ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಮೂವರು ನಾಮ ನಿರ್ದೇಶನ
– ಕಾಂಗ್ರೆಸ್ ನಾಯಕರಾದ ರಾಘವೇಂದ್ರ ಶೆಟ್ಟಿ, ಡಾ.ಅನಿಲ್, ವಿಲಿಯಮ್ ಆಯ್ಕೆ
– ಸರ್ಕಾರದಿಂದ ನಾಮ ನಿರ್ದೇಶನ: ಶುಭಾಶಯಗಳು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯತಿಗೆ ಸರ್ಕಾರ ಮೂವರನ್ನು ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.
ಯುವ ಪ್ರಮುಖರಾದ ರಾಘವೇಂದ್ರ ಶೆಟ್ಟಿ, ಡಾ.ಅನಿಲ್, ವಿಲಿಯಮ್ ಮಾರ್ಟೀಸ್ ಅವರನ್ನು ಆಯ್ಕೆ ಮಾಡಿದ್ದು ಸರ್ಕಾರದಿಂದ ನಾಮ ನಿರ್ದೇಶನಗೊಂಡ ಮೂವರಿಗೆ ದೀಪಾವಳಿ ಗಿಫ್ಟ್ ಸಿಕ್ಕಿದೆ. ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ ಮೂವರಿಗೆ ಮಹತ್ವದ ಹುದ್ದೆ ಸಿಕ್ಕಿದೆ.
2 ವರ್ಷದಿಂದ ನಾಮಕರಣವಾಗಿರಲಿಲ್ಲ
ಸರ್ಕಾರ ರಚನೆಯಾಗಿ ಕಳೆದ 2 ವರ್ಷಗಳಿಂದ ನಾಮನಿರ್ದೇಶನ ಸದಸ್ಯರ ನೇಮಕ ಗೊಂಡಿರಲಿಲ್ಲ. 15 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ 3 ನಾಮನಿರ್ದೇಶನ ಸದಸ್ಯರ ಆಯ್ಕೆಗೆ ಅವಕಾಶ ಇತ್ತು.
ಬಿ.ಆರ್. ರಾಘವೇಂದ್ರ ಶೆಟ್ಟಿ ಸಾಕಷ್ಟು ಸಮಯದ ಹಿಂದೆ ಬಾಳೇಬೈಲು ವಾರ್ಡ್ನಿಂದ ಸದಸ್ಯರಾಗಿ ಆಯ್ಕೆಯಾಗಿದ್ದರೆ . ಡಾ.ಅನಿಲ್ ಕಾಂಗ್ರೆಸ್ ಕಟ್ಟಾಳುವಾಗಿಯೇ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾಗಿರುವ ವಿಲಿಯಂ ಮಾರ್ಟೀಸ್ ಕೂಡ ಪಕ್ಷ ನಿಷ್ಟೆ ಮತ್ತು ದಕ್ಷ ಕಾರ್ಯನಿರ್ವಹಣೆಗೆ ಹೆಸರಾದವರು. ಈ ಮುಖಂಡರಿಗೂ ಶುಭಾಶಯಗಳು.