ದೇಗುಲಗಳಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ!
– ಕಾರ್ತಿಕ ಮಾಸದಲ್ಲಿ ಎಲ್ಲೆಡೆ ದೀಪ ಬೆಳಗಿ ವಿಶೇಷ ಪೂಜೆ
– ದೀಪಾರಾಧನೆ ಮಾಡಿದರೆ ಐಶ್ವರ್ಯ, ಸಂಪತ್ತು, ಆರೋಗ್ಯ ಭಾಗ್ಯ
NAMMUR EXPRESS NEWS
ಕಾರ್ತಿಕ ಮಾಸದ ಮೊದಲ ದಿನವೇ ದೀಪಾವಳಿ ಮತ್ತು ಎರಡನೆಯ ದಿನ ಗೋಪೂಜೆ. ತಿಂಗಳಾಂತ್ಯದವರೆಗೂ ಮನೆ-ಮಂದಿರಗಳಲ್ಲಿ ದೀಪೋತ್ಸವ, ಭಜನೆ, ಸಂಕೀರ್ತನೆಗಳು ನಡೆಯುವ ಸುಕಾಲ .ಈ ಮಾಸವು ಹರಿಸ್ಮರಣೆ, ಇಂದ್ರಿಯನಿಗ್ರಹ, ಗುರುಸೇವೆ, ತುಳಸೀಪೂಜೆ, ದೀಪಾರಾಧನೆ, ಅನ್ನದಾನ, ಉಪವಾಸಾದಿ ವ್ರತಾಚರಣೆಗೆ ಪವಿತ್ರವಾದ ಕಾಲವಾಗಿದೆ ಹರಿಯು ಸಂಪ್ರೀತನಾದ ಕಾಲವಾಗಿದ್ದು ತುಳಸೀ ಪೂಜೆಯನ್ನೂ ಇದೇ ಮಾಸದಲ್ಲಿ ಮಾಡಲಾಗುತ್ತದೆ.
ಈ ಮಾಸದಲ್ಲಿ ನಡೆಯುವ ದೀಪೋತ್ಸವಗಳು ದೇವರನ್ನು ಆರಾಧಿಸುವ ಮಾರ್ಗವಾಗಿ ಕಂಡುಬಂದರೂ ನಮ್ಮ ಮನಸ್ಸನ್ನು ಲೌಕಿಕ ಚಿಂತೆಗಳಿಂದ ದೂರವಿರಿಸಿ, ಮನಸ್ಸಿಗೆ ಮುದ ನೀಡುತ್ತದೆ . ದೀಪೋತ್ಸವದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ
ದೀಪೋತ್ಸವವು ಪ್ರಾಚೀನ ಹಿಂದೂ ಪುರಾಣಗಳಲ್ಲಿ ಆಚರಣೆಯಲ್ಲಿದೆ 14 ವರ್ಷಗಳ ವನವಾಸದ ಅಂತ್ಯ ಮತ್ತು ರಾವಣನ ಮೇಲೆ ವಿಜಯದ ನಂತರ ಭಗವಾನ್ ರಾಮನು ಅಯೋಧ್ಯೆಗೆ ಹಿಂದಿರುಗಿದ ಸ್ಮರಣಾರ್ಥವಾಗಿದೆ. ಅವರ ಮರಳುವಿಕೆಯನ್ನು ಜನರು ಮಣ್ಣಿನ ದೀಪಗಳ ಸಾಲುಗಳನ್ನು ಬೆಳಗಿಸುವ ಮೂಲಕ ಆಚರಿಸಿ ಸಂಭ್ರಮಿಸಿದರು ಎಂಬ ಪ್ರತೀತಿ ಇದೆ. ದೀಪಾವಳಿಯಿಂದ ದೇವಾಲಯಗಳಲ್ಲಿ ದೀಪೋತ್ಸವ ನಡೆಯುವುದು ಸಾಮಾನ್ಯ ದೀಪೋತ್ಸವ” ಎಂದರೆ “ದೀಪಗಳ ಹಬ್ಬ” ಬೆಳಕಿನ ಹಬ್ಬ ಕತ್ತಲೆಯ ಮೇಲೆ ಬೆಳಕು, ಕೆಟ್ಟದ್ದರ ಮೇಲೆ ಒಳ್ಳೆಯದು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಸಂಕೇತಿಸುತ್ತದೆ.
