- ದೀಪಾವಳಿ ಹಬ್ಬಕ್ಕೆ ಪಟ್ಟಣಗಳು ಫುಲ್: ಎಲ್ಲೆಡೆ ಭರ್ಜರಿ ಖರೀದಿ!
* ಮಾರುಕಟ್ಟೆಗಳಲ್ಲಿ ಕಾಲಿಡಲು ಸಹ ಜಾಗವಿಲ್ಲದಷ್ಟು ಜನ ಸಂದಣಿ
* ಹೂವು, ಹಣ್ಣು, ಹಣತೆ, ಅಂಗಡಿಪೂಜೆಗೆ ಸಾಮಗ್ರಿ ಕೊಳ್ಳಲು ಗಡಿಬಿಡಿ
NAMMUR EXPRESS NEWS
ಬೆಂಗಳೂರು: ವರ್ಷದ ದೊಡ್ಡಹಬ್ಬದ ಸಂಭ್ರಮ ಶುರುವಾಗಿದೆ. ಒಂದು ವಾರಗಳ ಕಾಲ ದೀಪಾವಳಿ ಸಡಗರ ಮನೆ ಮಾಡಲಿದೆ. ಬುಧವಾರ ರಾತ್ರಿಯೇ ಪದ್ದತಿಯಂತೆ ನೀರು ತುಂಬುವ ಆಚರಣೆ ಕೈಗೊಳ್ಳಲಾಗಿದೆ. ಗುರುವಾರ ಎಣ್ಣೆ ಸ್ನಾನ ಮಾಡಲಾಗಿದ್ದು, ಇನ್ನೂ ಹಬ್ಬದ ಹಿನ್ನೆಲೆಯಲ್ಲಿ ಖರೀದಿಯು ಜೋರಾಗಿ ನಡೆದಿದೆ.
ಬೆಂಗಳೂರು, ಶಿವಮೊಗ್ಗ, ಮಂಗಳೂರು, ಉಡುಪಿ, ದಾವಣಗೆರೆ, ಹುಬ್ಬಳಿ ಸೇರಿದಂತೆ ಪ್ರತಿ ಜಿಲ್ಲಾ, ತಾಲೂಕು, ಪಟ್ಟಣಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಬೆಂಗಳೂರು ನಗರದಲ್ಲಿ ಎಲ್ಲೆಲ್ಲೂ ಮಾರುಕಟ್ಟೆ ರಶ್ ಆಗಿದೆ. ಚಿನ್ನದ ಅಂಗಡಿ, ಬಟ್ಟೆ ಅಂಗಡಿ, ಅಲಂಕಾರ ವಸ್ತುಗಳ ಅಂಗಡಿ, ಹೂವು ಹಣ್ಣು ತರಕಾರಿ ಅಂಗಡಿಗಳು ಜನರಿಂದ ತುಂಬಿ ಹೋಗಿವೆ.
ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಮತ್ತು ಲಾಲ್ ಬಾಗ್ ನಲ್ಲಿ ದಿನ ಕಾಲಿಡಲು ಸಹ ಜಾಗವಿಲ್ಲ ಎಂದು ಮಾತನಾಡುವಷ್ಟು ರಶ್ ನಿರ್ಮಾಣವಾಗಿತ್ತು. ಹೂವು, ಹಣ್ಣು, ಹಣತೆಗಳನ್ನ ಖರೀದಿಸುತ್ತಿದ್ದ ಜನರು, ಅಂಗಡಿಪೂಜೆಗೆ ಬೇಕಾದ ಸಾಮಗ್ರಿಗಳನ್ನ ಕೊಂಡುಕೊಳ್ಳುವ ಗಡಿಬಿಡಿಯಲ್ಲಿದ್ದರು.
ಶಿವಮೊಗ್ಗ ನಗರದ ಪ್ರಮುಖ ಮಾರುಕಟ್ಟೆಯಾಗಿದ್ದರೇ, ಇತ್ತ ಗೋಪಿ ಸರ್ಕಲ್, ಪೊಲೀಸ್ ಚೌಕಿ, ಲಕ್ಷ್ಮೀ ಟಾಕೀಸ್ ಸರ್ಕಲ್ಗಳಲ್ಲಿಯು ಹಬ್ಬದ ವ್ಯಾಪಾರ ನಡೆದಿತ್ತು. ಒಟ್ಟಾರೆ ಲಕ್ಷ್ಮೀ ಪೂಜೆಗಾಗಿ ಮಂದಿ ಖರೀದಿಯಲ್ಲಿ ತೊಡಗಿದ್ದು, ರೇಟು ಸ್ವಲ್ಪ ದುಬಾರಿಯಾಗಿದೆ.
ಗುರುವಾರ, ಶುಕ್ರವಾರ ಎರಡು ದಿನ ಕೆಲವು ಕಡೆ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಗುರುವಾರ ನರಕ ಚತುರ್ದಶಿ ಇದೆ.