ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘಕ್ಕೆ ರಾಘವೇಂದ್ರ ಎಸ್ ಸಾರಥ್ಯ
– ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆ: 30 ಮಂದಿ ನೂತನ ನಿರ್ದೇಶಕರು ಆಯ್ಕೆ
– ಖಜಾಂಚಿಯಾಗಿ ಮಂಜುನಾಥ ಎಂ ಸಿ, ಯಲ್ಲಪ್ಪ ವಡ್ಡರ್ ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆ
NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತೀರ್ಥಹಳ್ಳಿ ತಾಲೂಕು ಘಟಕದ ನೂತನ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಚುನಾವಣೆ ನಡೆದು ಇದೀಗ ತಾಲೂಕಿನ ಹೆಮ್ಮೆಯ ಅಧಿಕಾರಿ, ತಾಲೂಕು ಪಂಚಾಯತ್ ಮ್ಯಾನೇಜರ್ ಎಸ್ ರಾಘವೇಂದ್ರ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ತಮ್ಮ ವ್ಯಕ್ತಿತ್ವದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದ ರಾಘವೇಂದ್ರ ಅವರಿಗೆ ಎಲ್ಲಾ ಸರ್ಕಾರಿ ನೌಕರರು ಅಭಿನಂದನೆ ಸಲ್ಲಿಸಿದ್ದಾರೆ.
34 ಇಲಾಖೆ 1400 ಮಂದಿಯಿಂದ 30 ನಿರ್ದೇಶಕರ ಆಯ್ಕೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ನಡೆಯುವ ಚುನಾವಣೆಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸರಿ ಸುಮಾರು 1400 ಜನ ನೌಕರರು ಕ್ರಮವಾಗಿ ತಮ್ಮ 34 ಇಲಾಖೆಯಲ್ಲಿನ 30 ಜನ ನಿರ್ಧೇಶಕರನ್ನು ಆಯ್ಕೆಯನ್ನು ಮಾಡಿ ಅದಾದ ಬಳಿಕ ನಡೆಯುವ ನೌಕರರ ಸಂಘದ ಅಧ್ಯಕ್ಷರ ಹುದ್ದೆಯ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ತೀರ್ಥಹಳ್ಳಿ ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕರು, ಮಲ್ನಾಡ್ ಕ್ಲಬ್ ಕಾರ್ಯದರ್ಶಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಘವೇಂದ್ರ ಎಸ್ ಹಾಗೂ ಖಜಾಂಚಿಯಾಗಿ ಮಂಜುನಾಥ ಎಂ ಸಿ, ಎಲ್ಲಪ್ಪ ವಡ್ಡರ್ ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆ ಆಗಿದ್ದು, ಇವರಿಗೆ ಅಭಿನಂದನೆಗಳು
ನೂತನ ನಿರ್ದೇಶಕರು ಯಾರು ಯಾರು?
ಕೃಷಿ ಇಲಾಖೆ ಕೌಶಿಕ್ ಎನ್ ಆರ್, ಪಶುಪಾಲನೆ ಇಲಾಖೆ ಪ್ರತಿಮಾ ವೈ ಎ, ಕಂದಾಯ ಇಲಾಖೆ ಸತ್ಯಮೂರ್ತಿ ಕೆ ಎಸ್, ಸುಧೀರ ಬಿ ಎ, ಲೋಕೋಪಯೋಗಿ ಇಲಾಖೆ ವೆಂಕಟೇಶ್ ಹೆಚ್, ಪಂಚಾಯತ್ ರಾಜ್ ಇಲಾಖೆ ಅಣ್ಣಪ್ಪ ಹೆಚ್ ಕೆ, ಪ್ರಾಥಮಿಕ ಶಾಲೆಯಿಂದ ಮಂಜುನಾಥ ಕೆ ಆರ್, ಮಂಜುನಾಥ್ ಎಂ ಸಿ, ಮೂಕಾಂಬಿಕ, ಪ್ರೌಢಶಾಲಾ ವಿಭಾಗದಿಂದ ಬೋಜರಾಜ ಬಿ ಟಿ, ವೀರೇಶ್ ಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಅಕ್ಷಯ್ ಟಿ ಎಸ್, ಪದವಿಪೂರ್ವ ಕಾಲೇಜುಗಳಿಂದ ಡಾ ದೇವರಾಜ್ ಹೆಚ್ ಎಲ್, ಸಮಾಜ ಕಲ್ಯಾಣ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಹರ್ಷ ಎಸ್ ರಮೇಶ್ ಡಿ, ಅರಣ್ಯ ಇಲಾಖೆಯಿಂದ ಯಲ್ಲಪ್ಪ ವಡ್ಡರ್, ಆರೋಗ್ಯ ಇಲಾಖೆ ರಾಘವೇಂದ್ರ ಸಿ ಡಿ, ಸತೀಶ್ ಟಿ ವಿ, ಗೀತಾ ಎಲ್, ಉಷಾ ಕೆ ಡಿ, ತೋಟಗಾರಿಕೆ ಇಲಾಖೆ ಮತ್ತು ರೇಷ್ಮೆ ಇಲಾಖೆ ನಾಗೇಶ್ ಎನ್, ಖಜಾನೆ ಇಲಾಖೆ ಸಂಪತ್ ಕುಮಾರ್ ಎನ್, ಭೂಮಾಪನ ಇಲಾಖೆ ಸುಷ್ಮಾ ಎಸ್ ಪಿ, ನ್ಯಾಯಾಂಗ ಇಲಾಖೆಯಿಂದ ಪ್ರಮೋದ್ ಕುಮಾರ್ ಎನ್ ಎಂ, ಗ್ರಾಮೀಣಾಭಿವೃದ್ದಿ, ರಾಘವೇಂದ್ರ ಎಸ್ ಉಮೇಶ್ ಎಲ್ ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಪವಿತ್ರ ಹೆಚ್ ಸಿ, ಅಬಕಾರಿ ಇಲಾಖೆ ಮಲ್ಲಿಕ ಕೆ ಜಿ, ಆಯುಷ್ ಇಲಾಖೆ ಡಾ.ರವಿಶಂಕರ ಉಡುಪ ಹಾಗೂ ITI ನಿಂದ ದೇವೇಂದ್ರಪ್ಪ ಟಿ ಡಿ ಆಯ್ಕೆ ಆಗಿದ್ದಾರೆ.