ತೀರ್ಥಹಳ್ಳಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ
– ಮೂರು ಜನರಿಗೆ ಗೌರವ: ಮಕ್ಕಳ ಶಿಸ್ತಿನ ಮೆರವಣಿಗೆ
– ಕನ್ನಡ ಉಳಿಸಲು ಕರೆ ನೀಡಿದ ನಾಯಕರು
NAMMUR EXPRESS NEWS
ತೀರ್ಥಹಳ್ಳಿ: ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಅದ್ದೂರಿ 69ನೇಯ ಕನ್ನಡ ರಾಜ್ಯೋತ್ಸವ ಇಂದು ಬೆಳಗ್ಗೆ ಶಾಲಾ ಮಕ್ಕಳ ಮತ್ತು ಗಣ್ಯರು ಕನ್ನಡ ರಾಜ್ಯೋತ್ಸವದ ಮೆರವಣಿಗೆಯನ್ನು ನಡೆಸಿ ನಂತರ ಮೆರವಣಿಗೆಯು ಜೂನಿಯರ್ ಕಾಲೇಜ್ ಮೈದಾನಕ್ಕೆ ಬಂದು ತಲುಪಿ, ಗಣ್ಯರಿಂದ ಧ್ವಜಾರೋಹಣವನ್ನು ನೆರವೇರಿಸಲಾಯಿತು.
ತಾಲೂಕು ಪಂಚಾಯಿತಿಯ ದಂಡಾಧಿಕಾರಿ ರಂಜಿತ್ ಎಸ್ ಅವರು ಕನ್ನಡ ಧ್ವಜದ ಸಂದೇಶವನ್ನು ನೀಡಿದರು. ನಂತರ ಯು. ಆರ್. ಅನಂತಮೂರ್ತಿ ಶಾಲೆಯ ಸಭಾಂಗಣದಲ್ಲಿ, ಸಭಾ ಕಾರ್ಯಕ್ರಮವನ್ನು ಕ್ಷೇತ್ರ ಶಾಸಕರಾದ ಆರಗ ಜ್ಞಾನೇಂದ್ರ, ವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ, ಸಾಹಿತ್ಯ ಕ್ಷೇತ್ರದಲ್ಲಿ ಕೊಡುಗೆ ನೀಡಿದ ಶ್ರೀಮತಿ ಉಮಾದೇವಿ ಊರಾಳ್, ಮತ್ತು ತೀರ್ಥಹಳ್ಳಿ ಸಾರ್ವಜನಿಕ, ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸುವ ದಯಾನಂದ್, ಹಾಗೂ ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿರುವ ಎಚ್. ಕೆ. ರಾಘವೇಂದ್ರ ಈ ಮೂರು ಜನರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಎಂ. ಎ.ಡಿ.ಬಿ. ಅಧ್ಯಕ್ಷ ಡಾ.ಆರ್. ಎಂ.ಮಂಜುನಾಥ ಗೌಡ ಮಾತನಾಡಿ ಮಕ್ಕಳು ಇಂಗ್ಲಿಷ್ ವ್ಯಾಮೋಹದ ನಡುವೆ ಕನ್ನಡವನ್ನು ಮರೆಯುತ್ತಿದ್ದಾರೆ. ಕನ್ನಡದ ಇತಿಹಾಸವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ತಿಳಿದುಕೊಳ್ಳಲೇಬೇಕು ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತುಲ್ಲಾ ಅಸಾದಿ, ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಕೋರಿ, ತೀರ್ಥಹಳ್ಳಿ ಪಟ್ಟಣದಲ್ಲಿ ವ್ಯವಹಾರ ನಡೆಸುವ ಎಲ್ಲಾ ಅಂಗಡಿ ಮುಗ್ಗಟ್ಟುಗಳಲ್ಲಿ ಕನ್ನಡದ ನಾಮಫಲಕ ಕಡ್ಡಾಯವಾಗಿ ಅಳವಡಿಸಬೇಕೆಂದು ಪಟ್ಟಣ ಪಂಚಾಯಿತಿಯ ವತಿಯಿಂದ ಕರೆ ಕೊಟ್ಟಿದ್ದೇವೆ. ಪಟ್ಟಣ ಪಂಚಾಯತಿ ವತಿಯಿಂದಲೂ ಸಹ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವನ್ನು ನವೆಂಬರ್ 30ರವರೆಗೆ ನಡೆಸಲಾಗುವುದು ಎಂದರು.
69ನೇ ಕನ್ನಡ ರಾಜ್ಯೋತ್ಸವದ ಅಧ್ಯಕ್ಷತೆಯನ್ನು ಶಾಸಕರಾದ ಆರಗ ಜ್ಞಾನೇಂದ್ರ, ಮುಖ್ಯ ಅತಿಥಿಗಳಾಗಿ ಆರ್ ಎಂ ಮಂಜುನಾಥ್ ಗೌಡ, ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಸಚೀಂದ್ರ ಹೆಗಡೆ, ತಾಲೂಕಿನ ತಹಶೀಲ್ದಾರ್ ರಂಜಿತ್, ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ರೆಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷರಾದ ಗೀತಾ ರಮೇಶ್, ಪಟ್ಟಣ ಪಂಚಾಯಿತಿಯ ಸದಸ್ಯರಾದ ರತ್ನಾಕರ್ ಶೆಟ್ಟಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಮೇಶ್ ಶೆಟ್ಟಿ, ಕರವೇ ಸುರೇಂದ್ರ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುಧಾ, ಉಪ ಪ್ರಾಂಶುಪಾಲರು, ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಸತ್ಯಮೂರ್ತಿ, ಮಂಜುನಾಥ್ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಶೈಲಾ, ಇವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.