ಕೃಷಿ ಪಂಪ್ಸೆಟ್ಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಆಹ್ವಾನ
– ಎಸ್ಸಿ/ಎಸ್ಟಿ ಸಮುದಾಯದ ರೈತರು ಎಸ್ಸಿಪಿ / ಟಿಎಸ್ಪಿ ಯೋಜನೆಯಡಿ ಸೌಲಭ್ಯ
– ಅಗತ್ಯ ದಾಖಲೆಗಳ ಮೂಲಕ ನವಂಬರ್ 15ರೊಳಗೆ ಅರ್ಜಿ ಸಲ್ಲಿಸಿ
NAMMUR EXPRESS NEWS
ತೀರ್ಥಹಳ್ಳಿ: ತಾಲ್ಲೂಕಿನ ತೀರ್ಥಹಳ್ಳಿ ಹಾಗೂ ಬೆಜ್ಜವಳ್ಳಿ ಮೆಸ್ಕಾಂ ಉಪವಿಭಾಗ ವ್ಯಾಪ್ತಿಯ ಗ್ರಾಮಗಳ ಎಸ್ಸಿ/ಎಸ್ಟಿ ಸಮುದಾಯದ ರೈತರು ಎಸ್ಸಿಪಿ / ಟಿಎಸ್ಪಿ ಯೋಜನೆಯಡಿ ತಮ್ಮ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ರೈತರು ಮೆಸ್ಕಾಂ ತೀರ್ಥಹಳ್ಳಿ/ಬೆಜ್ಜವಳ್ಳಿ ಉಪವಿಭಾಗ ಕಛೇರಿಗೆ ಆರ್ಟಿಸಿ, ಆರ್ಡಿ ನಂಬರ್ ಇರುವ ಎಸ್ಸಿ/ಎಸ್ಟಿ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ ಫೋಟೋದೊಂದಿಗೆ ನಿಗದಿತ ನಮೂನೆ ಅರ್ಜಿ ಭರ್ತಿ ಮಾಡಿ ಪೂರ್ಣ ದಾಖಲೆ ಲಗತ್ತಿಸಿ ನವಂಬರ್ 15ರೊಳಗೆ ಸಲ್ಲಿಸಬೇಕು. ನಿಗದಿಪಡಿಸಿದ ದಿನಾಂಕದೊಳಗೆ ಸ್ವೀಕೃತ ವಾದ ಅರ್ಜಿಗಳಿಗೆ ಮೆಸ್ಕಾಂ ನಿಗಮ ತಾಂತ್ರಿಕ ಕಾರ್ಯ ಸಾಧ್ಯತೆ ಪರಿಶೀಲಿಸಿ ಹಾಗು ಸಮಾಜ ಕಲ್ಯಾಣ ಇಲಾಖೆ ಅನುಮೋದನೆ ನಂತರ ಆದ್ಯತೆ ಮೇರೆಗೆ ವಿದ್ಯುತ್ ಸೌಲಭ್ಯ ಒದಗಿಸಲು ಕ್ರಮ ತೆಗೆದುಕೊಳ್ಳಲಿದೆ. ಹೆಚ್ಚಿನ ಮಾಹಿತಿ ಗಾಗಿ ಹತ್ತಿರದ ಮೆಸ್ಕಾಂ ಶಾಖಾ ಕಛೇರಿ/ ಉಪವಿಭಾಗ ವನ್ನು ಸಂಪರ್ಕಿಸಲು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.