ಕರಾವಳಿ ಟಾಪ್ ನ್ಯೂಸ್
ಉಡುಪಿ: ಸ್ಕೂಟರ್ನಲ್ಲಿ ಗಾಂಜಾ ಸಾಗಾಟ – ಜಬ್ಬಾರ್ ಅರೆಸ್ಟ್.!
* ಪುತ್ತೂರು: 22ಸಾವಿರ ರೂ.ಮೌಲ್ಯದ ಬೀಡಿಗಳನ್ನು ಕಳವು ಪ್ರಕರಣ!
* ಪುತ್ತೂರು : ಲಾರಿ-ದೋಸ್ತ್ ವಾಹನ ನಡುವೆ ಢಿಕ್ಕಿ; ಆರೋಪಿಗೆ ಶಿಕ್ಷೆ ಪ್ರಕಟ!
NAMMUR EXPRESS NEWS
ಉಡುಪಿ : ಸ್ಕೂಟರ್ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಉಡುಪಿ ಸೆನ್ ಪೊಲೀಸರು ಪೆರಂಪಳ್ಳಿ ಎಂಬಲ್ಲಿರುವ ಸಾಯಿರಾಧಾ ಟೌನ್ಶಿಪ್ ಬಳಿ ಬಂಧಿಸಿದ್ದಾರೆ.ಉಡುಪಿ ಕೇಳಾರ್ಕಳಬೆಟ್ಟು ನಿವಾಸಿ ಅಬ್ದುಲ್ ಜಬ್ಬಾರ್ (27) ಬಂಧಿತ ಆರೋಪಿ.
ಈತನಿಂದ ಒಟ್ಟು 3,04,610ರೂ. ಮೌಲ್ಯದ 2 ಕೆ.ಜಿ 344 ಗ್ರಾಂ ಗಾಂಜಾ, ಸ್ಕೂಟರ್, 5810 ರೂ. ನಗದು, ಮೊಬೈಲ್ ಹಾಗು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಉಪನಿರೀಕ್ಷಕ ಪವನ್ ನಾಯಕ್, ಸಿಬ್ಬಂದಿ ಪ್ರವೀಣ್ ಕುಮಾರ್, ಪ್ರವೀಣ್, ವೆಂಕಟೇಶ್, ರಾಜೇಶ್, ಯತೀನ್ ಕುಮಾರ್, ಪ್ರಶಾಂತ್ ಮತ್ತು ಚರಣ್ ರಾಜ್ ಅವರನ್ನೊಳಗೊಂಡ ತಂಡವು ಈ ಕಾರ್ಯಾಚರಣೆ ನಡೆಸಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಪುತ್ತೂರು: 22ಸಾವಿರ ರೂ.ಮೌಲ್ಯದ ಬೀಡಿಗಳನ್ನು ಕಳವು ಪ್ರಕರಣ!
ಪುತ್ತೂರು: 2 ವರ್ಷದ ಹಿಂದೆ ಪುತ್ತೂರಿನ ಬೀಡಿ ಬ್ರ್ಯಾಂಚ್ವೊಂದರಿಂದ ಸಾವಿರಾರು ರೂಪಾಯಿ ಮೌಲ್ಯದ ಬೀಡಿ ಕದ್ದ ಪ್ರಕರಣದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಡಬ ತಾಲೂಕಿನ ಕುದ್ಮಾರು ಗ್ರಾಮದ ಏರ್ಕಮೆ ನಿವಾಸಿ ಮಹಮ್ಮದ್ ಕುಂಞಿ ಬಂಧಿತ ಆರೋಪಿಯಾಗಿದ್ದಾನೆ.
2022ರಲ್ಲಿ ಕೂರ್ನಡ್ಕದ ಬೀಡಿ ಬ್ರ್ಯಾಂಚ್ವೊಂದರಿಂದ ಸುಮಾರು 22ಸಾವಿರ ರೂ.ಮೌಲ್ಯದ ಬೀಡಿಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಬಂಧಿತರಾಗಿದ್ದರು. ನ್ಯಾಯಾಲಯದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು.
ನ್ಯಾಯಾಲಯ ಆರೋಪಿ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ತನಿಖೆ ಕೈಗೆತ್ತಿಕೊಂಡ ಪುತ್ತೂರು ನಗರ ಠಾಣಾ ಪೊಲೀಸರು ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜ ಅವರ ಮಾರ್ಗದರ್ಶನದಂತೆ ಸಿಬ್ಬಂದಿಗಳಾದ ವಸಂತ ಗೌಡ ಮತ್ತು ಬಸವರಾಜು ಅವರು ಆರೋಪಿಯನ್ನು ಉಳ್ಳಾಲದ ಕೆ ಸಿ ರೋಡ್ ಎಂಬಲ್ಲಿ ಬಂಧಿಸಿದ್ದಾರೆ.
* ಪುತ್ತೂರು : ಲಾರಿ-ದೋಸ್ತ್ ವಾಹನ ನಡುವೆ ಢಿಕ್ಕಿ; ಆರೋಪಿಗೆ ಶಿಕ್ಷೆ ಪ್ರಕಟ!
ಪುತ್ತೂರು: ಕಡಬ ತಾಲೂಕು ಕೊಣಾಲು ಗ್ರಾಮದ ಕೋಲ್ಪೆ ಮಸೀದಿ ಬಳಿ 2021ರ ಫೆ. 25ರಂದು ಲಾರಿ ಹಾಗೂ ದೋಸ್ತ್ ವಾಹನ ನಡುವೆ ಢಿಕ್ಕಿ ಸಂಭವಿಸಿ ದೋಸ್ತ್ ವಾಹನ ಚಾಲಕ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಚ್. ಆರ್. ಶಿವಣ್ಣ ಅವರ ಪೀಠ ಲಾರಿ ಚಾಲಕನಿಗೆ 6 ತಿಂಗಳ ಜೈಲು ಶಿಕ್ಷೆ ಮತ್ತು ಒಂದು ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಹಾಸನ ಕಡೆಗೆ ಹೋಗುತ್ತಿದ್ದ ಲಾರಿ ಹಾಗೂ ಮಂಗಳೂರು ಕಡೆಗೆ ಹೋಗುತ್ತಿದ್ದ ದೋಸ್ತ್ ಗಾಡಿ ನಡುವೆ ಈ ಢಿಕ್ಕಿ ಸಂಭವಿಸಿತ್ತು. ಪರಿಣಾಮ ದೋಸ್ತ್ ಗಾಡಿ ಚಾಲಕ ಚೇತನ್ ಗಂಭೀರ ಗಾಯಗೊಂಡ ಪರಿಣಾಮ ಮೃತಪಟ್ಟಿದ್ದರು. ಸರಕಾರದ ಪರವಾಗಿ ಅಭಿಯೋಜಕ ಕವಿತಾ ವಾದ ಮಂಡಿಸಿದರು.