ತೀರ್ಥಹಳ್ಳಿ ಶೌರ್ಯ ತಂಡದ ಸೇವಾ ಹೆಜ್ಜೆ!
– ತೀರ್ಥಹಳ್ಳಿ ತಾಲೂಕಲ್ಲೇ ನಂ.1: ಹಾರೋಗೊಳಿಗೆ ಶೌರ್ಯ ವಿಪತ್ತು ನಿರ್ವಹಣಾ ಘಟಕ
– ಕೊಪ್ಪ ಸರ್ಕಲ್ ಕುವೆಂಪು ಪ್ರತಿಮೆ ಸ್ವಚ್ಛತೆ ಮಾಡಿದ ಸ್ವಯಂ ಸೇವಕರು
NAMMUR EXPRESS NEWS
ತೀರ್ಥಹಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತೀರ್ಥಹಳ್ಳಿ ತಾಲ್ಲೂಕಿನ ಯೋಜನಾಧಿಕಾರಿಗಳಾದ ಮಾಲತಿ ದಿನೇಶ್ ಇವರ ಮಾರ್ಗದರ್ಶನದೊಂದಿಗೆ “ಹಾರೋಗೊಳಿಗೆ ಶೌರ್ಯ ವಿಪತ್ತು ನಿರ್ವಹಣಾ ಘಟಕ ” ತಾಲ್ಲೂಕು ಮಟ್ಟದಲ್ಲಿ, ಸಮಾನ ಮನಸ್ಕ, ಉತ್ಸಾಹಿ ಯುವಕರ ಸಹಕಾರದೊಂದಿಗೆ ಸಮಾಜಕ್ಕೆ ಅತೀ ಹೆಚ್ಚು ಸೇವೆ ಮಾಡುತ್ತಿದೆ.
ಮೇಲ್ವಿಚಾರಕರಾದ ಗಜೇಂದ್ರ, ಸೇವಾಪ್ರತಿನಿಧಿ ಚೈತ್ರ,ಘಟಕ ಪ್ರತಿನಿಧಿ ಮಂಜುನಾಥ ಹೊಳೆಗದ್ದೆ, ಸದಸ್ಯರಾಗಿ, ಅಶ್ವಥ ಹೊಳೆಗದ್ದೆ, ಶಂಕರ ಹೊಳೆಗದ್ದೆ, ನಾಗರಾಜ ಹೊಳೆಗದ್ದೆ, ಆದಿತ್ಯ ಹೊಳೆಗದ್ದೆ,ಕಿರಣ ಹೊಸ ಅಗ್ರಹಾರ, ಚಂದ್ರಶೇಖರ ಹೊಸ ಅಗ್ರಹಾರ, ರಾಘವೇಂದ್ರ ಹರಳಿಮಠ,ಗಿರೀಶ ಹಾರೋಗೋಳಿಗೆ,ನಾರಾಯಣ ಹಾರೋಗೋಳಿಗೆ, ಮಂಜುನಾಥ ಹಾರೋಗೋಳಿಗೆ, ಭರತ್ ಹಾರೋಗೋಳಿಗೆ, ಸುಧಾಕರ ಹಾರೋಗೋಳಿಗೆ, ಉದಯ ಹಾರೋಗೋಳಿಗೆ,ಅಕ್ಷಯ ಹಾರೋಗೋಳಿಗೆ, ರಂಜನ ಧರಾಖಾಸ್ ಸೇರಿದಂತೆ ಇನ್ನು ಅನೇಕರು ಈ ಸೇವೆ ಸಲ್ಲಿಸುತ್ತಿದ್ದಾರೆ.
ಕೊಪ್ಪ ಸರ್ಕಲ್ ಕುವೆಂಪು ಪ್ರತಿಮೆ ಸ್ವಚ್ಛತೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಜನಜಾಗೃತಿ ಜಾಥಾ ಮತ್ತು ಜನಜಾಗೃತಿಸಮಾವೇಶ, ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮದ ಭಾಗವಾಗಿ ಕೊಪ್ಪ ಸರ್ಕಲ್ ನಲ್ಲಿ ಇರುವ ರಾಷ್ಟ್ರಕವಿ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಸಲುವಾಗಿ ಹಾರೋಗೋಳಿಗೆ ಶೌರ್ಯ ವಿಪತ್ತು ಘಟಕದ “ಸ್ವಯಂ ಸೇವಕರು ಕುವೆಂಪು ಪ್ರತಿಮೆಯನ್ನು ತೊಳೆದು ಸ್ವಚ್ಛಗೊಳಿಸಿದರು.