ತೀರ್ಥಹಳ್ಳಿಯ ಗುಡ್ಡೇಕೇರಿ ಶಾಲೆಯಲ್ಲಿ ಕನ್ನಡ ಡಿಂಡಿಮ!
– ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಕೊಳಲು ವಾದನ, ನೃತ್ಯ
– ಹಳ್ಳಿ ಶಾಲೆಯಲ್ಲಿ ಸಂಭ್ರಮದ ರಾಜ್ಯೋತ್ಸವ!
– ತೀರ್ಥಹಳ್ಳಿ: ಹಿರಿಯ ಪತ್ರಕರ್ತ ಶ್ರೀ ಪಾದ ಭಟ್ ಅವರಿಗೆ ಬ್ರಾಹ್ಮಣ ಸಂಘದಿಂದ ಸನ್ಮಾನ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಮಾದರಿ ಶಾಲೆಯಾಗಿರುವ ಗುಡ್ಡೇಕೇರಿ ಪ್ರೌಢ ಶಾಲೆಯಲ್ಲಿ ಸಂಭ್ರಮದ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಮೊದಲು ರಾಷ್ಟ್ರ ಧ್ವಜ ಹಾರಿಸಿ, ರಾಷ್ಟ್ರಗೀತೆ, ನಾಡಗೀತೆ ಹಾಡಿ ಗೌರವ ಸಲ್ಲಿಸಲಾಯಿತು. ಧ್ವಜಾರೋಹಣವನ್ನು ಶಾಲೆಯಲ್ಲೇ ಓದಿರುವ ಬಿ,ಇಡಿ ವಿದ್ಯಾರ್ಥಿ ಸಂದೇಶ್ ಕಲ್ಕೋಡ್ ನೇರವೇರಿಸಿ, ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್.ಪಿ ಧ್ವಜಾರೋಹಣ ನೇರವೇರಿಸಿದರು. ಅಂತರಾಷ್ಟ್ರೀಯ ಖ್ಯಾತಿಯ ಕೊಳಲು ವಾದಕ, ಅಮಿತ್ ನಾಡಿಗ್, ಭರತನಾಟ್ಯ ಪ್ರವೀಣೆ, ನಿವೇದಿತಾ ನಾಡಿಗ್, ಪುತ್ರಿ ಸಾಹಿತ್ಯ ನಾಡಿಗ್, ಹಾಗೂ ಅಂತರಾಷ್ಟ್ರೀಯ ಕಥಕ್ಕಳಿ ನೃತ್ಯ ಪ್ರತಿಭೆ, ಮಾನಸ ಜೋಶಿ ( ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ, ಮಹೇಶ್ ಜೋಶಿ ಅವರ ಸುಪುತ್ರಿ ) ಹಾಗೂ ಶಂಕರ್ ಅವರು ಆಗಮಿಸಿ ಕೊಳಲು ವಾದನ, ನೃತ್ಯ ನಡೆಸಿಕೊಟ್ಟರು. ಅಂತರಾಷ್ಟ್ರೀಯ ಮಟ್ಟದ ಅದ್ಬುತ ಪ್ರತಿಭೆಗಳನ್ನು ಶಾಲೆಗೆ ಕರೆತಂದ ಶಾಲೆಯ ಹಿತೈಷಿಗಳು, ಹಾಗೂ ಆಗುಂಬೆ ಗ್ರಾಮ ಪಂಚಾಯತಿ ಸದಸ್ಯರಾದ ಶಶಾಂಕ್ ಹೆಗ್ಡೆ, ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾದ, ಸುರೇಶ್ ಎಂ ಜಿ ಹಾಗೂ ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ ಶಿಕ್ಷಕರಾದ ಸುಬ್ರಹ್ಮಣ್ಯ ಎಸ್ , ಆನಂದನ್ ಎ, ವಿರೇಶ್ ಟಿ, ಶೌಕತ್ ಆಲಿ, ಸೌಮ್ಯ ಎಲ್ ಎಲ್, ಪ್ರಥಮ ದರ್ಜೆ ಸಹಾಯಕರಾದ, ನಾಗರಾಜ್ ಹಾಗೂ ಎಲ್ಲಾ ಮಕ್ಕಳು ಹಾಜರಿದ್ದರು.. ವೀರೇಶ್ ನಿರೂಪಿಸಿ, ಸುಬ್ರಹ್ಮಣ್ಯ ವಂದಿಸಿ, ವರ್ಣಾ ಹಾಗೂ ಏಕಾತಾ ಪ್ರಾರ್ಥಿಸಿದರು.
ಹಿರಿಯ ಪತ್ರಕರ್ತ ಶ್ರೀ ಪಾದ ಭಟ್ ಅವರಿಗೆ ಬ್ರಾಹ್ಮಣ ಸಂಘದಿಂದ ಸನ್ಮಾನ
ತೀರ್ಥಹಳ್ಳಿಯ ಹಿರಿಯ ಪತ್ರಕರ್ತ ಸಂಯುಕ್ತ ಕರ್ನಾಟಕದ ಪತ್ರಿಕೆಯ ನಾಲ್ಕು ದಶಕಗಳ ಕಾಲ ವರದಿಗಾರರು ಮತ್ತು ಏಜೆಂಟರಾಗಿದ್ದ ಶ್ರೀಪಾದ ಭಟ್ ಅವರನ್ನು ತೀರ್ಥಹಳ್ಳಿ ಬ್ರಾಹ್ಮಣ ಸಂಘದ ಕುರುವಳ್ಳಿ ಶಾಖೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನದ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ತುಂಬುರಮನೆ ಚಂದ್ರಶೇಖರ್, ಹಿರಿಯರಾದ ಶಿವರಾಮ ಉಡುಪ ,ಬಿ.ಕೆ .ವಾದಿರಾಜ, ಸತೀಶ್ ಬೆಳ್ಳಯ್ಯ ಮುಂತಾದವರು ಕಾರ್ಯಕ್ರಮದಲ್ಲಿದ್ದರು. ಶ್ರೀಪಾದ ಭಟ್ಟರನ್ನು ಗೌರವಿಸಿ ಅಭಿನಂದಿಸಿದರು.