ಕರ್ನಾಟಕ ಟಾಪ್ ನ್ಯೂಸ್
– ಬಳ್ಳಾರಿ: ದರ್ಶನ್ಗೆ ಪಾರ್ಶ್ವವಾಯು ಆಗಬಹುದು: ವೈದ್ಯಕೀಯ ವರದಿ!
– ಎಣ್ಣೆ ಪ್ರಿಯರಿಗೆ ಶಾಕ್..! ನವೆಂಬರ್ 20 ರಿಂದ ಮದ್ಯದಂಗಡಿ ಬಂದ್
– ಹುಬ್ಬಳ್ಳಿಯಲ್ಲಿ 20ಕ್ಕೂ ಹೆಚ್ಚು ಜನರ ಮೇಲೆ ಹುಚ್ಚುನಾಯಿ ದಾಳಿ!
NAMMUR EXPRESS NEWS
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅ. 29ರಂದು ವಿಚಾರಣೆ ನಡೆಸಿದ ವಿಚಾರಣೆಗೆ ಆದೇಶ ಹೊರಡಿಸಲಾಗಿದೆ. ಇದೇ ವೇಳೆ ನಟ ದರ್ಶನ್ ಅವರ ಬೆನ್ನು ನೋವಿನ ವರದಿಯನ್ನು ಸಲ್ಲಿಸಲಾಗಿದೆ.
ದರ್ಶನ್ ಅವರ ಬೆನ್ನು ನೋವಿನ ಸಮಸ್ಯೆಗೆ ವೈದ್ಯಕೀಯ ವರದಿಯಲ್ಲಿ ಸ್ಪೋಟಕ ವಿಷಯ ಬಹಿರಂಗವಾಗಿದೆ. ದರ್ಶನ್ ಅವರ ಬೆನ್ನು ಮೂಳೆಯ L5 ಹಾಗೂ S1 ನಲ್ಲಿ ವಿಪರೀತ ನೋವು ಕಾಣಿಸಿಕೊಂಡಿದ್ದು, ಜೊತೆಗೆ ಬೆನ್ನಿನಲ್ಲಿಯೂ ಸಹ ಕಂಡುಬಂದಿದೆ. ಇದೆ ರೀತಿ ಮುಂದುವರೆದರೆ ನಟ ದರ್ಶನ್ ಅವರಿಗೆ ಪ್ಯಾಲಿಸಿಸ್ ಆಗುವ ಸಾಧ್ಯತೆ ಇದೆ.ಅ. 29ರಂದು ನಟ ದರ್ಶನ್ ಅವರ ಆರೋಗ್ಯದ ಕುರಿತು ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು, ನ್ಯೂರೋ ಸರ್ಜನ್ ಮೂರು ಅಂಶ ಹೇಳಿದ್ದಾರೆ. ನಂಬೈಸ್ ಇದೆ, ರಕ್ತಪರಿಚಲನೆ ಆಗುತ್ತಿಲ್ಲ. ಇದರಿಂದ ಕಿಡ್ನಿ ಸಮಸ್ಯೆ ಆಗಬಹುದು. ಡಿಸ್ಕ್ ಸಮಸ್ಯೆ ಇದೆ. ತಕ್ಷಣ ಸರ್ಜರಿಗೆ ಸೂಚಿಸಿದ್ದಾರೆ. ಇಲ್ಲವಾದರೆ ಪ್ಯಾರಾಲಿಸಿಸ್ ಆಗಬಹುದು.
ದರ್ಶನ್ ಅವರ ಕಾಲಿಗೆ ಪಾರ್ಶ್ವವಾಯು ಆಗುವ ಸಾಧ್ಯತೆ ಇದೆ. ಬೆಂಗಳೂರಿನ ಆಸ್ಪತ್ರೆ ಅಥವಾ ಬಳ್ಳಾರಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಮತ್ತು ಆಪರೇಷನ್ಗೆ ಸೂಚಿಸಲಾಗಿದೆ.
