ಕರಾವಳಿ ನ್ಯೂಸ್
– ಮಣಿಪಾಲ: ತುಳು ನಾಟಕ ಕಲಾವಿದರ ಕಾರು ಅಪಘಾತ; ಅಪಾಯದಿಂದ ಪಾರು!!
– ಕುಂದಾಪುರ: ಕೋಣಿ ಬ್ಯಾಂಕ್ ಕಳ್ಳತನ ಯತ್ನ; ಅಂತರ್ ರಾಜ್ಯ ಕಳ್ಳರಿಬ್ಬರ ಬಂಧನ!
– ಕುಂದಾಪುರ: ವರದಕ್ಷಿಣೆ ಕಿರುಕುಳ – ಪ್ರಕರಣ ದಾಖಲು
NAMMUR EXPRESS NEWS
ಮಣಿಪಾಲ: ತುಳು ನಾಟಕ ಕಲಾವಿದರ ಕಾರೊಂದು ಮಣಿಪಾಲ ಈಶ್ವರ ನಗರದ ನಗರಸಭೆಯ ಪಂಪ್ಹೌಸ್ ಬಳಿ ಅ.27ರಂದು ಸಂಜೆ ವೇಳೆ ಅಪಘಾತಕ್ಕೀಡಾಗಿದ್ದು, ಯಾವುದೇ ಗಾಯಗಳಾಗದೇ ಎಲ್ಲರೂ ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಉಡುಪಿಯ ಹೀರೆಬೆಟ್ಟುವಿನಲ್ಲಿ ಅ. 28ರಂದು ಸಂಜೆ ಪ್ರದರ್ಶನಗೊಳ್ಳಲಿದ್ದ ‘ಏರ್ಲಾ ಗ್ಯಾರಂಟಿ ಅತ್ತು’ ನಾಟಕ ಪ್ರದರ್ಶನಕ್ಕಾಗಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರ ನಾಟಕ ತಂಡದ ಸದಸ್ಯರು ಕಾರಿನಲ್ಲಿ ಸಂಚರಿಸುತ್ತಿದ್ದು, ಇದರಲ್ಲಿ ತುಳು ನಾಟಕದ ಕಲಾವಿದ ಭೋಜರಾಜ ವಾಮಂಜೂರ್ ಕೂಡ ಇದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರು ಹೊಂಡಕ್ಕೆ ಬಿದ್ದು ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ. ತಂಡದ ಕಲಾವಿದರೆಲ್ಲರೂ ಯಾವುದೇ ಗಾಯಗಳಾಗದೇ ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
– ಕುಂದಾಪುರ: ಕೋಣಿ ಬ್ಯಾಂಕ್ ಕಳ್ಳತನ ಯತ್ನ; ಅಂತರ್ ರಾಜ್ಯ ಕಳ್ಳರಿಬ್ಬರ ಬಂಧನ!
ಕುಂದಾಪುರ: ಕರ್ನಾಟಕ ಬ್ಯಾಂಕ್ ಕೋಣಿ ಶಾಖೆಯಲ್ಲಿ ನ.16 ರಂದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದ ಕಾನೂನು ಸಂಘರ್ಷಕ್ಕೊಳಪಟ್ಟ ಬಾಲಕ ಸಹಿತ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಇಂದ್ರನಗರ ನಿವಾಸಿ ಮೊಹಮ್ಮದ್ ಹುಸೇನ್ (22) ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಬೈಕನ್ನು ಪೊಲೀಸರು ವಶಪಡಿಸಿದ್ದಾರೆ.
– ಕುಂದಾಪುರ: ವರದಕ್ಷಿಣೆ ಕಿರುಕುಳ – ಪ್ರಕರಣ ದಾಖಲು
ಕುಂದಾಪುರ: ಮಹಿಳೆಯೊಬ್ಬರು ಪತಿ ಹಾಗೂ ಇತರರ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ನೀಡಿರುವ ಘಟನೆ ಕುಂದಾಪುರದ ತಾಲೂಕಿನ ಕಾವ್ರಾಡಿ ಗ್ರಾಮದಲ್ಲಿ ನಡೆದಿದೆ. ಕಾವ್ರಾಡಿ ಗ್ರಾಮದ ಗುಲ್ನಾಝ್ ಬೇಗಂ (30) ಅವರು ಆರೋಪಿ ಶೇಖ್ ಮೊಹಮ್ಮದ್ ಯಾಕೂಬ್ ಅವರನ್ನು ವಿವಾಹವಾಗಿದ್ದು, ನಜ್ಮಿನ್ನೀಸಾ, ಶೇಖ್ ಶಂಸುದ್ದೀನ್ ಅವರು ಮದುವೆ ಸಂಬಂಧವಾಗಿ 100 ಪವನ್ ಚಿನ್ನಾಭರಣಗಳು ಮತ್ತು ಕಾರನ್ನು ವರದಕ್ಷಿಣೆಯಾಗಿ ಕೇಳಿದ್ದರು. ನಿರಾಕರಿಸಿದ್ದಕ್ಕೆ ಬೆದರಿಕೆ ಹಾಕಿದ್ದರು. ಬಳಿಕ 70 ಪವನ್ ಚಿನ್ನ ಹಾಗೂ ಕಾರನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಮುಂದಿನ ದಿನಗಳಲ್ಲೂ ಆಸ್ತಿ, ಹೆಚ್ಚಿನ ವರದಕ್ಷಿಣೆ ಪಡೆಯಲು ಮಾನಸಿಕ, ದೈಹಿಕ ಹಿಂಸೆ ನೀಡಿದ್ದಾಗಿ ಪ್ರಕರಣ ದಾಖಲಾಗಿದೆ.