ಆಗುಂಬೆ ಕಾಡಾನೆ ಸಮಸ್ಯೆ: ಅರಣ್ಯ ಸಚಿವರಿಗೆ ಆರ್. ಎಂ ಮನವಿ
– ಆನೆ ಹಿಡಿಯಲು ಒತ್ತಡ ಹಾಕಲು ಮಾತುಕತೆ
– ಮಲೆನಾಡು ಅಭಿವೃದ್ಧಿ ಮಂಡಳಿಗೆ ಅನುದಾನಕ್ಕೆ ಸಚಿವ ಸುಧಾಕರ್ ಜತೆ ಚರ್ಚೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಆಗುಂಬೆಯ ಭಾಗದಲ್ಲಿ ಕಾಡಾನೆ ಕಾಟದಿಂದ ರೈತರಿಗೆ ತೊಂದರೆ ಹೆಚ್ಚಾಗಿದ್ದು, ಇದರ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಆನೆ ಹಿಡಿಯಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕುವಂತೆ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರ ಜತೆ ಸಹಕಾರಿ ನಾಯಕರಾದ ಡಾ. ಆರ್. ಎಂ. ಮಂಜುನಾಥ ಗೌಡ ಮನವಿ ಮಾಡಿದರು.
ವಿಧಾನ ಸೌಧದಲ್ಲಿ ಬುಧವಾರ ಅರಣ್ಯ ಸಚಿವರನ್ನು ಭೇಟಿ ಮಾಡಿದ ಅವರು, ಮಲೆನಾಡ ಅರಣ್ಯ ಮತ್ತು ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಸಚಿವ ಸುಧಾಕರ್ ಜತೆ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಬಗ್ಗೆ ಚರ್ಚೆ ನಡೆಸಿದರು. ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರು ಆದ ಬೇಳೂರು ಗೋಪಾಲಕೃಷ್ಣ, ಶಿಮೂಲ್ ಅಧ್ಯಕ್ಷರಾದ ಗುರುಶಕ್ತಿ ವಿಧ್ಯಾಧರ್, ಮಧುನಾವಡ ಜೊತೆಯಲ್ಲಿ ಇದ್ದರು.