ಇದರಿಂದ ಕಿಡ್ನಿ ಸಮಸ್ಯೆ ಆಗಬಹುದು. ಡಿಸ್ಕ್ ಸಮಸ್ಯೆ ಇದೆ. ತಕ್ಷಣ ಸರ್ಜರಿಗೆ ಸೂಚಿಸಿದ್ದಾರೆ. ಇಲ್ಲವಾದರೆ ಪ್ಯಾರಾಲಿಸಿಸ್ ಆಗಬಹುದು. ದರ್ಶನ್ ಅವರ ಕಾಲಿಗೆ ಪಾರ್ಶ್ವವಾಯು ಆಗುವ ಸಾಧ್ಯತೆ ಇದೆ. ಬೆಂಗಳೂರಿನ ಆಸ್ಪತ್ರೆ ಅಥವಾ ಬಳ್ಳಾರಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಮತ್ತು ಆಪರೇಷನ್ಗೆ ಸೂಚಿಸಲಾಗಿದೆ. ಯಾವುದೇ ಅನಾರೋಗ್ಯ ಕಾಡುವುದಿಲ್ಲ ಅವರಿಗೆ ತುರ್ತಾಗಿ ಚಿಕಿತ್ಸೆ ನೀಡಬೇಕಾಗಿದೆ. ಈ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಿವಿ ನಾಗೇಶ್ ಮನವಿ ಮಾಡಿದ್ದಾರೆ.
– ಎಣ್ಣೆ ಪ್ರಿಯರಿಗೆ ಶಾಕ್..! ನವೆಂಬರ್ 20 ರಿಂದ ಮದ್ಯದಂಗಡಿ ಬಂದ್
ಬೆಂಗಳೂರು: ರಾಜ್ಯದ ಮದ್ಯಪ್ರಿಯರಿಗೆ ಶಾಕ್ ಎದುರಾಗಲಿದೆ, ನವೆಂಬರ್ 20 ರಿಂದ ಮದ್ಯದಂಗಡಿ ಬಂದ್ ಆಗಲಿದೆ ಎಂದು ಹೇಳಲಾಗುತ್ತಿದೆ. ಮದ್ಯದಂಗಡಿ ಮುಷ್ಕರ ನಡೆಸಲಾಯಿತು ಎಂದು ಪೌಂಡೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಗುರುಸ್ವಾಮಿ ಪ್ರಕಟಿಸಿದರು. ವೈನ್ ಶಾಪ್ ಅನೇಕ ಬೇಡಿಕೆಗಳನ್ನು ಇಟ್ಟಿದ್ದಾರೆ. ಈ ಮೇಲಿನ ಭ್ರಷ್ಟಾಚಾರ ಮತ್ತು ಕಿರುಕುಳ ಹೆಚ್ಚಾಗುತ್ತಿದೆ ಎಂಬ ಬೇಡಿಕೆಯೂ ಇದೆ.
ವೈನ್ ಶಾಪ್ ತಮ್ಮ ಅಂಗಡಿಗಳ ಬಳಿ ಗೊತ್ತುಪಡಿಸಿದ ‘ಸ್ಟ್ಯಾಂಡ್ ಮತ್ತು ಡ್ರಿಂಕ್’ ತಾಣಗಳನ್ನು ರಚಿಸಲು ಅನುಮತಿಸಲು ಅವರು ಸರ್ಕಾರವನ್ನು ಬಯಸುತ್ತಾರೆ. ಪ್ಯಾಕ್ ಮಾಡಿದ ಸ್ನಾಕ್ಸ್ ಜೊತೆಗೆ ನಮ್ಮ ಮದ್ಯದಂಗಡಿಯಲ್ಲಿನ ಖರೀದಿಗಳನ್ನು ಆನಂದಿಸಲು ಅವಕಾಶ ನೀಡುವುದಾಗಿಯೂ ಹೇಳಿದ್ದಾರೆ.ಈ ಉಪಕ್ರಮವು ದುಬಾರಿ ಬಾರ್ಗಳು ಅಥವಾ ಸ್ಟಾರ್ ಹೋಟೆಲ್ಗಳಿಗೆ ಹೋಗಲು ಸಾಧ್ಯವಾಗದವರಿಗೆ ವಿಶ್ರಾಂತಿ ವಾತಾವರಣವನ್ನು ಒದಗಿಸುವ ಮೂಲಕ ಆದಾಯವನ್ನು ನೀಡುತ್ತದೆ. “ಇಂತಹ ವ್ಯವಸ್ಥೆಯು ನೆರೆಯ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ ಮತ್ತು ಇದು ಆಯಾ ಸರ್ಕಾರಗಳಿಗೆ ಹೆಚ್ಚಿನ ಆದಾಯವನ್ನು ತರುತ್ತಿದೆ” ಎಂದು ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಫೆಡರೇಶನ್ ಹೇಳಿದೆ.
