಾಗಿದೆ.
ಜಿಯೋ, ಏರ್ಟೆಲ್, ವಿಐ ಸೇರಿದಂತೆ ಕರೆ ಮಾಡಲು ಯಾವುದೇ ಸಿಮ್ ಬೇಕಿಲ್ಲ, ಹಳ್ಳಿಯಾಗಲಿ, ಕಾಡಾಗಲಿ, ನೆಟ್ವರ್ಕ್ ಇರಬೇಕಿಲ್ಲ. ಎಲ್ಲವೂ ಸ್ಯಾಟಲೈಟ್ ಮೂಲಕವೇ ಸಂವಹನ ನಡೆಯಲಿದೆ. ಆ್ಯಂಡ್ರಾಯ್ಡ್. ಐಒಎಸ್ ಮಾತ್ರವಲ್ಲ, ಸ್ಮಾರ್ಟ್ವಾಚ್ ಸೇರಿದಂತೆ ಸ್ಮಾರ್ಟ್ ಗ್ಯಾಜೆಟ್ ಇದ್ದರೆ ಸಾಕು, ಕಾಲ್ ಮಾಡಲು ಸಾಧ್ಯವಿದೆ.
ಪ್ರಮುಖವಾಗಿ ಈ ಸೇವೆ ನೆಟ್ವರ್ಕ್ ಇಲ್ಲದ, ರಿಮೂಟ್ ವಲಯಗಳಲ್ಲಿ ಮೊದಲ ಹಂತದಲ್ಲಿ ಬಳಕೆಯಾಗಲಿದೆ. ಈ ಮೂಲಕ ಮೂಲೆ ಮೂಲೆಯಲ್ಲರುವ ಮಂದಿಗೆ ಸಂಪರ್ಕ ಸಾಧ್ಯವಾಗಿಸಲು ಬಿಎಸ್ಎನ್ಎಲ್ ಮಹತ್ತರ ಹೆಜ್ಜೆ ಇಟ್ಟಿದೆ. ಮುಂದಿನ ದಿನಗಳಲ್ಲಿ ಇದರ ಕುರಿತು ಮತಷ್ಟು ಮಾಹಿತಿ ಹೊರ ಬರಲಿದೆ.
ವಾಟ್ಸ್ಆ್ಯಪ್ 80 ಲಕ್ಷಕ್ಕೂ ಅಧಿಕ ಖಾತೆಗಳು ಬ್ಯಾನ್ ಕಾರಣ ಏನು?
ಬೆಂಗಳೂರು: ವಾಟ್ಸ್ಆ್ಯಪ್ ಅತ್ಯಂತ ತ್ವರಿತವಾಗಿ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗಿದೆ. ಈಗಾಗಲೇ ವಿಶ್ವದಾದ್ಯಂತ ಕೋಟಿಗೂ ಅಧಿಕ ಜನರು ವಾಟ್ಸ್ಆ್ಯಪ್ ಬಳಸುತ್ತಿದ್ದಾರೆ. ಇತ್ತ ಭಾರತದಲ್ಲೂ ವಾಟ್ಸ್ಆ್ಯಪ್ ಬಳಕೆಯ ಜೊತೆಗೆ ದೈನಂದಿನ ವ್ಯವಹಾರ ಮಾಡಲು ಯೋಗ್ಯವಾದದು ಎಂದೆನಿಸಿಕೊಂಡಿದೆ. ಅಪ್ಲಿಕೇಶನ್ ಹೀಗಿರುವಾಗ ಭಾರತೀಯರ 80 ಲಕ್ಷಕ್ಕೂ ಅಧಿಕ ಖಾತೆಗಳನ್ನ ವಾಟ್ಸ್ಆ್ಯಪ್ ಬ್ಯಾನ್ ಮಾಡಿದೆ.
ಜನಪ್ರಿಯತೆ ಜೊತೆಗೆ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಸ್ಕ್ಯಾಮರ್ ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಾಟ್ಸ್ಆ್ಯಪ್ ಬಳಸಿಕೊಂಡು ಬೆದರಿಕೆ, ವಂಚನೆ ಕೆಲಸಗಳನ್ನು ಮಾಡುತ್ತಿದ್ದಾರೆ. ಇದೀಗ ಅಂತಹ ಅನುಮಾನದ ಖಾತೆಗಳನ್ನು ಪರಿಶೀಲಿಸಿ ನಿಷೇಧಿಸಿದೆ. ಸುಮಾರು 8,458.000 ಲಕ್ಷ ವಾಟ್ಸ್ಆ್ಯಪ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ. ಮಾಹಿತಿ ತಂತ್ರಜ್ಞಾನದ ನಿಯಮದ ಪ್ರಕಾರ, 2021ರ ನಿಯಮ 4(1)(ಡಿ) ಮತ್ತು 3ಎ (7)ಗೆ ಅನುಗುಣವಾಗಿ ಪ್ರಕಟವಾದ ವರದಿಯಂತೆ, ವಾಟ್ಸ್ಆ್ಯಪ್ ತನ್ನ ನೀತಿಯನ್ನು ಉಲ್ಲಂಘಿಸುವ ಮತ್ತು ತೊಡಗಿಸಿಕೊಳ್ಳುವ ಖಾತೆಗಳ ವಿರುದ್ಧ ಜಾಗರೂಕತೆಯನ್ನು ಸಾರಿದೆ. ಹೀಗಾಗಿ ವಾಟ್ಸ್ ಆ್ಯಪ್ ಬಳಕೆದಾರರ ಸುರಕ್ಷತೆ ಬಗ್ಗೆ ಗಮನಹರಿಸಿ ಆನ್ಲೈನ್ ವಂಚನೆ ತಡೆಯಲು 80 ಲಕ್ಷಕ್ಕೂ ಅಧಿಕ ಖಾತೆಗಳನ್ನು ಬ್ಯಾನ್ ಮಾಡಿದೆ.