ಪ್ರತಿದಿನ ಮನೆಗಳಲ್ಲಿ ಎಣ್ಣೆಯ ದೀಪಗಳನ್ನು ಬೆಳಗಿಸಲಾಗುತ್ತದೆ ಹಿಂದೂ ಪಂಚಾಂಗದಲ್ಲಿ ಚಳಿಗಾಲದಲ್ಲಿ ಆರಂಭವಾಗುವ ಕಾರ್ತಿಕ ಮಾಸ ಅತ್ಯಂತ ಪವಿತ್ರ ಮತ್ತು ಶ್ರೇಷ್ಠ ಮಾಸ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ದೀಪಾರಾಧನೆ ಮಾಡಿದರೆ ಐಶ್ವರ್ಯ, ಸಂಪತ್ತು, ಆರೋಗ್ಯ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಈ ಕಾರಣಕ್ಕೆ ಪ್ರಸಿದ್ಧ ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಕೊನೆಯ ದಿನ ಸಾರ್ವಜನಿಕ ದೀಪೋತ್ಸವ ಇರುತ್ತದೆ ಇನ್ನು ಕೆಲ ದೇಗುಲಗಳಲ್ಲಿ ಲಕ್ಷ ದೀಪೋತ್ಸವ ಗಳಂತಹ ವಿಭಿನ್ನ ಮಾದರಿಯ ದೀಪೋತ್ಸವವನ್ನು ಸಹ ಮಾಡುತ್ತಾರೆ.
ದೇಗುಲಗಳಲ್ಲಿ ವಿಶೇಷ ದೀಪೋತ್ಸವ ಮನೆಗಳು, ದೇವಸ್ಥಾನಗಳು ಮತ್ತು ನದಿ ತೀರಗಳಲ್ಲಿ ದೀಪಗಳನ್ನು ಬೆಳಗಿಸಿ ಜನ ದೀಪೋತ್ಸವವನ್ನು ಸಂಭ್ರಮಿಸುತ್ತಾರೆ. ದೀಪಗಳ ಅಲಂಕಾರ ಮತ್ತು ರಂಗೋಲಿಗಳಿಂದ ದೇವಾಲಯ ಸಿಂಗಾರಗೊಂಡಿರುತ್ತದೆ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಮಾಡಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ನಂತರ ದೀಪೋತ್ಸವ ಆರಂಭಿಸಲಾಗುತ್ತದೆ ದೇವಾಲಯಗಳು ಅಸಂಖ್ಯಾತ ದೀಪಗಳಿಂದ ಅಲಂಕರಿಸಲ್ಪಟ್ಟು ದೇವಾಲಯಗಳಲ್ಲಿ ದೀಪಗಳ ಸಾಲುಗಳನ್ನು ಬೆಳಗಿಸಲಾಗುತ್ತದೆ,ಸಾವಿರಾರು ದೀಪಗಳ ಬೆಳಕು ಕತ್ತಲೆಯಲ್ಲಿ ನಮ್ಮನ್ನು ಕೈ ಹಿಡಿದು ನಡೆಸುವ ದಾರಿದೀಪದಂತೆ ಗೋಚರಿಸುತ್ತದೆ ಮಬ್ಬುಗತ್ತಲಲ್ಲಿ ಕಾಣುವ ದೀಪದ ಬೆಳಕೆ ನೋಡಲು ಬಲು ಸುಂದರ .