ಆವಾಸ್ ಮನೆ ಹಂಚಿಕೆ: ಶಾಸಕರ ವಿರುದ್ಧ ಉಪವಾಸ ಸತ್ಯಾಗ್ರಹ
– ಅ. 23ರಂದು ಜನಸಾಮಾನ್ಯರ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ
– ಕಾಂಗ್ರೆಸ್ ನಾಯಕ ವಿನಾಯಕ ತುಪ್ಪದಮನೆ ಉಪವಾಸ ಸತ್ಯಾಗ್ರಹ
NAMMUR EXPRESS NEWS
ತೀರ್ಥಹಳ್ಳಿ: ವಸತಿ ವಂಚಿತರಿಗೆ ಶಾಸಕರಾದ ಆರಗ ಜ್ಞಾನೇಂದ್ರರವರಿಂದ ಅದ ಅನ್ಯಾಯದ ವಿರುದ್ಧ 23-10-2024 ರಂದು ಹೊದಲ ಅರಳಾಪುರ ಗ್ರಾಮ ಪಂಚಾಯತ್ ಕಛೇರಿಯ ಎದುರು ಗ್ರಾಮ ಪಂಚಾಯಿತಿ ಸದಸ್ಯ ವಿನಾಯಕ ತುಪ್ಪದ ಮನೆ ಇವರಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗಿದೆ.ತೀರ್ಥಹಳ್ಳಿ ತಾಲ್ಲೂಕು, ಶಾಸಕರ ಕಛೇರಿಯಿಂದ ಪತ್ರಿಕೆಗಳಲ್ಲಿ ಮನೆ ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯತಿ ಸದಸ್ಯರಾದ ವಿನಾಯಕರವರು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮನೆ ಹಂಚಿಕೆ ನಿಯಮವನ್ನು ಅರಿಯಲಿ ಎಂದು ಇದೊಂದು ಕಪೋಕಲ್ಪಿತ ಹೇಳಿಕೆ ಎಂದು ಪ್ರಕಟಣೆ ಮಾಡಿರುತ್ತಾರೆ. ಇವರ ಕಛೇರಿಯ ಹೇಳಿಕೆಯು ಬಲಿಪಶುವಾಗಿತ್ತು. ವಸತಿ ಸಮಿತಿಯ ತಾಲ್ಲೂಕು ಅಧ್ಯಕ್ಷರು ಸ್ಥಳೀಯ ಶಾಸಕರೇ ಆಗಿರುತ್ತಾರೆ ಎನ್ನುವುದು ಕೂಡ ನನ್ನ ಅರಿವಿನಲ್ಲಿದೆ. ಇಲ್ಲೆಲ್ಲೂ ನನ್ನ ಸ್ವಹಿತಾಸಕ್ತಿ ಇರುವುದಿಲ್ಲ. ಈ ವಿಷಯವು ಪ್ರತಿಯೊಬ್ಬ ಚುನಾಯಿತ ಸದಸ್ಯನ ಜವಾಬ್ದಾರಿ ಎಂದು ತಿಳಿದಕೊಂಡಿದ್ದೇನೆ. ಜನಸಾಮಾನ್ಯರ ನೋವನ್ನು ವ್ಯಕ್ತಪಡಿಸಿದ್ದೇನೆ. ಬಡವರ ಮನೆ ಕಟ್ಟುವ ಕನಸಿಗೆ ಆದ ಸಮಸ್ಯೆಯನ್ನು ಸರಿಪಡಿಸುವುದನ್ನು ಬಿಟ್ಟು ಹೋರಾಟದ ದಿಕ್ಕನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ನನ್ನ ಹೋರಾಟವನ್ನು ಮುಂದುವರೆಸಿ, ದಿನಾಂಕ: 23-10-2024 ರಂದು ಧರಣಿ (ಉಪವಾಸ ಸತ್ಯಾಗ್ರಹ)ಯನ್ನು ಮಾನ್ಯ ಶಾಸಕರು ಹೊದಲ ಅರಳಾಪುರ ಗ್ರಾಮ ಪಂಚಾಯತಿಗೆ ಮನೆ ಹಂಚಿಕೆ ವಿಚಾರದಲ್ಲಿ ಮಾಡಿರುವ ಮಲತಾಯಿ ಧೋರಣೆ ವಿರುದ್ಧ ಸಾರ್ವಜನಿಕವಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಹೊದಲ ಗ್ರಾಮ ಪಂಚಾಯಿತಿ ಮುಂಭಾಗ ಬೆಳ್ಳಿಗೆ 10.00 ಪ್ರತಿಭಟನೆ ಆರಂಭವಾಗಲಿದೆ.
ಈ ಒಂದು ಪ್ರಾಮಾಣಿಕ ಹೋರಾಟಕ್ಕೆ ನಮ್ಮ ನಾಯಕರುಗಳಾದ ಮಾಜಿ ಶಿಕ್ಷಣ ಸಚಿವರು ಕಿಮ್ಮನೆ ರತ್ನಾಕರ್ರವರು ಮತ್ತು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಡಾ|| ಆರ್.ಎಂ. ಮಂಜುನಾಥಗೌಡರು ಬೆಂಬಲ ಸೂಚಿಸಿರುತ್ತಾರೆ. ಆದ್ದರಿಂದ ತಾಲ್ಲೂಕಿನ ಗೌರವಾನ್ವಿತ ಚುನಾಯಿತ ಪ್ರತಿನಿಧಿಗಳು, ಎಲ್ಲಾ ರೀತಿಯ ಘಟಕಗಳ ಮಹಿಳಾ ಹಾಗೂ ಪುರುಷ ಮುಂಚೂಣಿ ನಾಯಕರುಗಳು, ಹೊಸಮನೆ ನಿರೀಕ್ಷೆಯಲ್ಲಿರುವಂತಹ ಗ್ರಾಮಸ್ಥರು, ಮಾಧ್ಯಮ ಮಿತ್ರರು, ಜನಸಾಮಾನ್ಯರು ಪಕ್ಷಬೇಧ ಮರೆತು ಈ ಒಂದು ಹೋರಾಟಕ್ಕೆ ಬೆಂಬಲಿಸಬೇಕೆಂದು ಮನವಿ ಮಾಡಿದ್ದಾರೆ.