ತೀರ್ಥಹಳ್ಳಿ ಮುಖ್ಯ ರಸ್ತೆಯಲ್ಲೇ ಹಲಸಿನ ತುಂಡುಗಳು, ಮತ್ತೊಂದು ಕಡೆ ಹಲಸಿನ ಮರವೇ ಮಾಯ!
– ಅರಣ್ಯ ಇಲಾಖೆ ವೈಫಲ್ಯ ಕೇಳೋರು ಯಾರು…?
– ವಾಹನ ಸವಾರರು, ಓಡಾಡುವ ಜನರಿಗೆ ತೊಂದರೆ
– ದಿಂಡ ಸಮೀಪದ ಹಲಗೇರಿಯಲ್ಲಿ ಹಲಸಿನ ಮರ ಕಡಿತಲೆ
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ಪಟ್ಟಣದ ಜೂನಿಯರ್ ಕಾಲೇಜ್ ರಸ್ತೆಯ ಅರಣ್ಯ ಇಲಾಖೆಯ ಸಮೀಪವೇ ಹಲಸಿನ ಮರವನ್ನ ಕಡಿತಲೆ ಮಾಡಲಾಗಿ ತಿಂಗಳುಗಟ್ಟಲೆ ಕಾಲ ಆಗಿದೆ. ಆದರೆ ಇನ್ನೂ ಅದನ್ನು ವಿಲೇವಾರಿ ಮಾಡಿಲ್ಲ ಇದರಿಂದಾಗಿ ವಾಹನ ಸವಾರರು ಮತ್ತು ವಿದ್ಯಾರ್ಥಿಗಳು ವಯಸ್ಸಾದವರು ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೆ ತೊಂದರೆ ಆಗುತ್ತಿದೆ. ಜೊತೆಗೆ ವಾಹನ ನಿಲುಗಡೆಗೂ ಕೂಡ ಸಮಸ್ಯೆ ಆಗುತ್ತಿದೆ. ಈಗಾಗಲೇ ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆ ಇರುವ ನಡುವೆ ಸುಮಾರು 50 ಮೀಟರ್ ನಷ್ಟು ದೂರದಲ್ಲಿ ಹಲಸಿನ ಮರದ ತುಂಡುಗಳನ್ನ ರಸ್ತೆ ಬದಿಯಲ್ಲಿ ಹಾಕಲಾಗಿದೆ. ಇದು ತೀರ್ಥಹಳ್ಳಿಯ ಅಂದಕೂ ಕೂಡ ತೊಂದರೆ ನೀಡಿದೆ. ಅರಣ್ಯ ಇಲಾಖೆ ಈ ಕಡಿತಲೆ ಮಾಡಿದ್ದು ಇದರ ವಿಲೇವಾರಿ ಸಮಸ್ಯೆಯಾಗಿದೆ. ಹೀಗಾಗಿ ತಕ್ಷಣ ಬಗೆಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ದಿಂಡ ಸಮೀಪದ ಹಲಗೇರಿಯಲ್ಲಿ ಹಲಸಿನ ಮರ ಕಡಿತಲೆ
ಮೇಗರವಳ್ಳಿ ಅರಣ್ಯ ವ್ಯಾಪ್ತಿಯ ದಿಂಡ ಸಮೀಪದ ಹಲಗೇರಿಯಲ್ಲಿ ಸೋಮವಾರ ರಾತ್ರಿ ಅಕ್ರಮವಾಗಿ ಸಾವಿರಾರು ರೂಪಾಯಿ ಮೌಲ್ಯದ ಹಲಸಿನ ಮರ ಕಡಿತಲೆ ಮಾಡಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಮೇಗರವಲ್ಲಿ ಅರಣ್ಯ ವ್ಯಾಪ್ತಿಯ ದಿಂಡ ಸಮೀಪದ ಹಲಗೇರಿ ರಾತ್ರೋ ರಾತ್ರಿ ಮರ ಕೊಯ್ದು ಸಾಗಾಟ ಮಾಡಲಾಗಿದೆ. ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾ ಕಾದು ನೋಡಬೇಕಿದೆ.