ತೀರ್ಥಹಳ್ಳಿ ಟಾಪ್ ನ್ಯೂಸ್
– ತಮ್ಮ ಕೊಟ್ಟಿಗೆಯಲ್ಲೇ ಗೋ ಗಣತಿಗೆ ಶಾಸಕರ ಚಾಲನೆ!
– ಜಾನುವಾರು ಗಣತಿ ಕಾರ್ಯ ತೀರ್ಥಹಳ್ಳಿ ತಾಲೂಕಲ್ಲಿ ಶುರು
– ನಿವೃತ್ತ ಪ್ರಾಂಶುಪಾಲ ಜಗದೀಶ್ ಗೌಡರ ನಿಧನ
NAMMUR EXPRESS NEWS
ತೀರ್ಥಹಳ್ಳಿ: ಭಾರತ ಸರ್ಕಾರದ ಪಶುಸಂಗೋಪನಾ ಇಲಾಖೆ ವತಿಯಿಂದ ಜಾನುವಾರು ಗಣತಿ ಕಾರ್ಯಕ್ಕೆ ಕೇಂದ್ರ ಪಶುಸಂಗೋಪನೆ ಸಚಿವರು ಚಾಲನೆ ನೀಡಿದ್ದು, ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ನೌಕರರು ಶಾಸಕರಾದ ಆರಗ ಜ್ಞಾನೇಂದ್ರರವರ ಗುಡ್ಡೇಕೊಪ್ಪದ ತೋಟದ ಮನೆಯಲ್ಲಿ ಶಾಸಕರು ಸಾಕಿದ ಜಾನುವಾರುಗಳ ಗಣತಿಯ ಮೂಲಕ ತೀರ್ಥಹಳ್ಳಿ ತಾಲೂಕಿನ ಜಾನುವಾರು ಗಣತಿ ಕಾರ್ಯಕ್ಕೆ ಶಾಸಕರ ಮೂಲಕ ಚಾಲನೆ ಕೊಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಗೋ ಸಂತತಿ ಅಪಾಯದಲ್ಲಿ ಇದೆ,ಭಾರತದ ಕೃಷಿ ಚಟುವಟಿಕೆ ಗೋ ಆದಾರಿತವಾಗಿರಬೇಕಿತ್ತು,ಈ ಮಣ್ಣಿನ ಪಲವತ್ತತೆ ಜಾನುವಾರುಗಳ ಸಗಣಿ ಮೂತ್ರದಿಂದ ಹೆಚ್ಚಳವಾಗಬೇಕಿತ್ತು,ದುರ್ದೈವದ ಸಂಗತಿ ಎಂದರೆ ಇವತ್ತು ಗೋ ಸಂತತಿ ಅವನತಿಯ ಕಡೆ ಸಾಗುತ್ತಿದೆ ಗೋ ಆದಾರಿತ ಕೃಷಿಯಿಂದ ನಮ್ಮ ರೈತರು ವಿಮುಕರಾಗುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಒಳಿತಲ್ಲಾ ಎಂದು ಶಾಸಕರು ಹೇಳಿದರು,. ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕರಾದ ಡಾ. ಬಾಬು ರತ್ನ, ಸಹಾಯಕ ನಿರ್ದೇಶಕರಾದ ಡಾ.ನಾಗರಾಜ್, ಪಶು ವೈಧ್ಯಾಧಿಕಾರಿ ಡಾ ಮುರುಳಿದರ್, ಡಾ.ಶ್ರೀದರ್, ಡಾ ಬೃಂದಾ ಮತ್ತಿತರರು ಉಪಸ್ಥಿತರಿದ್ದರು.
ನಿವೃತ್ತ ಪ್ರಾಂಶುಪಾಲ ಜಗದೀಶ್ ಗೌಡರ ನಿಧನ
ತೀರ್ಥಹಳ್ಳಿ: ತೀರ್ಥಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ಗುರುಗಳಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದ ಜಗದೀಶ ಗೌಡರು (81 ವರ್ಷ) ಅಕ್ಟೋಬರ್ 26ರಂದು ವಯೋಸಹಜ ಅನಾರೋಗ್ಯದಿಂದ ದೈವಾಧೀನರಾದರು. ಮೃತರು ಪತ್ನಿ, ಓರ್ವಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂದು ವರ್ಗವನ್ನು, ಶಿಷ್ಯ ವೃಂದವನ್ನು ಆಗಲಿದ್ದಾರೆ.