ಬೆಂಗಳೂರಿನಲ್ಲಿ ಪ್ರತಿ ಮಳಿಗೆಯಿಂದ ತಿಂಗಳಿಗೆ ಕನಿಷ್ಠ 40,000-50,000 ರೂಪಾಯಿ ಲಂಚವಾಗಿ ಈ ಮೊತ್ತವು ಪ್ರತಿ ಜಿಲ್ಲೆಯಿಂದ ಜಿಲ್ಲೆಗೆ ಬದಲಾಗುತ್ತದೆ ಎಂದು ಒಕ್ಕೂಟದ ಮೂಲಗಳು ತಿಳಿಸಿವೆ. ಹಾಗೂ, ಇಲಾಖೆಯಲ್ಲಿನ ಕೆಲವು ಅಧಿಕಾರಿಗಳು ಐದು ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಉಳಿದಿದ್ದಾರೆ. ಅವರೆಲ್ಲ ವರ್ಗಾವಣೆ ಮಾಡಬೇಕು.
ಸರ್ಕಾರವು ನವೆಂಬರ್ 20 ರಂದು ಮದ್ಯದಂಗಡಿ ಮುಷ್ಕರ ನಡೆಸುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ಎಸ್. ಗುರುಸ್ವಾಮಿ. ಇನ್ನು, ಈ ಮುಷ್ಕರ ಒಂದೇ ದಿನ ನಡೆಯುತ್ತಾ ಅಥವಾ ಮುಂದುವರಿಯುತ್ತಾ ಅನ್ನೋ ಬಗ್ಗೆಯೂ ಮಾಹಿತಿ ತಿಳಿದುಬಂದಿಲ್ಲ.
– ಹುಬ್ಬಳ್ಳಿಯಲ್ಲಿ 20ಕ್ಕೂ ಹೆಚ್ಚು ಜನರ ಮೇಲೆ ಹುಚ್ಚುನಾಯಿ ದಾಳಿ!!
ಹುಬ್ಬಳ್ಳಿ : ಇತ್ತೀಚಿಗೆ ಹುಚ್ಚು ನಾಯಿ ಹಾಗೂ ಬೀದಿ ನಾಯಿಗಳ ದಾಳಿ ಸಂಭವಿಸಿದ ಘಟನೆಗಳು ನಡೆದಿವೆ. ಇದೀಗ ಹುಬ್ಬಳ್ಳಿಯ ಗೋಕು : ಇತ್ತೀಚಿಗೆ ಹುಚ್ಚು ನಾಯಿ ಹಾಗೂ ಬೀದಿಲ ರಸ್ತೆಯಲ್ಲಿ ಹುಚ್ಚುನಾಯಿ ದಾಳಿ ಸುಮಾರು 20ಕ್ಕೂ ಹೆಚ್ಚು ಜನರಿಗೆ ಕಚ್ಚಿರುವ ಘಟನೆ ನಡೆದಿದೆ. ಹೌದು ಹುಬ್ಬಳ್ಳಿ ನಗರದ ಗೋಕುಲ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಹುಚ್ಚುನಾಯಿ ದಾಳಿಯಿಂದ ಸುಮಾರು 20ಕ್ಕೂ ಹೆಚ್ಚು ಜನರು ಕಾಣಿಸಿಕೊಂಡಿದ್ದಾರೆ.
ಕೂಡಲೇ ಗಾಯಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಾಯಿಗೆ ಹುಚ್ಚು ಹಿಡಿದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ ಸದ್ಯ ಗಾಯಾಳುಗಳಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.