ಹೊದಲ ಗ್ರಾಪಂ ಸದಸ್ಯರ ಹೇಳಿಕೆಗೆ ಸತೀಶ್, ನಿಶ್ಚಿತಾ ಪತ್ರಿಕಾ ಹೇಳಿಕೆ
– ಅನಿತಾ ಶ್ರೀಧರ್ರವರು ಹಣ ಮತ್ತು ಅಧಿಕಾರದ ಆಸೆಗೆ ಪಕ್ಷ ಬದಲಾವಣೆ
– ಮನೆ ವಂಚಿತರಿಗೆ ಮನೆ ಕೊಡಿಸುವ ಕೆಲಸ ಹಾಗೂ ಅಭಿವೃದ್ಧಿ ಬಗ್ಗೆ ವಿನಾಯಕ ತುಪ್ಪದಮನೆ ಚರ್ಚೆ ಮಾಡಿದ್ದಾರೆ
NAMMUR EXPRESS NEWS
ಗ್ರಾಮ ಪಂಚಾಯಿತಿ ಸದಸ್ಯರಾದ ವಿನಾಯಕರವರು ಎಲ್ಲೂ ಕೂಡ ವೈಯಕ್ತಿಕವಾಗಿ ಅನುದಾನ ಅಥವಾ ಕಾರ್ಯಕ್ರಮವನ್ನು ಕೇಳಲಿಲ್ಲ. ಜನರ ತೆರಿಗೆ ಹಣದಲ್ಲಿ ನಡೆಯುತ್ತಿರುವ ಸರ್ಕಾರದ ಅನುದಾನಗಳನ್ನು ಮತ್ತು ಕಾರ್ಯಕ್ರಮಗಳನ್ನು ಕೇಳಿರುವುದು. ನಮ್ಮ ಅಭಿಪ್ರಾಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರೀಕರಿಗೂ ಈ ಹಕ್ಕು ಇದೆ ಎಂದು ಭಾವಿಸಿರುತ್ತೇನೆ.
ಕಾಂಗ್ರೆಸ್ ಪಕ್ಷದ ವಿಚಾರದ ಬಗ್ಗೆ ನಮ್ಮ ನಾಯಕರುಗಳು ನೋಡಿಕೊಳ್ಳುತ್ತಾರೆ. ಒಂದು ಕಡೆ ವಿನಾಯಕರವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆ ಬೆಂಬಲಿಸಿದ್ದರು ಎನ್ನುತ್ತೀರಿ. ಇನ್ನೊಂದು ಕಡೆ ಮೋದಿಯವರನ್ನು ಟೀಕಿಸಿರುತ್ತಾರೆ ಎನ್ನುತ್ತೀರಿ. ಮೋದಿಯವರನ್ನು ಟೀಕಿಸುವವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸುತ್ತಾರಾ ಎಂಬ ಸಾಮಾನ್ಯ ಜ್ಞಾನವು ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್ರವರಿಗೆ ಇಲ್ಲದೆ ಗೊಂದಲದಲ್ಲಿ ಇದ್ದಂತಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬದನೆಹಿತ್ತು ಸತೀಶ್ರವರು ಅಭಿಪ್ರಾಯ ತಿಳಿಸಿರುತ್ತಾರೆ.
ವಿನಾಯಕ್ರವರ ಹೇಳಿಕೆಗಳನ್ನು ಬಿಜೆಪಿ ಕಾರ್ಯಕರ್ತರು ಗಮನಿಸುತ್ತಿದ್ದಾರೆ ಎಂದು ಹೇಳಿದ್ದೀರಾ, ಆದರೆ ಬಡವರ ಪರ, ಹಿಂದುಳಿದ ವರ್ಗದವರ ಪರ, ವಂಚಿತರ ಪರ, ರೈತರ ಪರ ವಿನಾಯಕರವರು ಧ್ವನಿ ಎತ್ತಿರುವುದನ್ನು ಪಕ್ಷಾತೀತ್ಯವಾಗಿ ಎಲ್ಲರೂ ಗಮನಿಸುತ್ತಿದ್ದಾರೆ ಎನ್ನುವುದು ನಿಮ್ಮ ಅರಿವಿನಲ್ಲಿರಲಿ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾರವರು ಇನ್ನೊಬ್ಬರ ವರದಿಯನ್ನು ತಮ್ಮ ಹೆಸರು ಹುದ್ದೆ ಮೂಲಕ ಸ್ಪಷ್ಟ ಪಡಿಸುವಂತೆ ಮಾಡಿದ್ದು, ಬಾಲೀಶತನದ ಪರಮಾವಧಿ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಶ್ರೀಮತಿ ಅನಿತಾ ಶ್ರೀಧರ್ರವರು ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಬೆಂಬಲವನ್ನು ಗೆದ್ದು, ರಾತ್ರೋರಾತ್ರಿ ಹಣ ಮತ್ತು ಅಧಿಕಾರದ ಆಸೆಗೆ ಬಿಜೆಪಿ ಬಾಗಿಲು ತಟ್ಟಿ ಈಗ ಗ್ರಾಮ ಪಂಚಾಯಿತಿ ಸದಸ್ಯರಾದ ವಿನಾಯಕರವರಿಗೆ ವೈಯಕ್ತಿಕ ಪಕ್ಷದ ವಿಚಾರ ಮತ್ತು ರಾಜಕೀಯ ಪಾಠ ಮಾಡುತ್ತಿರುವುದು, ಉಪವಾಸ ಸತ್ಯಾಗ್ರಹ ನಡೆಯುವ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿಜೆಪಿ ಬೆಂಬಲಿತ ಅನಿತಾರವರು ಬಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವುದು ಕೂಡ ತೀರಾ ಹಾಸ್ಯಸ್ಪದವಾಗಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಜವಾಬ್ದಾರಿ ಸ್ಥಾನದಲ್ಲಿರುವ ನೀವುಗಳು ಹುದ್ದೆಯ ಗೌರವವನ್ನು ಅರಿತು ಹೊದಲ ಅರಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆ ವಂಚಿತರಿಗೆ ಮನೆ ಕೊಡಿಸುವ ಕೆಲಸ ಮಾಡಿ ಬೇರೆ ಅಭಿವೃದ್ಧಿ ವಿಚಾರಕ್ಕೆ ಸಂಬಂದಿಸಿದಂತೆ ಮುಂದಿನ ದಿನಗಳಲ್ಲಿ ನಿಮಗೆ ಗ್ರಾಮ ಪಂಚಾಯತಿ ಸದಸ್ಯ ವಿನಾಯಕರವರೇ ಉತ್ತರಿಸುತ್ತಾರೆ ಎಂದು ಗ್ರಾಮ ಪಂಚಾಯತಿ ಸದಸ್ಯೆ ನಿಶ್ಚಿತಾ ಅವರು ತಿಳಿಸಿದ್ದಾರೆ.