ತೀರ್ಥಹಳ್ಳಿ ತಾಲೂಕಲ್ಲಿ ಅದ್ದೂರಿ ಲಕ್ಷ್ಮಿ ಪೂಜೆ
– ಅಂಗಡಿಗಳ ಪೂಜೆಗಳಲ್ಲಿ ಸಂಭ್ರಮದಿಂದ ಮಿಂದೆದ್ದ ಜನತೆ
– ಪ್ರತಿ ಅಂಗಡಿಗಳಿಗೂ ಅಲಂಕಾರ, ಪಟ್ಟಣದಲ್ಲಿ ಬೆಳಕಿನ ಅಲಂಕಾರ
– ಸರ್ಕಾರಿ ಕ್ರೀಡಾಂಗಣದಲ್ಲಿ ಪಟಾಕಿ ಅಂಗಡಿಗಳ ಝಲಕ್
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ಪಟ್ಟಣದಲ್ಲಿ ಸಂಭ್ರಮದ ದೀಪಾವಳಿ ಹಬ್ಬ ಸಡಗರದಿಂದ ಆಚರಣೆಯಾಗುತ್ತಿದೆ. ಈ ನಡುವೆ ಲಕ್ಷ್ಮಿ ಪೂಜೆಯನ್ನು ತಮ್ಮ ತಮ್ಮ ವಾಹನಗಳು ಹಾಗೂ ಅಂಗಡಿಗಳನ್ನು ಪೂಜೆ ಮಾಡುವ ಮೂಲಕ ಜನರು ಸಂಭ್ರಮದಿಂದ ಪೂಜೆ ಮಾಡಿದ್ದಾರೆ. ಗುರುವಾರ ಹಾಗೂ ಶುಕ್ರವಾರ ಎರಡು ದಿನಗಳ ಕಾಲ ಕೆಲವು ಕಡೆ ಲಕ್ಷ್ಮಿ ಪೂಜೆ ಮಾಡಲಾಗುತ್ತಿದೆ. ಈಗಾಗಲೇ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಜನ ಕಳೆಯುತ್ತಿದ್ದಾರೆ.
– ಪಟಾಕಿ ಅಂಗಡಿಗಳಲ್ಲೂ ಕೂಡ ಮುಗಿಬಿದ್ದ ಜನತೆ
ತೀರ್ಥಹಳ್ಳಿ ಸರ್ಕಾರಿ ಕ್ರೀಡಾಂಗಣದಲ್ಲಿ ಪಟಾಕಿ ಅಂಗಡಿಗಳು ಕೂಡ ಜನರಿಂದ ಫುಲ್ ರಶ್ ಆಗಿದ್ದೆ. ದೀಪಾವಳಿ ಹಬ್ಬಕ್ಕೆ ಈಗಾಗಲೇ ಪಟಾಕಿ ಖರೀದಿಸಿದ್ದು, ಇನ್ನೂ ಕೂಡ ಖರೀದಿ ಜೋರಾಗಿದೆ. ಪಟ್ಟಣದ ಪಾಪಣ್ಣ ಸೌಂಡ್ಸ್, ಚಾಮುಂಡೇಶ್ವರಿ ಪಟಾಕಿ ಅಂಗಡಿ, ಪೃಥ್ವಿ ಪಟಾಕಿ ಅಂಗಡಿ ಸೇರಿದಂತೆ ಅನೇಕ ಪಟಾಕಿ ಅಂಗಡಿಗಳು ಜನರಿಗೆ ರಿಯಾಯಿತಿ ದರದಲ್ಲಿ ಪಟಾಕಿಗಳನ್ನ ನೀಡುತ್ತಿವೆ. ಪಟಾಕಿ ಖರೀದಿ ಮಾಡುವವರು ಸ್ಥಳಕ್ಕೆ ಭೇಟಿ ನೀಡಬಹುದು. ಇನ್ನು ತೀರ್ಥಹಳ್ಳಿ ಪಟ್ಟಣದಲ್ಲಿ ಬಹುತೇಕ ಕಟ್ಟಡಗಳಿಗೆ ಬೆಳಕಿನ ಅಲಂಕಾರ ಮಾಡಲಾಗಿದ್ದು, ತೀರ್ಥಹಳ್ಳಿ ಪಟ್ಟಣ ಸುಂದರವಾಗಿ ಕಾಣುತ್ತಿದೆ.