ತೀರ್ಥಹಳ್ಳಿಯಲ್ಲಿ ದೀಪಾವಳಿ ಆಚರಣೆ ಬಲು ಜೋರು!!
– ಮಳೆ ಮಧ್ಯೆ ಖರೀದಿಗಾಗಿ ಮುಗಿ ಬಿದ್ದಿರುವ ಜನ!!
– ಪಟ್ಟಣ ಪೂರ್ತಿ ರಶ್ ರಶ್!
NAMMUR EXPRESS NEWS
ತೀರ್ಥಹಳ್ಳಿ: ಎಲ್ಲರೂ ಸಂಭ್ರಮದಿಂದ ದೀಪಾವಳಿ ಹಬ್ಬದ ಆಚರಣೆಗೆ ಸಿದ್ಧತೆ ನಡೆಸಿದ್ದು, ಹಬ್ಬದಲ್ಲಿ ಅಗತ್ಯ ವಸ್ತುಗಳ ಖರೀದಿಯೂ ಜೋರಾಗಿದೆ. ಸುಮಾರು ಒಂದು ವಾರದಿಂದಲೇ ಹಬ್ಬದ ಸಂಭ್ರಮ ನಗರದಲ್ಲಿ ಮನೆ ಮಾಡಿದ್ದು, ಮನೆ ಮತ್ತು ಅಂಗಡಿಗಳ ಸ್ವಚ್ಛತೆ ಕಾರ್ಯ ಭರದಿಂದ ಸಾಗಿವೆ. ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಜನಸಾಗರವೇ ಹರಿದು ಬರುತ್ತಿದೆ. ಹೂವು, ಹಣ್ಣು, ಹಣತೆ, ಆಭರಣ, ಪಟಾಕಿ,ಬಟ್ಟೆ,ಗೂಡು ದೀಪ ಅಲಂಕಾರಿಕ ವಸ್ತುಗಳು ಸೇರಿ ಎಲ್ಲ ವಸ್ತುಗಳ ಖರೀದಿಗಾಗಿ ಜನರು ಕುಟುಂಬ ಸಮೇತರಾಗಿ ಆಗಮಿಸಿ ಬಟ್ಟೆ, ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.
ಪಟ್ಟಣದಲ್ಲಿ ತೀರ್ಥಹಳ್ಳಿ ಸಾರ್ವಜನಿಕ ಕ್ರೀಡಾಂಗಣದಲ್ಲಿ ಪಟಾಕಿ ಮಳಿಗೆ ತೆರೆದಿದ್ದು, ಪಟಾಕಿ ವ್ಯಾಪಾರ ಭರ್ಜರಿಯಿಂದ ನಡೆಯುತ್ತಿದೆ.
ಬಣ್ಣ ಬಣ್ಣದ ತರಹೇವಾರಿ ಆಕಾಶ ಬುಟ್ಟಿಗಳು, ಲೈಟಿನ ಸರ, ಬಗೆ ಬಗೆಯ ಹಣತೆಗಳು, ತೋರಣಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಜನರನ್ನು ಆಕರ್ಷಿಸುತ್ತಿವೆ. ಅಲಂಕಾರಕ್ಕೆ ಹಣತೆ, ಹೂವು ಸೇರಿ ಎಲ್ಲದಕ್ಕೂ ನೈಸರ್ಗಿಕ ವಸ್ತುಗಳಿಗೇ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಆದರೆ ಇದೀಗ ಆಕರ್ಷಕವಾಗಿ ಕಾಣುವ, ಜನರನ್ನು ಆಕರ್ಷಿಸುವ ಕೃತಕ ವಸ್ತುಗಳ ದರ್ಬಾರ್ ಹೆಚ್ಚಿದ್ದು, ಜನರು ಅವುಗಳ ಖರೀದಿಗೆ ಹಾತೊರೆಯುತ್ತಿದ್ದಾರೆ. ಜೊತೆಗೆ ಬೆಂಗಳೂರು, ಸಿಟಿಗಳಿಂದ ಊರಿಗೆ ಬಂದಿದ್ದು ಕುಟುಂಬ ಸಮೇತರಾಗಿ ಹಬ್ಬದಲ್ಲಿ ಭಾಗಿಯಾಗುತ್ತಿದ್ದಾರೆ.