ಚನ್ನಪಟ್ಟಣದಲ್ಲಿ ಕೈ ಪಾಳಯ ಸೇರಿದ ಸೈನಿಕ!
– ಯೋಗೇಶ್ವರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ
– ಮೈತ್ರಿ ಅಭ್ಯರ್ಥಿ ಯಾರಾಗ್ತಾರೆ?… ನಿಖಿಲ್ ಸ್ಪರ್ಧೆ ಮಾಡ್ತಾರಾ?
NAMMUR EXPRESS NEWS
ಬೆಂಗಳೂರು/ಚನ್ನಪಟ್ಟಣ: ಮಂಗಳವಾರ ತಡರಾತ್ರಿ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಕ್ಯಾಂಪ್ಗೆ ಜಂಪ್ ಆಗಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಪ್ರಮುಖರನ್ನು ಭೇಟಿಯಾದ ಸಿಪಿವೈ ಚನ್ನಪಟ್ಟಣದ ಅಖಾಡದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುವುದು ಬಹುತೇಕ ಅಂತಿಮವಾಗಿದೆ.
ಎಂಎಲ್ಸಿ ಸ್ಥಾನಕ್ಕೆ ಯೋಗೇಶ್ವರ್ ರಾಜೀನಾಮೆ ಸಲ್ಲಿಸಿದ್ದು, ಬಿಜೆಪಿ ನಾಯಕರು ಯೋಗೇಶ್ವರ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಯತ್ನ ಮುಂದುವರಿಸಿದ್ದರು. ಡಿಸಿಎಂ ಮತ್ತು ಅವರ ಆಪ್ತರು ನಡೆಸಿದ ಕಾರ್ಯಾಚರಣೆಯ ಫಲವಾಗಿ ಯೋಗೇಶ್ವರ್ ಕಾಂಗ್ರೆಸ್ ಕಡೆ ವಾಲಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವರಿಷ್ಠರು ಕೂಡ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಚನ್ನಪಟ್ಟಣದಿಂದ ಕಣಕ್ಕಿಳಿಸಲು ಸಮ್ಮತಿಸಿದ್ದಾರೆ.
ಮೈತ್ರಿ ಅಭ್ಯರ್ಥಿ ಯಾರಾಗ್ತಾರೆ?… ನಿಖಿಲ್ ಸ್ಪರ್ಧೆ ಮಾಡ್ತಾರಾ?
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಅಂತಿಮ ಎನ್ನಲಾಗಿದೆ. ಆದರೆ ಯೋಗೇಶ್ವರ್ ನಡೆಯಿಂದ ರಾಜಕೀಯ ಬದಲಾವಣೆ ಆದ್ರೂ ಅಚ್ಚರಿ ಇಲ್ಲ.